janadhvani

Kannada Online News Paper

ಸೌದಿ: ಭಾರತ ರಾಯಭಾರಿಯಿಂದ ಕೋವಿಡ್ ತಡೆಗಟ್ಟುವ ಕ್ರಮ ಶಕ್ತಗೊಳಿಸಲು ಒತ್ತಾಯ

ರಿಯಾದ್: ಭಾರತೀಯರೆಡೆಯಲ್ಲಿ ಕೋವಿಡ್ ತಡೆಗಟ್ಟುವ ಕ್ರಮವನ್ನು ಇನ್ನಷ್ಟು ಶಕ್ತಗೊಳಿಸಲು ಭಾರತದ ರಾಯಭಾರಿ ಕಚೇರಿಯು ಮುಂದಾಗುತ್ತಿದೆ. ಪ್ರಸಕ್ತ ರಾಯಭಾರ ಕಚೇರಿಯಡಿಯಲ್ಲಿರುವ ಸಹಾಯವಾಣಿ ಮತ್ತು ಸಾಮಾಜಿಕ ಸಂವಹನವನ್ನು ಬಲಪಡಿಸಲು ಸಹ ಯೋಜಿಸುತ್ತಿದೆ.

ಇದರ ಭಾಗವಾಗಿ ರಾಯಭಾರ ಕಚೇರಿಯು ಸಮುದಾಯಿಕ ಸಂಘಟನಾ ಮುಖಂಡರ ಸಭೆ ಕರೆದಿತ್ತು. ಸೌದಿ ಅರೇಬಿಯಾದ ವಿವಿಧ ಭಾಗಗಳ ವಿವಿಧ ಸಂಘಟನೆಗಳ ಸ್ವಯಂ ಸೇವಕರು ಮತ್ತು ಸಂಘಟನಾ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಸೌದಿ ಅರೇಬಿಯಾದ ಅನೇಕ ಭಾರತೀಯ ವಲಸಿಗರು ಸಂದಿಗ್ಧತೆಯ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ತೆರಳಲು ಬಯಸಿದ್ದಾರೆ.ಮಾನವೀಯ ನೆಲೆಯಲ್ಲಿ ರಾಯಭಾರ ಕಚೇರಿಯ ಮಧ್ಯಸ್ಥಿಕೆ ಕುರಿತು ವಿವಿಧ ಸಂಘಟನೆಯ ಮುಖಂಡರು, ಸಂಸದರು ಮತ್ತು ಮಂತ್ರಿಗಳು ಮಾಧ್ಯಮಗಳ ಚರ್ಚೆಯಲ್ಲಿ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಸಭೆ ಕರೆಯಲಾಗಿತ್ತು.

ಸೌದಿ ಅರೇಬಿಯಾದಲ್ಲಿ, 30 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದು, ಸಹಾಯವಾಣಿಗಾಗಿ ರಾಯಭಾರ ಕಚೇರಿಯಲ್ಲಿ ಕೇವಲ ಒಂದು ಫೋನ್ ಸಂಖ್ಯೆಯನ್ನು ಮಾತ್ರ ಒದಗಿಸಲಾಗಿದೆ. ಅದನ್ನು ವಿಸ್ತರಿಸಲು ಮತ್ತು ಅದಕ್ಕಾಗಿ ಓರ್ವರನ್ನು ನೇಮಕ ಮಾಡುವಂತೆ ಆಗ್ರಹಿಸಲಾಯಿತು.ಜಿದ್ದಾ ಕಾನ್ಸುಲೇಟ್‌ನಲ್ಲಿ, ಇದಕ್ಕಿಂತ ಉತ್ತಮ ವ್ಯವಸ್ಥೆ ಇದೆ.ಊರಿನ ವಿವಿಧ ಸಂಸ್ಥೆಗಳು ಮತ್ತು ಸ್ಥಳೀಯ ಪ್ರತಿನಿಧಿಗಳಿಂ ಕೇಂದ್ರ ಸಚಿವರ ಮೇಲೆ ಒತ್ತಡಗಳು ಏರುತ್ತಿರುವ ಹಿನ್ನೆಲೆಯಲ್ಲಿ ಸೇವೆಯನ್ನು ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ.

ತುರ್ತು ವಾಪಸಾತಿ ಸಿದ್ಧತೆ, ರಾಯಭಾರ ಕಚೇರಿಯಡಿಯಲ್ಲಿ ವೈದ್ಯಕೀಯ ವಿಭಾಗಗಳನ್ನು ಸ್ಥಾಪಿಸುವುದು, ಕಾರ್ಮಿಕ ಶಿಬಿರಗಳಲ್ಲಿ ಇರುವವರ ಬಗ್ಗೆ ಗಮನಹರಿಸುವುದು, ರಾಯಭಾರ ಕಚೇರಿಯಡಿಯಲ್ಲಿ ಆಂಬ್ಯುಲೆನ್ಸ್ ಸೇವೆಗಳನ್ನು ಸ್ಥಾಪಿಸುವುದು ಮತ್ತು ಕೋವಿಡ್ ರೋಗಿಗಳ ಊಟೋಪಚಾರಕ್ಕೆ ಬೇಕಾದಲ್ಲಿ ಪಾಸ್‌ಗಳನ್ನು ಒದಗಿಸುವುದು ಇತ್ಯಾದಿ ವಿವಿಧ ಬೇಡಿಕೆಗಳನ್ನು ಸಭೆಯಲ್ಲಿ ಮುಂದಿಡಲಾಗಿದೆ.

ಸಲಹೆಗಳ ಕುರಿತು ರಾಯಭಾರ ಕಚೇರಿಯು ಸೌದಿ ಸರಕಾರದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ರಾಯಭಾರಿಯ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಜಿದ್ದಾ ಕಾನ್ಸುಲ್ ಜನರಲ್ ಮತ್ತು ಸುಮಾರು 30 ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com