janadhvani

Kannada Online News Paper

ಕುವೈತ್: ಭಾರತೀಯರನ್ನು ಸರ್ಕಾರೀ ವೆಚ್ಛದಲ್ಲೇ ಕಳಿಸಲಾಗುವುದು – ರಾಯಭಾರಿ

ಕುವೈತ್ ಸಿಟಿ: ಭಾರತೀಯರನ್ನು ಸ್ವಂತ ಖರ್ಚಿನಲ್ಲಿ ವಾಪಸ್ ಕಳುಹಿಸುವುದಾಗಿ ಕುವೈತ್ ಹೇಳಿದೆ. ಸಿಲುಕಿಕೊಂಡವರು, ಸಾರ್ವಜನಿಕ ಕ್ಷಮಾಪಣೆಯ ಲಾಭ ಪಡಕೊಂಡವರು ಮತ್ತು ಕಾರ್ಮಿಕರನ್ನು ಈ ಮೂಲಕ ತಲುಪಿಸಲಾಗುವುದು. ಭಾರತದಲ್ಲಿನ ಕುವೈತ್ ರಾಯಭಾರಿ ಜಾಸಿಮ್ ಅಲ್-ನಜೀಮ್ ಈ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಿದ್ದಾರೆ.

ಕುವೈತ್ ರಾಯಭಾರಿ ಜಾಸಿಮ್ ಅಲ್-ನಜೀಮ್ ಅವರು ತಮ್ಮ ಪತ್ರದಲ್ಲಿ, ಭಾರತ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಭಾರತೀಯರನ್ನು ಉಚಿತವಾಗಿ ಹಿಂದಿರುಗಿಸಲಾಗುವುದು ಎಂದಿದ್ದಾರೆ. ಭಾರತದಲ್ಲಿ ಸಿಲುಕಿಕೊಂಡಿದ್ದ ಕುವೈತ್ ಪ್ರಜೆಗಳನ್ನು ಹಲವು ದಿನಗಳ ಹಿಂದೆ ಕುವೈತ್ ಏರ್ವೇಸ್ ಮೂಲಕ ವಾಪಸ್ ಕಳುಹಿಸಲಾಗಿತ್ತು. ಜೊತೆಗೆ 15 ವೈದ್ಯಕೀಯ ತಂಡ ಮತ್ತು ವೈದ್ಯಕೀಯ ಉಪಕರಣಗಳನ್ನು ರವಾನಿಸಲಾಗಿದ್ದವು.

ಭಾರತೀಯರನ್ನು ವಾಪಸ್ ಕಳುಹಿಸಲಾಗುವ ಬಗ್ಗೆ ಯುಎಇ ಕೂಡ ಈ ಹಿಂದೆ ಘೋಷಿಸಿತ್ತು. ಆದರೆ ವಲಸಿಗರನ್ನು ಎರಡು ಹಂತಗಳಲ್ಲಿ ಕರೆತರುವ ಬಗ್ಗೆ ಕೇಂದ್ರ ಕ್ರಮವಹಿಸಿದೆ. ಕೊಲ್ಲಿ ಸೇರಿದಂತೆ 24 ದೇಶಗಳಲ್ಲಿ ಸಿಕ್ಕಿಹಾಕಿಕೊಂಡವರನ್ನು ಮೊದಲು ಕರೆತರಲಾಗುವುದು. ಈ ಉದ್ದೇಶಕ್ಕಾಗಿ ವಿಮಾನ ಮತ್ತು ಯುದ್ಧನೌಕೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ವರದಿಯಾಗಿದೆ.

error: Content is protected !! Not allowed copy content from janadhvani.com