ಅಬುಧಾಬಿ: ಕೋವಿಡ್ ಪ್ರತಿರೋಧ ಹೋರಾಟದಲ್ಲಿ ಭಾರತಕ್ಕೆ ಯುಎಇ ನೆರವು ನೀಡಲಿದ್ದು, ರಕ್ಷಣಾ ಉದ್ದೇಶಗಳಿಗಾಗಿ ಬಳಸುವ ಏಳು ಮೆಟ್ರಿಕ್ ಟನ್ ವೈದ್ಯಕೀಯ ಸಲಕರಣೆಗಳನ್ನು ಯುಎಇಯು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ರವಾನಿಸಿದೆ.ಇದು 7000 ಆರೋಗ್ಯ ಕಾರ್ಯಕರ್ತರು ಬಳಸಬಹುದಾದ ಅತ್ಯಗತ್ಯ ವಸ್ತುಗಳಾಗಿವೆ. ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಸಂಬಂಧವನ್ನು ಬಲಪಡಿಸುವ ದೃಷ್ಟಿಯಿಂದ ಈ ನಡೆ ಎಂದು ಯುಎಇಯ ರಾಯಭಾರಿ ಡಾ. ಅಹ್ಮದ್ ಅಬ್ದುಲ್ರಹ್ಮಾನ್ ಅಲ್ಬನ್ನಾ ಹೇಳಿದ್ದಾರೆ.
ಈ ವರೆಗೆ 34 ರಾಷ್ಟ್ರಗಳಿಗಾಗಿ ಸುಮಾರು 348ಕ್ಕೂ ಅಧಿಕ ಮೆಟ್ರಿಕ್ ಟನ್ ಸಾಮಗ್ರಿಗಳನ್ನು ಯುಎಇ ರವಾನಿಸಿರುವುದಾಗಿ ಅವರು ಹೇಳಿದರು.