ಕೆಸಿಎಫ್ ಬವಾದಿ ಸೆಕ್ಟರ್ ವತಿಯಿಂದ ‘ಕೆಸಿಎಫ್ ಡೇ’ಆಚರಣೆ

ರಿಯಾದ್:ಕೆಸಿಎಫ್ ಬವಾದಿ ಸೆಕ್ಟರ್ ವತಿಯಿಂದ ಅತ್ಯಂತ ಯಶಸ್ವಿಯಾಗಿ’ಕೆಸಿಎಫ್ ಡೇ’ ಆಚರಿಸಲಾಯ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಸಿಎಫ್ ಜೆದ್ದಾ ಝೋನ್ ಅಧ್ಯಕ್ಷರಾದ ಹನೀಫ್ ಸಖಾಫಿ, ರಕ್ತ ದಾನದ ಮಹತ್ವವನ್ನು ವಿವರಿಸಿ,1818 ರಲ್ಲಿ ಬ್ರಿಟಿಷ್ ಶರೀರ ಶಾಸ್ತ್ರಜ್ಞ ಜೇಮ್ಸ್ ಬ್ಲಂಡೆಲ್ ಮೊದಲ ಬಾರಿಗೆ ರಕ್ತದಾನಕ್ಕೆ ಕಲೆ ಹಾಕಿದ್ದು, ಅವರ ಸ್ಮರಣೆಯಾಗಿ ವಿಶ್ವ ಜೂನ್ 14 ರಂದು ‘ವರ್ಲ್ಡ್ ಬ್ಲಡ್ ಡೊನೇಷನ್ ಡೇ’ ಯಾಗಿ ಆಚರಿಸುತ್ತಿರವುದನ್ನು ನೆನಪಿಸಿದರು.

ಸುಲೈಮಾನ್ ಬಂಡಾಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೆಸಿಎಫ್ ಬಗ್ಗೆ ತಮಗಿರುವ ನಿಲುವು, ಬವಾದಿ ಸೆಕ್ಟರ್ ಕಾರ್ಯಾಚರಣೆ ಮತ್ತು ಕೆಸಿಎಫ್ ನೀಡುತ್ತಿರುವ ಸಾಂತ್ವನದ ಉದಾಹರಣೆ ಸಹಿತ ಬಣ್ಣಿಸಿದರು.

ಝೋನ್ ಕಾರ್ಯರ್ಶಿ ಇಬ್ರಾಹಿಂ ಕಿನ್ಯ ಮಾತನಾಡಿ ರಕ್ತ ಹೇಗೆ, ಎಲ್ಲಿ, ಯಾವಾಗ ನೀಡಬೇಕೆಂದು ವಿವರಿಸಿ, ರಕ್ತದಾನದಿಂದ ಹಿಂಜರಿಯುವವರ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಜಿ.ಯಂ. ಸುಲೈಮಾನ್ ಹನೀಫಿ (ಕಾರ್ಯಕಾರಿ ಸಮೀತಿ ಸದಸ್ಯರು ಕೆಸಿಎಫ್ ರಾಷ್ಟೀಯ ಸಮಿತಿ)ಯವರು ಕೆಸಿಎಫ್ ಸಂಘಟನೆಯ ಮಹತ್ವವನ್ನು ಮನಮುಟ್ಟುವ ಸರಳ ಶೈಲಿಯಲ್ಲಿ ವಿವರಿಸಿದರು.

ದಾರುಲ್ ಅಶ್ ಅರಿಯ್ಯ ಆರ್ಗನೈಸರ್ ಅಬ್ದುಲ್ ಅಝೀಝ್ ಹನೀಫಿ, ಮಲ್ಜಅ್ ಆರ್ಗನೈಸರ್ ಖಾಲಿದ್ ಕಬಕ, ಅಲ್ ಖಾದಿಸ ಆರ್ಗನೈಸರ್ ಯೂಸಫ್ ಮದನಿ ಕಯ್ಯೂರು, ಮಾಡವಣ ಝುಹ್ರಿ ಕಾಲೇಜು ಆರ್ಗನೈಸರ್ ಅಬ್ದುಲ್ ಸಮದ್ ಝುಹ್ರಿ ಕುಕ್ಕಾಜೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸೆಕ್ಟರ್ ಕಾರ್ಯದರ್ಶಿ ಸ್ವಾಗತಿಸಿ,ಕೊನೆಯಲ್ಲಿ ಹಮೀದ್ ಪರಪ್ಪು ಸಭೆಗೆ ಧನ್ಯವಾದಗಳನ್ನು ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!