ಸಾರ್ವಜನಿಕ ಕ್ಷಮಾಧಾನ: ಎಪ್ರಿಲ್ 22 ರ ವರೆಗೆ ವಿಸ್ತರಣೆ- ಕುವೈಟ್ ಗೃಹ ಸಚಿವಾಲಯ

ಕುವೈಟ್ ಸಿಟಿ(ಜನಧ್ವನಿ): ದೇಶದಲ್ಲಿ ದಾಖಲೆ ಇಲ್ಲದೆ ಅನಧಿಕೃತವಾಗಿ ವಾಸವಿರುವ ವಿದೇಶಿಗಳಿಗೆ ದಂಡ ಅಥವಾ ಶಿಕ್ಷೆಯನ್ನು ವಿಧಿಸದೇ ತಮ್ಮ ದಾಖಲೆಯನ್ನು ನವೀಕರಿಸಿ ದೇಶದಲ್ಲಿ ಮುಂದುವರಿಯಲು ಇಲ್ಲವೇ ದೇಶವನ್ನು ತೊರೆಯಲು ವಿಧಿಸಲಾದ ಸಾರ್ವಜನಿಕ ಕ್ಷಮಾಧಾನವನ್ನು ಏಪ್ರಿಲ್ 22 ರವರೆಗೆ ವಿಸ್ತರಿಸಲಾಗಿದೆ ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಮೊದಲು ಈ ತಿಂಗಳ 22 ರವರೆಗಿನ ಸಾರ್ವಜನಿಕ ಕ್ಷಮಾಧಾನ ಅವಧಿಯನ್ನು ಹೊಂದಿತ್ತು. ದೇಶದಲ್ಲಿ ಸುಮಾರು ಒಂದು ಲಕ್ಷದ ಐವತ್ತನಾಲ್ಕು ಸಾವಿರ ಮಂದಿ ಅನಧಿಕೃತವಾಗಿ ವಾಸವಿರುವುದಾಗಿ ಸಚಿವಾಲಯ ಹೇಳಿದೆ.ಇದರಲ್ಲಿ ಮೂವತ್ತು ಸಾವಿರಕ್ಕಿಂತ ಮಿಕ್ಕವರು ಕ್ಷಮಾಧಾನದ ಉಪಯೋಗವನ್ನು ಪಡೆದಿದ್ದಾರೆ ಎಂದು ಅಧಿಕೃತರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಉಳಿದಿರುವ ಕಾನೂನು ಉಲ್ಲಂಘಕರಿಗೂ ದಾಖಲೆಯನ್ನು ನವೀಕರಿಸಲು ಇಲ್ಲವೇ ದೇಶವನ್ನು ತೊರೆಯಲು  ಕಾಲಾವಕಾಶ ನೀಡಬೇಕೆಂದು ಗೃಹ ಮಂತ್ರಿಗೆ ಸಂಬಂಧಪಟ್ಟ ಸಚಿವಾಲಯ ಪತ್ರಬರೆದಿತ್ತು.ಇದರ ಆಧಾರದಲ್ಲಿ ಇಂದು ಸಚಿವರ ಆದೇಶ ಹೊರಬಂದಿದೆ.

ಮೂವತ್ತು ಸಾವಿರದಷ್ಟು ಭಾರತೀಯರು ಅನಧಿಕೃತವಾಗಿ ಕುವೈಟ್ ನಲ್ಲಿದ್ದು , ಔಟ್ ಪಾಸ್ ಗೆ  ಸಲ್ಲಿಸಿರುವ 9,000 ಅರ್ಜಿಯಲ್ಲಿ   7,000 ಔಟ್ ಪಾಸ್ ವಿತರಿಸಲಾಗಿದೆ ಎಂದು ಭಾರತೀಯ ದೂತವಾಸ ಕೇಂದ್ರ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!