janadhvani

Kannada Online News Paper

ಉಳ್ಳಾಲ ಅಳೇಕಲ ಜಮಾಅತ್ ಮುಂದಾಳುತ್ವದಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೇ ಮಾದರೀ ಯೋಗ್ಯವಾದ ಶ್ಲಾಘನೀಯ ಸಾಂತ್ವನ ಸೇವೆ

ಕೋವಿಡ್ 19 ಮಾರಕ ವೈರಾಣು ಹರಡುವುದನ್ನು ತಡೆಗಟ್ಟಲು ಸರಕಾರ ಘೋಷಿಸಿದ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರ ಸಂಕಷ್ಟವನ್ನು ಅರಿತು ಸ್ಪಂದಿಸಲು ಉಳ್ಳಾಲ ಅಳೇಕಲ ಜಮಾಅತ್ ಮುಂದಾಳುತ್ವದಲ್ಲಿ ಇತರ ಸಮಿತಿಗಳು ಮತ್ತು ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದೊಂದಿಗೆ ಮತ್ತು ದೇಶ ವಿದೇಶಗಳಲ್ಲಿರುವ ಕೊಡುಗೈ ದಾನಿಗಳ ಸಹಾಯದೊಂದಿಗೆ ಊರಿನ ಯುವಕರ ತನು, ಮನ, ಧನದ ಸಹಕಾರದೊಂದಿಗೆ ಅಳೇಕಲ ಜಮಾಅತಿನಲ್ಲಿರುವ ಬಡವರು, ಮಧ್ಯಮ ವರ್ಗದವರು, ಶ್ರೀಮಂತರು ಎಂಬ ವ್ಯತ್ಯಾಸವಿಲ್ಲದೆ ಸರ್ವ ಜಮಾಅತ್ ಬಾಂಧವರಿಗೂ ಮತ್ತು ಹಿಂದು, ಮುಸ್ಲಿಂ, ಕ್ರೈಸ್ತ ಬಾಂಧವರಿಗೂ ಆಹಾರ ಧಾನ್ಯಗಳ ಒಂದು ಸಾವಿರ ಕಿಟ್ಟುಗಳನ್ನು ವಿತರಿಸಲಾಯಿತು. ತಲಾ 2,700 ಮೌಲ್ಯದ ಪ್ರತೀ ಕಿಟ್ಟುಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಲಾಯಿತು.

ಅಳೇಕಲ ಜಮಾಅತ್ ಅಧ್ಯಕ್ಷರಾದ ಬಹು ಪಿ ಎಸ್ ಎಂ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ ಕಿಟ್ಟುಗಳ ವಿತರಣಾ ಕಾರ್ಯಕ್ರಮದಲ್ಲಿ ದುವಾ ನೆರವೇರಿಸಿ ಈ ವಿಷಯವನ್ನು ತಿಳಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಅಶ್ರಫ್ ಯು ಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ಹಾಜಿ, ಮದ್ರಸಾ ಸಂಚಾಲಕ ರಿಯಾಝ್, ಕಾರ್ಯ ದರ್ಶಿ ಜಾಫರ್, ಉಳ್ಳಾಲ ನಗರಸಭಾ ಸ್ಥಳೀಯ ಕೌನ್ಸಿಲರ್ ಅಸ್ಗರ್ ಆಲಿ, ಅಳೇಕಲ ಜಮಾಅತ್ ಆಡಳಿತ ಸಮಿತಿ ಪದಾಧಿಕಾರಿಗಳು ಮತ್ತು ಫಾರೂಕ್, ಉಮರ್,ಹನೀಫ್ ರಿಯಾಝ್,ಯು.ಡಿ ಹಸನ್, ಹನೀಫ್, ಯು ಎನ್ ಜಾಫರ್, ಯು ಎ ಅಬ್ದುಲ್ ಕಾದರ್ ಹಾಜಿ ಅಳೇಕಲ ಹಾಗೂಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

error: Content is protected !! Not allowed copy content from janadhvani.com