SSF ತುಂಬೆ ಶಾಖೆ:ಮಾಸಿಕ ತರಗತಿ ಹಾಗೂ ಫರಂಗಿಫೇಟೆ ಸೆಕ್ಟರ್ ಕಾರ್ಯದರ್ಶಿಗೆ ಸನ್ಮಾನ

SSF ತುಂಬೆ ಶಾಖೆ ಇದರ ವತಿಯಿಂದ ಪ್ರತೀ ತಿಂಗಳು ನಡೆಸಲ್ಪಡುವ ಮಾಸಿಕ ತರಗತಿಯು ದಿನಾಂಕ 17/2/2018 ಶನಿವಾರ ಇಶಾ ನಮಾಝಿನ ಬಳಿಕ ಶಾಖಾ ಕೋಶಾಧಿಕಾರಿ ಅಲ್ತಾಫ್ ಸಾಗರ್ ತುಂಬೆಯವರ ನಿವಾಸನದಲ್ಲಿ ನಡೆಯಿತು.
ಶಾಖಾ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಹಿಮಮಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತ ಭಾಷಣ ನಡೆಸಿದರು.ತರಗತಿಯನ್ನು ರಹ್ಮಾನಿಯಾ ಜುಮಾ ಮಸ್ಜಿದ್ ಪಡೀಲ್ ಇದರ ಖತೀಬರಾದ ಹಾಫೀಲ್ ಅನಸ್ ಅಹ್ಸನಿ ಉಸ್ತಾದ್ ಉದ್ಘಾಟಿಸಿದರು.

SSF ಕರ್ನಾಟಕ ರಾಜ್ಯ ಸಮಿತಿಯ ಜೊತೆ ಕಾರ್ಯದರ್ಶಿ ಹಾಗು ಆಲ್-ಖಾದಿಸಾ ಕಾವಲ್ಕಟ್ಟೆ ಸ್ಥಾಪನೆಯ ಪ್ರಿನ್ಸಿಪಾಲ್,ಪ್ರಖ್ಯಾತ ಯುವ ವಾಗ್ಮಿ ಬಹು!ಹಾಫೀಝ್ ಸುಫ್ಯಾನ್ ಸಖಾಫಿ “ಸಂಘಟನೆಯ ಅನಿವಾರ್ಯತೆ” ಎಂಬ ಮುಖ್ಯ ವಿಷಯವನ್ನು ಆಧರಿಸಿ ವಿಷಯವನ್ನು ಮಂಡಿಸಿ ತರಗತಿ ನಡೆಸಿದರು.

ಕಾರ್ಯಕ್ರಮದಲ್ಲಿ SSF ಫರಂಗಿಫೇಟೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾಗು SSF ಮಂಗಳೂರು ಡಿವಿಷನ್ ಜೊತೆ ಕಾರ್ಯದರ್ಶಿಯಾದ ಸುಹೈಲ್ ತುಂಬೆಗೆ SSF ತುಂಬೆ ಶಾಖೆ ವತಿಯಿಂದ ಹಾಫೀಝ್ ಸುಫ್ಯಾನ್ ಸಖಾಫಿ ಉಸ್ತಾದರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,  SSF ತುಂಬೆ ಶಾಖೆ ಉಪಾಧ್ಯಕ್ಷ ಹನೀಫ್ ಎಂ.ಎ, ಪ್ರಧಾನ ಕಾರ್ಯದರ್ಶಿ ನೌಷಾದ್ ತುಂಬೆ, ಕೋಶಾಧಿಕಾರಿ ಅಲ್ತಾಫ್ ಸಾಗರ್ ತುಂಬೆ, ಸಂಘಟನಾ ಸಲಹೆಗಾರ ಅದಂ ಟಿ.ಎ, ಜೊತೆ ಕಾರ್ಯದರ್ಶಿ ಅಮೀನ್ ಟಿ.ಎ,ಫಯಾಝ್ ತುಂಬೆ ಹಾಗು ಕ್ಯಾಂಪಸ್ ಕಾರ್ಯದರ್ಶಿ ತೌಸೀಫ್ ತುಂಬೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ನೌಷಾದ್ ತುಂಬೆ ವಂದಿಸಿದರು.

ವರದಿ:-
ಇರ್ಫಾಝ್ ತುಂಬೆ

Leave a Reply

Your email address will not be published. Required fields are marked *

error: Content is protected !!