ಮಂಗಳೂರು:ಬೆಂಗ್ರೆ ಪ್ರದೇಶದಲ್ಲಿ ನಡೆದ ಕೋಮು ಸಂಘರ್ಷ ಖಂಡನೀಯ-ಶಾಸಕ ಜೆ.ಆರ್. ಲೋಬೊ‌

ಮಂಗಳೂರು: ನಗರದ ಬೆಂಗ್ರೆ ಪ್ರದೇಶದಲ್ಲಿ ಘರ್ಷಣೆ ನಡೆದಿರುವುದು ಖಂಡನೀಯ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಜೆ.ಆರ್. ಲೋಬೊ‌ ಹೇಳಿದರು. ಉಡುಪಿಯ ಮಲ್ಪೆ ತೀರದಲ್ಲಿ ನಡೆದ ಮೀನುಗಾರರ ಸಮಾವೇಶ ಮುಗಿಸಿ‌ ಹಿಂದಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದು, ಇದರಿಂದ ಘರ್ಷಣೆ ನಡೆದಿತ್ತು. ತೋಟ ಬೆಂಗ್ರೆ, ಕಸಬಾ ಬೆಂಗ್ರೆ ಜನರು‌ ಸೇರಿ ಸೌಹಾರ್ದದಿಂದ ಅದನ್ನು ಪರಿಹರಿಸಿದ್ದರು ಎಂದು‌‌ ಲೋಬೊ‌ ತಿಳಿಸಿದರು.

 

‘ತೋಟ ಬೆಂಗ್ರೆಯ ಮಸೀದಿಯೊಂದಕ್ಕೆ ರಾತ್ರಿ ಸೋಡಾ ಬಾಟಲಿ ಬಿಸಾಡಲಾಗಿದ್ದು, ಕಿಟಕಿಗೆ  ಹಾನಿಯಾಗಿದೆ. ಮತ್ತೊಂದು ಮನೆಗೆ ಕಲ್ಲು ತೂರಲಾಗಿದ್ದು, ಅಲ್ಲಿದ್ದ ವಾಹನ‌ ಜಖಂಗೊಂಡಿದೆ. ಘಟನೆಯಲ್ಲಿ ನಾಲ್ಕೈದು ಮಂದಿಗೆ ಗಾಯವಾಗಿದ್ದು, ಪೊಲೀಸ್ ವಾಹನಕ್ಕೂ ಹಾನಿಯಾಗಿದೆ. ಇದು ನನಗೆ ನೋವು ತಂದಿದೆ’ ಎಂದು ಲೋಬೊ ತಿಳಿಸಿದರು.

ಎರಡೂ ಪ್ರದೇಶದ ಜನರು‌‌ ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಸೌಹಾರ್ದ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಘರ್ಷಣೆಗೆ ಕಾರಣವಾದವರು ಯಾರೇ ಆಗಲಿ‌ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಇದರಲ್ಲಿ‌ ಯಾವುದೇ ರಾಜಿ‌ ಮಾಡುವುದಿಲ್ಲ‌‌ ಎಂದು ಅವರು ಹೇಳಿದರು.ಇದರಲ್ಲಿ ರಾಜಕೀಯ ಮಾಡುವುದಿಲ್ಲ.‌ ರಕ್ತ ಸುರಿಸಿ‌ ಚುನಾವಣೆ ಮಾಡುವುದು ಬೇಕಿಲ್ಲ. ಶಾಂತಿ, ಸೌಹಾರ್ದ ನೆಲೆಸಬೇಕು. ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು. ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ‌ ಎಂದೂ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!