janadhvani

Kannada Online News Paper

ವಾಟ್ಸ್​​ಆ್ಯಪ್​​ ಸ್ಟೇಟಸ್​ ಅವಧಿ 30 ಸೆಕೆಂಡ್​ ಗೆ ಹೆಚ್ಚಳ

ವಾಟ್ಸ್​​ಆ್ಯಪ್​​ ಕಳೆದ ಬಾರಿ ಸ್ಟೇಟಸ್​ ಅವಧಿಯನ್ನು 30 ಸೆಕೆಂಡ್​ನಿಂದ 15 ಸೆಕೆಂಡ್​ಗೆ ಇಳಿಸಿತ್ತು. ಆದರೀಗ ಮತ್ತೆ 30 ಸೆಕೆಂಡ್​ಗೆ ಏರಿಕೆ ಮಾಡುವಲ್ಲಿ ಚಿಂತನೆ ನಡೆಸುತ್ತಿದ್ದು, ಸದ್ಯದಲ್ಲೇ ಸ್ಟೇಟಸ್​ ಅವಧಿಯಲ್ಲಿ ಈ ಬದಲಾವಣೆ ಕಾಣಲಿದೆ. ವಾಬೇಟಾಇನ್​ಫೋ ನೀಡಿರುವ ಮಾಹಿತಿಯ ಮೇರೆಗೆ ‘ವಾಟ್ಸ್ಆ್ಯಪ್​​​​​ ಸ್ಟೇಟಸ್​ ಅವಧಿಯನ್ನು 30 ಸೆಂಕೆಡ್​​ಗಳಿಗೆ ಹೆಚ್ಚಿಸಲು ಸಿದ್ಧತೆ ನಡೆಯುತ್ತಿದೆ.

ಆ್ಯಂಡ್ರಾಯ್ಡ್​ ಆವೃತ್ತಿ 2.20.166 ಅಪ್ಡೇಟ್​ ವರ್ಷನ್​ನಲ್ಲಿ ಈ ಫೀಚರ್​ ಸಿಗಲಿದೆ‘ ಎಂದು ಹೇಳಿದೆ. ಬ್ಲಾಗ್​ ಪೋಸ್ಟ್​ ನೀಡಿರುವ ಮಾಹಿತಿ ಮೇರೆಗೆ ‘ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​ ಸ್ಟೇಟಸ್ ಅವಧಿಯನ್ನು ಸದ್ಯದಲ್ಲೇ ಹೆಚ್ಚಿಸಲಿದೆ. ಎಲ್ಲಾ ಬಳಕೆದಾರರಿಗೂ ಅಪ್ಡೇಟ್​ ವರ್ಷನ್​ ದೊರೆಯಲು ಸ್ವಲ್ಪ ಸಮಯವಕಾಶ ತೆಗೆದುಕೊಳ್ಳಬಹುದು‘ ಎಂದು ತಿಳಿಸಿದೆ.

ಇತ್ತೀಚೆಗೆ ವಾಟ್ಸ್​ಆ್ಯಪ್​ನಲ್ಲಿ ಫೇಕ್​ ನ್ಯೂಸ್​ಗಳನ್ನು ಹರಿದಾಡುವುದನ್ನು ನಿಯಂತ್ರಣಕ್ಕೆ ತರಲು ಮತ್ತು ಸರ್ವರ್​ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಾಟ್ಸ್​​ಆ್ಯಪ್​​ ಸ್ಟೇಟಸ್​ ಫೀಚರ್​ ಅವಧಿಯನ್ನು ಕಡಿಮೆ ಮಾಡಿತ್ತು. 30 ಸೆಕೆಂಡ್​ಗೆ ಮೀಸಲಾಗಿದ್ದ ಸ್ಟೇಟಸ್​ ಫೀಚರ್​ 15 ಸೆಕೆಂಡ್​ಗೆ ಇಳಿಸಿತ್ತು. ಇದೀಗ ಮತ್ತೆ ಹೆಚ್ಚಳ ಮಾಡಲು ಚಿಂತನೆ ನಡೆಸುತ್ತಿದೆ.

error: Content is protected !! Not allowed copy content from janadhvani.com