janadhvani

Kannada Online News Paper

ಸರಳಿಕಟ್ಟೆ ಜುಮಾ ಮಸೀದಿ ಆಡಳಿತ ಸಮಿತಿಯಿಂದ 250 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ

ಉಪ್ಪಿನಂಗಡಿ: (ಜನಧ್ವನಿ ವರದಿ) ದೇಶದೆಲ್ಲೆಡೆ ಕೋವಿಡ್-19/ ಕೊರೋನಾ ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ ಕಾರ್ಮಿಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.

ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಸ್ತ ನೀಡುವ ಮಹತ್ತರವಾದ ಸದುದ್ದೇಶದೊಂದಿಗೆ ಸರಳಿಕಟ್ಟೆ ಜಮಾಅತ್ ಆಡಳಿತ ಸಮಿತಿ, ಎಸ್.ವೈ.ಎಸ್, ಎಸ್.ಎಸ್.ಎಫ್ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಸರಳಿಕಟ್ಟೆಯ ಅನಿವಾಸಿ ಸಂಘಟನೆ -ಗಲ್ಫ್ ಫ್ರೆಂಡ್ಸ್-ಸರಳಿಕಟ್ಟೆಯ ಸಹಭಾಗಿತ್ವದಲ್ಲಿ ಹೆಲ್ಪ್ ಲೈನ್ ವಾಟ್ಸಾಪ್ ಗ್ರೂಪ್ ಮೂಲಕ ದಾನಿಗಳಿಂದ ಸಂಗ್ರಹಿಸಿದ ಸುಮಾರು ಮೂರು ಲಕ್ಷದಷ್ಷು ಮೊತ್ತದ ಆಹಾರ ಸಾಮಾಗ್ರಿಗಳನ್ನು, ಸರಳಿಕಟ್ಟೆ ಜಮಾಅತ್ ಗೊಳಪಟ್ಟ 197 ಮನೆಗಳಿಗೂ ನೀಡುವುದರೊಂದಿಗೆ, ಸರಳಿಕಟ್ಟೆ ಪರಿಸರದಲ್ಲಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಹಿಂದೂ ಧರ್ಮೀಯರಿಗೂ ಸೇರಿದಂತೆ ಒಟ್ಟು ಸುಮಾರು 250 ಕುಟುಂಬಗಳಿಗೆ ಪವಿತ್ರ ರಮ್ಝಾನ್ ತಿಂಗಳ ಮೊದಲ ದಿನವೇ ಆಹಾರ ಸಾಮಾಗ್ರಿಗಳನ್ನು ನೀಡಿ ಸಹಕರಿಸಲಾಯಿತು.

error: Content is protected !! Not allowed copy content from janadhvani.com