janadhvani

Kannada Online News Paper

ಎಸ್ಸೆಸ್ಸೆಫ್ ತುರ್ತು ಸೇವಾ ತಂಡದ ಮನವಿಗೆ ತಕ್ಷಣ ಸ್ಪಂದಿಸಿದ ಪುತ್ತೂರು ಎ.ಸಿ

ನೆಲ್ಯಾಡಿ: ಕೋವಿಡ್-19 ಭಾಗವಾಗಿ ದೇಶಾದ್ಯಂತ ಲಾಕ್ ಡೌನ್ ನಡುವೆ ತನ್ನ ಮಗನ ಪಾರ್ಥಿವ ಶರೀರ ನೋಡಲು ಆಗದೆ ಸಿಕ್ಕಿಹಾಕಿಕೊಂಡ ವ್ಯಕ್ತಿಯನ್ನು ಊರಿಗೆ ತಲುಪಿಸಲು ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದ ಪುತ್ತೂರು ಎಸಿ ಯತೀಶ್ ಉಳ್ಳಾಲ್.

ಸುರತ್ಕಲ್ ಮುಲ್ಕಿ ನಿವಾಸಿ ಮುಹಮ್ಮದ್ ಇಸ್ಮಾಯಿಲ್(21) ಎಂಬವರು ಅನಾರೋಗ್ಯದಿಂದ ಮಂಗಳವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಯುವಕನ ತಂದೆ ನೆಲ್ಯಾಡಿ ಎಂಬಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವಾರು ದಿನದಿಂದ ಸಿಕ್ಕಿಹಾಕಿಕೊಂಡಿದ್ದರು.

ಅತ್ತ ತನ್ನ ಮಗನ ಪಾರ್ಥಿವ ಶರೀರ ನೋಡಲಾಗದೆ, ಇತ್ತ ಲಾಕ್ ಡೌನ್ ನಲ್ಲಿ ಸಿಕ್ಕಾಕಿಕೊಂಡ ಯುವಕನ ತಂದೆಯು ಉಪ್ಪಿನಂಗಡಿ ಡಿವಿಶನ್ ಅಧ್ಯಕ್ಷರಾದ ಮುಹಮ್ಮದ್ ಮಿಸ್ಭಾಹಿಯರನ್ನು ಸಂಪರ್ಕಿಸಿ ಸಹಾಯ ಯಾಚಿಸಿದ್ದರು. ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ನೆಲ್ಯಾಡಿ ಎಸ್ಸೆಸ್ಸೆಫ್ ತುರ್ತು ಸೇವಾ ವಿಭಾಗಕ್ಕೆ ಮಾಹಿತಿ ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ನೆಲ್ಯಾಡಿ ಎಸ್ಸೆಸ್ಸೆಫ್ ತುರ್ತು ಸೇವಾ ತಂಡದ ಕಾರ್ಯಕರ್ತರು ಯುವಕನ ತಂದೆಯನ್ನು ಮಂಗಳೂರು ಹಾಸ್ಪಿಟಲಿಗೆ ತಲುಪಿಸಲು ಬೇಕಾಗ ಪೊಲೀಸ್ ಇಲಾಖೆಯ ಪರಾವನಿಗೆಗೆ ನೆಲ್ಯಾಡಿ ಹೊರಠಾಣೆಯನ್ನು ಸಂಪರ್ಕಿಸಿ ಪುತ್ತೂರು ಎಸಿ ಯವರ ಮೂಲಕ ಎಲ್ಲಾ ದಾಖಲೆ ಸರಿಪಡಿಸಿ ತಕ್ಷಣ ಅವರನ್ನು ಮಂಗಳೂರು ಹಾಸ್ಪಿಟಲಿಗೆ ತಲುಪಿಸಿ ಮಾನವೀಯತೆ ಮೆರೆದರು.

ಪುತ್ತೂರು ಎ.ಸಿ ಯವರನ್ನು ಸಂಪರ್ಕಿಸಿದಾಗ ಕ್ಷಣಾರ್ಧದಲ್ಲಿ ಇದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ ಪುತ್ತೂರು ಎ.ಸಿ ಹಾಗೂ ನೆಲ್ಯಾಡಿ ಹೊರಠಾಣಾ ಪೊಲೀಸ್ ಅಧಿಕಾರಿಗಳ ಕಾರ್ಯ ವೈಖರಿಗೆ ಸಾರ್ವಜನಿಕರು ಪ್ರಶಂಸಿದ್ದಾರೆ.

ನೆಲ್ಯಾಡಿ ಎಸ್ಸೆಸ್ಸೆಫ್ ತುರ್ತು ಸೇವಾ ಸಾಂತ್ವನ ವಿಭಾಗ ನೆಲ್ಯಾಡಿ ಭಾಗದಲ್ಲಿ ಈಗಾಗಲೇ ಹಲವು ಜೀವ ಕಾರುಣ್ಯ ಸೇವೆ ಗಳಿಂದ ಜನಮನ್ನಣೆ ಗಳಿಸಿವೆ.

error: Content is protected !! Not allowed copy content from janadhvani.com