janadhvani

Kannada Online News Paper

ಮಕ್ಕಾ, ಮದೀನಾದಲ್ಲೂ ಏಕೀಕೃತ ಪಾಸ್ ಜಾರಿ- ಪಡೆಯುವ ವಿಧಾನ

ರಿಯಾದ್: ಸೌದಿ ರಾಜಧಾನಿ ರಿಯಾದ್‌ನಲ್ಲಿ ಕರ್ಫ್ಯೂ ನಿಗ್ರಹಿಸಲು ಏಕೀಕೃತ ಪಾಸ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಇಂದಿನಿಂದ, ಗೃಹ ಸಚಿವಾಲಯವು ಪ್ರತೀ ಸಚಿವಾಲಯಗಳೊಂದಿಗೆ ಸಹಕರಿಸಿ ನೀಡಲಾದ ವಿಶೇಷ ಪಾಸ್ ಅನ್ನು ಬಳಸಬೇಕು, ಕರ್ಫ್ಯೂನಿಂದ ವಿನಾಯಿತಿ ಪಡೆದವರಿಗೂ ಕೂಡ ಕೆಲಸಕ್ಕೆ ಮತ್ತು ಹೊರಗೆ ಹೋಗಲು ಪಾಸ್ ಕಾಡ್ಡಾಯವಾಗಿದೆ.

ನೆರೆಯ ಅಂಗಡಿಗಳನ್ನು ಅಗತ್ಯ ಸೇವೆಗಳಿಗಾಗಿ ಬಳಸಬಹುದು. ಅದು ಬಿಟ್ಟರೆ ವಾಹನ ಮೂಲಕ ಹೊರಗೆ ಬರಲು ಪಾಸ್‌ಗಳು ಕಡ್ಡಾಯ. ಈ ನಿಯಮವು ರಿಯಾದ್‌ನಲ್ಲಿ ಪ್ರತೀ ದಿನ ಅನ್ವಯಿಸುತ್ತದೆ. ಮಕ್ಕಾ ಮತ್ತು ಮದೀನಾದಲ್ಲಿ ಕಾನೂನು ಇಂದಿನಿಂದ ಜಾರಿಗೆ ಬಂದಿದೆ.ಪಾಸ್ ಪಡೆಯುವ ಕಾರ್ಯವಿಧಾನಗಳು ಈ ಕೆಳಗಿನಂತಿದೆ.

ಈ ಉದ್ದೇಶಕ್ಕಾಗಿ ನೀವು ವಿಶೇಷ ಅರ್ಜಿ ನಮೂನೆಯಲ್ಲಿ ಸಂಸ್ಥೆಯ ವಾಣಿಜ್ಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆಯಾ ಸಚಿವಾಲಯಗಳು ಮತ್ತು ಬಲದಿಯಾ ಸ್ವೀಕರಿಸಿದರೆ, ಮೊಬೈಲ್‌ನಲ್ಲಿ ಎಸ್‌ಎಂಎಸ್ ಪಡೆಯುತ್ತೀರಿ. ಅರ್ಜಿಯ ಅಂತಿಮ ಪರಿಶೀಲನೆಯ ನಂತರ, ಪಾಸ್ ಅನ್ನು ಗೃಹ ಸಚಿವಾಲಯದ ಮೊಹರಿನೊಂದಿಗೆ ನೀಡಲಾಗುತ್ತದೆ. ಪ್ರತಿ ಚಾಲಕ ಮತ್ತು ವಾಹನಕ್ಕೆ ಪ್ರತ್ಯೇಕ ಪಾಸ್ ನೀಡಲಾಗುವುದು. ಪಾಸ್ ನಲ್ಲಿ ತೋರಿಸಿರುವ ಮಾರ್ಗದಲ್ಲಿ ಮಾತ್ರ ವಾಹನವನ್ನು ಓಡಿಸಬಹುದು. ಉಲ್ಲಂಘಿಸಿದರೆ, ದಂಡ ವಿಧಿಸಲಾಗುತ್ತದೆ.

ಪ್ರತಿ ಇಲಾಖೆಯ ನೌಕರರು ಆಯಾ ಇಲಾಖೆಯ ಅಡಿಯಲ್ಲಿ ಪಾಸ್ ಗಾಗಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ, ಕಂಪನಿ ಅಥವಾ ಸ್ಥಾಪನೆಯನ್ನು ಸಂಪರ್ಕಿಸಿ ಪಾಸ್ ಪಡೆಯಬೇಕು. ಹೊಸ ಪಾಸ್ ಇಲ್ಲದೆ ಹೊರಗೆ ಬಂದರೆ, ಮೊದಲ ಬಾರಿ ಹತ್ತು ಸಾವಿರ, ಎರಡನೇ ಬಾರಿ ಇಪ್ಪತ್ತು ಸಾವಿರ ರಿಯಾಲಗ ದಂಡ ವಿಧಿಸಲಾಗುತ್ತದೆ. ಪ್ರತಿ ವರ್ಗದ ನೌಕರರು ಪಾಸ್ ಪಡೆಯಲು ಪ್ರತ್ಯೇಕ ಮಾರ್ಗವನ್ನು ಹೊಂದಿದ್ದಾರೆ.
ಅವು ಈ ಕೆಳಗಿನಂತಿವೆ.

ಪ್ರತಿ ಇಲಾಖೆಗಳ ವೆಬ್ಸೈಟ್ ಲಿಂಕ್

1. ನಗರ ವ್ಯವಹಾರಗಳ ಸಚಿವಾಲಯದ ಬಲದೀ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾದವರು: ಸೂಪರ್ಮಾರ್ಕೆಟ್, ಬಕಾಲಗಳು, ಆಹಾರ ಮಳಿಗೆಗಳು, ಹಣ್ಣು, ತರಕಾರಿ ಅಂಗಡಿಗಳು, ಮಾಂಸದ ಅಂಗಡಿಗಳು, ರೆಸ್ಟೋರೆಂಟ್‌ಗಳು, ಕಾರು ಕಾರ್ಯಾಗಾರಗಳು, ಲಾಂಡ್ರಿಗಳು, ಪ್ಲಂಬಿಂಗ್ ಕೆಲಸಗಾರರು.
ವೆಬ್‌ಸೈಟ್ ಲಿಂಕ್: https://momra.gov.sa ವಾಣಿಜ್ಯ ಪ್ರಮಾಣಪತ್ರ ಸೇರಿದಂತೆ ದಾಖಲೆಗಳೊಂದಿಗೆ ಸಂಸ್ಥೆಯ ಮಾಲಕರು ಬಲದೀಯಾಗೆ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬ ಚಾಲಕನು ವಾಹನ ಮತ್ತು ಮಾರ್ಗಕ್ಕಾಗಿ ಅರ್ಜಿ ಸಲ್ಲಿಸಬೇಕು.

2. ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಮೂಲಕ: ಔಷಧಾಲಯಗಳು, ಕ್ಲಿನಿಕ್‌ಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳು

3. ಆಹಾರ ಮತ್ತು ಔಷಧ ಪ್ರಾಧಿಕಾರದ ವೆಬ್‌ಸೈಟ್ ಮೂಲಕ: ಔಷಧ ವಿತರಕರು, ವೈದ್ಯಕೀಯ ಉಪಕರಣ ಕಾರ್ಖಾನೆಗಳು ಮತ್ತು ಆಹಾರ ಅಂಗಡಿ ನೌಕರರು ಪಾಸ್‌ಗಳನ್ನು ಪಡೆಯಬಹುದು.

4. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ವೆಬ್‌ಸೈಟ್ ಮೂಲಕ: ಪಾರ್ಸೆಲ್ ಸೇವೆ ಮತ್ತು ಟೆಲಿಕಾಂ ಆಪರೇಟರ್ ನೌಕರರು ಪಾಸ್‌ಗಳನ್ನು ಪಡೆಯಬಹುದಾಗಿದೆ.

5. ಪ್ರವಾಸೋದ್ಯಮ ಸಚಿವಾಲಯದ ಮೂಲಕ: ಹೋಟೆಲ್‌ಗಳು, ಫರ್ನೀಶೆಡ್ ಅಪಾರ್ಟ್‌ಮೆಂಟ್‌ಗಳ ನೌಕರರು ಪಾಸ್‌ಗಳನ್ನು ಪಡೆಯಬಹುದು.

6. ಮಾನವ ಸಂಪನ್ಮೂಲ ಸಚಿವಾಲಯ: ಸನ್ನದ್ಧ ಸ್ವಯಂಸೇವಕರು ಪಾಸ್ ಪಡೆಯಬಹುದು

7. ಸರಕು ವಾಹನಗಳು ಸಾರಿಗೆ ಸಚಿವಾಲಯದ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಸಾಂಸ್ಥೆಯ ಮಾಲಕರು ನೇರವಾಗಿ ಅಥವಾ ಉದ್ಯೋಗಿ ಸಂಸ್ಥೆಯ ಮುಖಾಂತರ ಅರ್ಜಿ ಸಲ್ಲಿಸಬಹುದು.

8. ಸೌದಿ ಕಸ್ಟಮ್ಸ್ ವೆಬ್‌ಸೈಟ್ ಮೂಲಕ: ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಲಾಜಿಸ್ಟಿಕ್ಸ್ ಸೇವೆ

9. ಬಂದರು ಸೇವೆಗಳಿಗೆ ಬಂದರು ಪ್ರಾಧಿಕಾರದಿಂದ ಪಾಸ್ ಪಡೆಯಬೇಕು.

10. ಕೃಷಿ ನೀರು ಸಚಿವಾಲಯದ ವೆಬ್‌ಸೈಟ್ ಮೂಲಕ: ಕುಡಿಯುವ ನೀರಿಗಾಗಿ ಮತ್ತು ರೈತರು ಅರ್ಜಿ ಸಲ್ಲಿಸಬೇಕು

11. ಸಾಮ ವೆಬ್‌ಸೈಟ್ ಮೂಲಕ: ನಜ್ಮ್, ವಿಮೆ ಮತ್ತು ಬ್ಯಾಂಕಿಂಗ್ ಸೇವೆಗಳ ನೌಕರರು ಪಾಸ್ ಪಡೆಯಬೇಕು

12. ಇಂಧನ ಸಚಿವಾಲಯದ ವೆಬ್‌ಸೈಟ್ ಮೂಲಕ: ಪೆಟ್ರೋಲ್ ಪಂಪ್ ನೌಕರರು ಮತ್ತು ಗ್ಯಾಸ್ ಅಂಗಡಿಗಳ ನೌಕರರು ಪಾಸ್ ಪಡೆಯಬೇಕು

13. ಆಹಾರ ಕಾರ್ಖಾನೆಗಳು ವಾಣಿಜ್ಯ ಸಚಿವಾಲಯದಿಂದ ಪಾಸ್ ಪಡೆಯಬೇಕು.

14. ಕಂಪನಿಗಳ ನೌಕರರನ್ನು ಸಾಗಿಸುವ ಬಸ್‌ಗಳು ಅರ್ಧದಷ್ಟು ಉದ್ಯೋಗಿಗಳಿಗೆ ಪಾಸ್ ಪಡೆಯಬೇಕು.

ಪ್ರಮುಖ ಸೂಚನೆ: ಪಾಸ್ ಪಡೆದವರು ಅದರಲ್ಲಿ ಗೃಹ ಸಚಿವಾಲಯದ ಪ್ರಮಾಣೀಕರಣವನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದು ಇಲ್ಲದಿದ್ದರೆ ದಂಡ ಖಚಿತವಾಗಿದೆ.

error: Content is protected !! Not allowed copy content from janadhvani.com