janadhvani

Kannada Online News Paper

ಮೇ 25ರಿಂದ ದೇಶೀಯ ವಿಮಾನ ಆರಂಭ- ಮಾರ್ಗಸೂಚಿ ಪ್ರಕಟ

ದೆಹಲಿ: ದೇಶೀಯ ವಿಮಾನಗಳ ಹಾರಾಟ ಮೇ 25ರಿಂದ ಆರಂಭಗೊಳ್ಳಲಿದ್ದು, ನೀವು ಪಾಲಿಸಬೇಕಾದ ಕಟ್ಟುನಿಟ್ಟಿನ ಸೂಚನೆಗಳು ಇಲ್ಲಿವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ಸೇತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯ ಎಂದು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಘೋಷಣೆ ಮಾಡಿದೆ.

ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ ಥರ್ಮಲ್ ಸ್ಕ್ರೀನಿಂಗ್ ಮಾಡಿಸಬೇಕು.14 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ.

ದೇಶದಲ್ಲಿ ಕೊರೊನಾವೈರಸ್ ಹಬ್ಬುತ್ತಿದ್ದಂತೆ ಮಾರ್ಚ್ ತಿಂಗಳಿನಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಇದುವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ದಿನಾಂಕವನ್ನು ಅಂತಿಮಗೊಳಿಸಿಲ್ಲ.

ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿ

  • ಪ್ರಯಾಣಿಕನು ಹಸಿರು ಝೋನ್ ನಿಂದ ಎಂಬುದನ್ನು ಸಿಬ್ಬಂದಿಗಳು ಖಾತರಿ ಪಡಿಸಬೇಕು.
  • ವಿಮಾನ ನಿಲ್ದಾಣಕ್ಕೆ ಬರುವಾಗ ಥರ್ಮಲ್ ಸ್ಕ್ರೀನಿಂಗ್ ಝೋನ್ ಮೂಲಕ ಹಾದು ಹೋಗಬೇಕು.
  • ಆರೋಗ್ಯ ಸೇತು ಅಪ್ಲಿಕೇಷನ್ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡಿರಬೇಕು.14 ವರ್ಷದ ಒಳಗಿನವರಿಗೆ ಕಡ್ಡಾಯವಿಲ್ಲ.

(ಒಂದೊಮ್ಮೆ ಥರ್ಮಲ್ ಸ್ಕ್ರೀನಿಂಗ್ ಮಾಡುವಾಗ ಹಸಿರು ತೋರಿಸಿದೇ ಇದ್ದಲ್ಲಿ, ಅಥವಾ ಆರೋಗ್ಯ ಸೇತು ಅಪ್ಲಿಕೇಷನ್ ನಿಮ್ಮ ಬಳಿ ಇಲ್ಲದಿದ್ದಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ಇರುವುದಿಲ್ಲ.)

  • ವಿಮಾನ ಹೊರಡುವ 2 ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬರಬೇಕು.
  • ನೀವು ಪ್ರಯಾಣಿಸುವ ವಿಮಾನ ಹೊರಡಲು ನಾಲ್ಕು ಗಂಟೆ ಇರುವಾಗ ಮಾತ್ರ ಟರ್ಮಿನಲ್ ಬಿಲ್ಡಿಂಗ್ ಒಳಗೆ ಪ್ರವೇಶಕ್ಕೆ ಅನುಮತಿ.
  • ಪ್ರಯಾಣಿಕರಿಗಾಗಿ ಸರ್ಕಾರವು ಸಾರ್ವಜನಿಕ ಸಾರಿಗೆ, ಟ್ಯಾಕ್ಸಿ, ಏರ್‌ಲೈನ್ ಕ್ರ್ಯೂ ವ್ಯವಸ್ಥೆ ಮಾಡಬೇಕು.
  • ಕೇವಲ ಸ್ವಂತ ವಾಹನಗಳು ಅಥವಾ ಕೆಲವೇ ಕ್ಯಾಬ್‌ಗಳಿಗೆ ಮಾತ್ರ ಅವಕಾಶವಿದೆ.
  • ಪ್ರತಿಯೊಂದು ಪ್ರಯಾಣಿಕರು ಕೈಗವಸು, ಮಾಸ್ಕ್‌ ಧರಿಸಿರಲೇಬೇಕು.
  • ಗೃಹ ಸಚಿವಾಲಯದ ನಿರ್ದೇಶನದಂತೆ ವಿಮಾನ ಸಿಬ್ಬಂದಿ ಬಳಿ ಸ್ಯಾನಿಟೈಸರ್, ಪಿಪಿಇ ಕಿಟ್ ಇರಲೇಬೇಕು.
  • ಬೋರ್ಡಿಂಗ್ ಪಾಸ್ ಕೌಂಟರ್ ನಂತಹ ಸ್ಥಳಗಳಲ್ಲಿ ಫ್ಲೆಕ್ಸಿ ಗ್ಲಾಸ್ ಅಳವಡಿಸಿರಬೇಕು.
  • ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೊರ ಹೋಗುವ ಸಂದರ್ಭದಲ್ಲಿ ಅತ್ಯಗತ್ಯಕ್ಕಲ್ಲದೆ ಟ್ರಾಲಿಗಳ ವ್ಯವಸ್ಥೆ ಇರುವುದಿಲ್ಲ.
  • ಟರ್ಮಿನಲ್‌ನ ಎಲ್ಲಾ ಎಂಟ್ರಿ ಗೇಟ್‌ಗಳು ತೆರೆದಿರಬೇಕು.
  • ಟೆರ್ಮಿನಲ್ ಪ್ರವೇಶದ್ವಾರದಲ್ಲಿ ಪಾದರಕ್ಷೆಗಳನ್ನು ಸೋಂಕುರಹಿತಗೊಳಿಸಲು ಮ್ಯಾಟ್ ಬಳಸಬೇಕು
  • ಟರ್ಮಿನಲ್ ಬಿಲ್ಡಿಂಗ್ ಅಥವಾ ಲಾಂಜ್‌ಗಳಲ್ಲಿ ದಿನಪತ್ರಿಕೆ ಅಥವಾ ಮಾಸಪತ್ರಿಕೆಗಳಿರುವುದಿಲ್ಲ.
  • ಒಂದೊಮ್ಮೆ ವಿಮಾನ ಸಿಬ್ಬಂದಿಗೆ ಜ್ವರ ಅಥವಾ ಕಫವಿದ್ದರೆ ಅವರಿಗೆ ವಿಮಾನ ನಿಲ್ದಾಣದೊಳಗೆ ಪ್ರವೇಶವಿರುವುದಿಲ್ಲ.
  • ವಿಮಾನವು ಲ್ಯಾಂಡ್ ಆದ ಬಳಿಕ ತಂಡ ತಂಡವಾಗಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಗುತ್ತದೆ.

error: Content is protected !! Not allowed copy content from janadhvani.com