janadhvani

Kannada Online News Paper

ಕೊರೋನ ನಿಯಂತ್ರಣಕ್ಕೆ ಬರುವ ತನಕ ಶಾಲೆಗಳನ್ನು ತೆರೆಯದಿರಿ- ಎಸ್ಕೆಎಸ್ಸೆಸ್ಸೆಫ್

ಮಂಗಳೂರು: ಪ್ರಸ್ತುತ ಕೋವಿಡ್ 19 ಕರಿನೆರಳಿನಲ್ಲಿ ಶಾಲೆಗಳ ಪುನಾರಂಭದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು
ಈ ಸೋಂಕು ನಿಯಂತ್ರಣಕ್ಕೆ ಬರುವ ತನಕ ಅಥವಾ ಅದಕ್ಕೆ ಪ್ರಾಥಮಿಕ ಔಷದಿ ಕಂಡು ಹಿಡಿಯುವ ತನಕ ಶಾಲೆಯನ್ನು ಪುನಾರಂಭಿಸುವುದನ್ನು ಮುಂದೂಡುವಂತೆ ಆಗ್ರಹಿಸಿ
ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಜಿಲ್ಲಾ ಸಮಿತಿ ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಕೋವಿಡ್ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿದ್ದು ಜನ ಸಾಮಾನ್ಯರ ಮನದಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಪ್ರಸ್ತುತ ಕೋವಿಡ್-19 ಕರಿ ನೆರಳಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಬಹಳಷ್ಟು ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ ಕೋವಿಡ್-19 ಕೊರೋನಾ ಸೋಂಕು ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಮ್ಮ ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮ್ಮ ಎಳೆಯ ಮಕ್ಕಳನ್ನು ಅಪಾಯಕ್ಕೆ ತಳ್ಳಿ ಹಾಕುವುದು ಸರಿಯಲ್ಲ. ನಮ್ಮ ಮಕ್ಕಳನ್ನು ಪ್ರಯೋಗ ವಸ್ತುಗಳಾಗಿ ಉಪಯೋಗಸದಿರಿ ಎಂದು ಮನವಿ ಮಾಡಿದರು.

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಅಥವಾ ಅದಕ್ಕೆ ಪ್ರಾಥಮಿಕ ಔಷಧಿ ಕಂಡು ಹಿಡಿಯುವವರೆಗೆ ಶಾಲಾ ಪುನರಾರಂಭವನ್ನು ಮುಂದೂಡಬೇಕು. ಪಾಳಿಯಲ್ಲಿ ನಡೆಸುವ ಶಾಲೆಗಳು, ಭಯದ ವಾತಾವರಣದಲ್ಲಿ ನಡೆಸುವ ತರಗತಿಗಳು, ಎಳೆಯ ಮಕ್ಕಳಿಗೆ ಮಾರಕವಾಗಬಹುದು. ಇದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂದು
ಎಸ್ಕೆ ಎಸ್ಸೆಸ್ಸೆಫ್ ನಾಯಕ ಇಕ್ಬಾಲ್ ಬಾಳಿಲ ತಿಳಿಸಿದರು. ಮಿಂಚಿ ಹೋದ ನಂತರ ಚಿಂತಿಸಿ ಫಲವಿಲ್ಲ. ಆದ್ದರಿಂದ ಶಾಲಾ ಆರಂಭವವನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕೆಂದು ಹಾಗೂ ನಮ್ಮ ಮನವಿಯನ್ನು ಪುರಸ್ಕರಿಸಬೇಕು ಎಂದು ರಾಜ್ಯ ಶಿಕ್ಷಣ ಸಚಿವರನ್ನು ಒತ್ತಾಯಿಸಲಾಯಿತು.

ಮನವಿ ನೀಡಿದ ಬಳಿಕ ಶಿಕ್ಷಣಾಧಿಕಾರಿಗಳ ಜೊತೆ
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಬಾಳಿಲ, ಎಸ್ಕೆ,ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಟ್ರೆಂಡ್ ಜಲ್ಲಾಧ್ಯಕ್ಷ ಅಬ್ದುಲ್ ಸಮದ್ ಸಾಲೆತ್ತೂರು ಟ್ರೆಂಡ್ ಜಿಲ್ಲಾ ಕನ್ವಿನರ್ ಸಲಾಂ ಕೈಕಂಬ, ಹಾಗೂ ಇಸ್ರಾರ್ ಗೂಡಿನಬಳಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com