ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ‘ಏರ್ ಇಂಡಿಯಾ’ ಯಾತ್ರಿಕರ ಲಗೇಜ್ ಲೂಟಿ

ಕೋಝಿಕ್ಕೋಡ್: ಕರಿಪ್ಪೂರ್ ವಿಮಾನದಲ್ಲಿ ದಿನನಿತ್ಯ ಯಾತ್ರಿಕರ ಸಾಮಗ್ರಿಗಳು ಕಳವಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಸೋಮವಾರ ಬೆಳಗ್ಗೆ ದುಬೈಯಿಂದ ಏರ್ ಇಂಡಿಯಾ ದಲ್ಲಿ ಬಂದಿಳಿದ ಐವರ ಬ್ಯಾಗ್‌ಗಳಿಂದ ಪಾಸ್‌ಪೋರ್ಟ್ ಸಹಿತ ಅಮೂಲ್ಯ  ವಸ್ತುಗಳು ಕಳವಾಗಿರುವ ಬಗ್ಗೆ ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಕೋಲಾಹಲಗಳ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದ ಮೂಲಕ ವೈರಲಾದ ಕಾರಣ ಪ್ರಕರಣವು ಹೊರದೇಶಗಳಲ್ಲಿ ಬಹಿರಂಗವಾಗಿದೆ. ಪಾಸ್‌ಪೋರ್ಟ್, ಹಣ, ಬಂಗಾರ, ಮೊಬೈಲ್, ಅಮೂಲ್ಯವಾದ ವಾಚುಗಳು ಮುಂತಾದ ವಸ್ತುಗಳು ನಷ್ಟವಾಗಿರುವುದಾಗಿ ದೂರಲಾಗಿದೆ. ಲಗೇಜುಗಳು ಬಿಚ್ಚಿದ ರೂಪದಲ್ಲಿ ಕಂಡು ಬಂದಾಗ ಯಾತ್ರಿಕರು ವಿಮಾನ ನಿಲ್ದಾನದ ಒಳಗೆ ಪ್ರತಿಭಟಿಸಿದ್ದಾರೆ.

ವಸ್ತುಗಳನ್ನು ಕಳಕೊಂಡವರು ಏರ್ ಇಂಡಿಯಾ ಅಧಿಕಾರಿಗಳನ್ನೂ, ಕಸ್ಟಮ್ಸ್ ಅಧಿಕಾರಿಗಳನ್ನೂ ಭೇಟಿಯಾಗಿ ದೂರು ನೀಡಲಾಯಿತಾದರೂ ಅವರು ಕಿವಿಗೊಳ್ಳಲಿಲ್ಲ ಎನ್ನಲಾಗಿದೆ. ಕೊನೆಗೆ ಏರ್ಪೋರ್ಟ್ ಮ್ಯಾನೇಜರ್ ಗೆ ದೂರು ನೀಡಿ ಯಾತ್ರಿಕರು ಹೊರನಡೆದಿದ್ದಾರೆ. ಏರ್ ಇಂಡಿಯಾ ಅಧಿಕಾರಿಗಳು ದುಬೈ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದು,ದುಬೈನಲ್ಲಿ ಈ ಕಳವು ನಡೆದಿರಬಹುದೆಂದು ಆರೋಪಿಸಿದ್ದಾರೆ. ಕಸ್ಟಮ್ಸ್ ಕೂಡ ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!