janadhvani

Kannada Online News Paper

ಅನಿವಾಸಿ ಕನ್ನಡಿಗರನ್ನು ಗೌರವ ಯುತವಾಗಿ ಸ್ವೀಕರಿಸಿದ ಜಿಲ್ಲಾಡಳಿತ ಅಭಿನಂಧನಾರ್ಹವಾಗಿದೆ, ಕೆಸಿಎಫ್ ಯುಎಇ

ದುಬೈಯಿಂದ ಮಂಗಳೂರಿಗೆ ಬಂದ ಎರಡನೇ ವಿಮಾನ ಯಾತ್ರೆಯ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಿ ಸ್ವೀಕರಿಸಿದ ಜಿಲ್ಲಾಡಳಿತದ ಸೇವೆಯನ್ನು ಕೆಸಿಎಫ್ ಯುಎಇ ಅಭಿನಂದಿಸುತ್ತಿದೆ. ಯಾತ್ರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗರ್ಭಿಣಿ ಮಹಿಳೆಯರನ್ನು ಮತ್ತು ವಯಸ್ಕರನ್ನು ಹಾಗೂ ಮಕ್ಕಳನ್ನು ಸ್ವೀಕರಿಸಿದ ರೀತಿ ಪ್ರಶಂಸನೀಯ. ಉಪವಾಸಿಗರನನ್ನೊಳಗೊಂಡ ಪ್ರಯಾಣಿಕರು ಗಳೆಲ್ಲರನ್ನು ಪ್ರತ್ಯೇಕವಾಗಿ ಪರಿಗಣಿಸಿ
ಅವರಿಗೆ ಉಪಹಾರವನ್ನು ನೀಡಿ ಸತ್ಕರಿಸಿರುವುದು ಅಭಿನಂದನಾರ್ಹ ಸೇವೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಬಣ್ಣಿಸಿದರು. ಉತ್ತಮ ವ್ಯವಸ್ಥೆಗೆ ಬೇಕಾಗಿ ಚಾಲೆಂಜ್ ಆಗಿ ತೆಗೆದುಕೊಂಡು ಸ್ಪಂದಿಸಿದ ಜಿಲ್ಲಾಧಿಕಾರಿಗಳಿಗೆ, ಸಂಸದರು,ಶಾಸಕರು ಗಳ ಸಹಿತ ಜಿಲ್ಲಾ ಡಳಿತ ಹಾಗು ಸಹಕರಿಸಿದ ಪ್ರಮುಖ ಸಂಘಟನಾ ಪ್ರತಿನಿಧಿಗಳಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಯುಎಇ ಪ್ರತ್ಯೇಕ ಅಭಿನಂದನೆಯನ್ನು ಸಲ್ಲಿಸಿತು.

35 ಗರ್ಭಿಣಿಗಳ ಸಹಿತ 173 ಪ್ರಯಾಣಿಕರು ಇಂದು ಏರ್ ಇಂಡಿಯಾ ವಿಮಾನದ ಮೂಲಕ ಊರಿಗೆ ತಲುಪಿದರು. ಅವರ ಎಮಿಗ್ರೇಷನ್, ಕ್ವಾರೈಂಟೇನ್ ವ್ಯವಸ್ಥೆ, ಉಟೋಪಹಾರ ಎಲ್ಲವೂ ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮವಾಗಿ ನಡೆದಿದೆ ಎಂದು ಪ್ರಯಾಣಿಕರು ತಿಳಿಸಿದಾಗ ಸಂತೋಷವಾಯಿತು. ಹಲವಾರು ಕಷ್ಟ ನಷ್ಟ ನೋವುಗಳನ್ನು ಸಹಿಸಿ ತಾಯ್ನಾಡು ಯಾತ್ರೆಗೈಯ್ಯುವ ಅನಿವಾಸಿಯು, ಮನಸ್ಸಿನಲ್ಲಿ ಕೊರೆಯುವ ನೂರಾರು ಪ್ರಶ್ನೆಗಳ ಉತ್ತರದ ಹುಡುಕಾಟದಲ್ಲಿರುತ್ತಾನೆ. ಇಂತಹ ಸಂದರ್ಭದಲ್ಲಿ ತಾಯ್ನಾಡು ಅವರ ನೋವನ್ನು ಮರೆಯುವ ರೀತಿಯಲ್ಲಿ ಸ್ವೀಕರಿಸಿ ಗೌರವಿಸಿದೆ. ಅವರ ಕನಸಿಗೆ ಜೀವ ತುಂಬುವ ರೀತಿಯಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದರು. ಯುಎಇ ಕೆಸಿಎಫ್, ಯಾತ್ರಿಕರಿಗೆ ಪ್ರಯಾಣ ಮಾಡುವ ವೇಳೆಯಲ್ಲಿ ವಿಮಾನದಲ್ಲಿ ಕೋವಿಡ್-19 ಹರಡುವುದರ ಕುರಿತು ಸುರಕ್ಷತೆಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನವನ್ನು ನೀಡಿ ಇಫ್ತಾರ್ ಕಿಟ್ ವಿತರಿಸಿ ಭರವಸೆ ತುಂಬುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.

ಗಲ್ಫ್ ರಾಷ್ಟ್ರಗಳಾದ್ಯಂತ ಸೌದಿ ಅರೇಬಿಯಾ ಸಹಿತ ಹಲವು ಪ್ರದೇಶ ಗಳಲ್ಲಿ ಇನ್ನೂ ಹಲವಾರು ಕನ್ನಡಿಗರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ತಾಯ್ನಾಡಿಗೆ ಮರಳಿ ಕರೆತರುವ ಬಗ್ಗೆ ರಾಜ್ಯ ಸರಕಾರವು ಶ್ರಮ ವಹಿಸಿ ಇನ್ನೂ ಹೆಚ್ಚಿನ ವಿಮಾನಗಳನ್ನು ಒದಗಿಸುವಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕೆಂದು ಅವರು ಮನವಿ ಮಾಡಿದರು. ಅದಕ್ಕೆ ಬೇಕಾಗಿ ಶ್ರಮಿಸುತ್ತಿರುವ ಕನ್ನಡ ಪರ ಸಂಘ ಗಳೊಂದಿಗೆ ಕೆಸಿಎಫ್ ಕೈ ಜೋಡಿಸುತ್ತಿದೆ ಎಂದು ತಿಳಿಸಿದರು.

error: Content is protected !! Not allowed copy content from janadhvani.com