janadhvani

Kannada Online News Paper

ಹಳೆ ಪದ್ಧತಿಯಲ್ಲೇ ಸಿಇಟಿ ಪರೀಕ್ಷೆ- ದಿನಾಂಕ ಪ್ರಕಟ

ಬೆಂಗಳೂರು:- ವೃತ್ತಿಪರ ಕೋರ್ಸ್‍ಗಳ ಸಾಮಾನ್ಯ ಪರೀಕ್ಷೆ (ಸಿಇಟಿ) ಜುಲೈ 30-31ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯ ಸಮಯದಲ್ಲಿ ಸ್ಥಳಾವಕಾಶ, ಪರೀಕ್ಷಾ ಕೇಂದ್ರಗಳು, ಪರೀಕ್ಷಾ ಸಮಯ, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಕ್ರಮ ವಹಿಸಿ ಪರೀಕ್ಷೆ ನಡೆಸಲಾಗುವುದು.

ಆನ್‍ಲೈನ್‍ನಲ್ಲಿ ಪ್ರವೇಶ ಪರೀಕ್ಷೆ ನಡೆಸುವುದಿಲ್ಲ. ಹಳೆಯ ಪದ್ಧತಿಯಲ್ಲೇ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ನೀಟ್, ಯುಪಿಎಸ್‍ಸಿ, ಸಿಬಿಎಸ್‍ಸಿ, ಜೆಡಬ್ಲ್ಯೂ ಪರೀಕ್ಷಾ ದಿನಾಂಕಗಳು ನಿಗದಿಯಾಗಿವೆ. ಅದರಂತೆ ಸಿಇಟಿ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗಿದೆ.

ಎರಡು ದಿನಗಳ ಕಾಲ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ನಿಬಂಧನೆ ಇರುತ್ತದೆ. ಈ ಬಾರಿ ಪರೀಕ್ಷಾ ಕೇಂದ್ರಗಳು ಹೆಚ್ಚಳವಾಗಲಿವೆ. ಸುಮಾರು 40 ಸಾವಿರ ಎಂಜಿನಿಯರಿಂಗ್ ಸೀಟು ಭರ್ತಿಯಾಗುತ್ತವೆ ಎಂದರು.

ಏಪ್ರಿಲ್ 20 ರಿಂದ ಸಿಇಟಿಗೆ, ಮೇ 1ರಿಂದ ನೀಟ್‍ಗೆ ಆನ್‍ಲೈನ್ ತರಬೇತಿ ಆರಂಭಿಸಲಾಗಿದೆ. ಉಇಖಿ ಅಇಖಿ ಉಔ ಮೂಲಕ ಉಚಿತವಾಗಿ ಆನ್‍ಲೈನ್ ತರಬೇತಿ ನೀಡಲಾಗುತ್ತದೆ. ವಿಶೇಷ ತರಗತಿಗಳು, ಕೋಚಿಂಗ್ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿ ಗಳಿಗಾಗಿ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ

ರಾಜ್ಯದಲ್ಲಿರುವ 8,000ಕ್ಕೂ ಹೆಚ್ಚು ಮೆಡಿಕಲ್ ಸೀಟುಗಳಿಗಾಗಿ ನೀಟ್ ಪರೀಕ್ಷೆ ಬರೆಯಬೇಕು. 62 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳಿಗಾಗಿ ಸಿಇಟಿ ಬರೆಯಬೇಕು. ಎರಡೂ ಪರೀಕ್ಷೆ ಬರೆಯುವವರಿಗೆ ಆನ್‍ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ.

ಲ್ಯಾಂಡಿಂಗ್ ಪೇಜ್ ಮೂಲಕ 1,69,510 ವಿದ್ಯಾರ್ಥಿಗಳು ಬಳಕೆ ಮಾಡಿದ್ದಾರೆ. 76.913 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. ಅಂಡ್ರಾಯ್ಡ್ ಆ್ಯಪ್ ಮೂಲಕ 55,130 ವಿದ್ಯಾರ್ಥಿಗಳು ಡೌನ್‍ಲೋಡ್ ಮಾಡಿಕೊಂಡಿದ್ದಾರೆ.

ಯು ಟ್ಯೂಬ್ ಮೂಲಕ 2,45,402 ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಪರೀಕ್ಷೆ ತೆಗೆದುಕೊಂಡವರು 51,975 ವಿದ್ಯಾರ್ಥಿಗಳು. ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ವಿವರಿಸಿದ್ದಾರೆ

error: Content is protected !! Not allowed copy content from janadhvani.com