janadhvani

Kannada Online News Paper

ಸ್ಕೈಪ್, ಝೂಮ್, ವೆಬ್‌ಎಕ್ಸ್ ಮುಂತಾದವುಗಳ ಹಿಂದೆ ಹ್ಯಾಕರ್ಸ್- ಎಚ್ಚರಿಕೆ

ಸ್ಕೈಪ್, ಝೂಮ್, ವೆಬ್‌ಎಕ್ಸ್ ಮತ್ತು ಸ್ಲಾಕ್‌ನಂತಹ ಸಾಮಾಜಿಕ ಮೀಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸಲು ನೀವು ಬಯಸುವುದಾದರೆ, ಸರಿಯಾದ ಅಪ್ಲಿಕೇಶನ್ ಅನ್ನು ಬಳಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಲಾಕ್‌ಡೌನ್ ಸಮಯದಲ್ಲಿ ಇವುಗಳು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ ಸೈಬರ್‌ ಅಪರಾಧಿಗಳು ಈ ಅಪ್ಲಿಕೇಶನ್‌ಗಳ ಹಿಂದೆ ಸಕ್ರೀಯರಾಗಿದ್ದಾರೆ.

ಈ ಅಪ್ಲಿಕೇಶನ್‌ಗಳ ಹೆಸರನ್ನು ಹೋಲುವ ನಕಲಿ ಅಪ್ಲಿಕೇಶನ್‌ಗಳು ಆನ್‌ಲೈನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಪ್ರಚಾರವಾಗುತ್ತಿದೆ. ಸೈಬರ್ ಭದ್ರತಾ ಸಂಸ್ಥೆಯು ಅವುಗಳಲ್ಲಿ ಹಲವು ಆ್ಯಪ್‌ಗಳು ಮಾಲ್ವೇರ್ ಮತ್ತು ಆಡ್ವೇರ್ಗಳನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ.

ಸಾಮಾಜಿಕ ಮೀಟಿಂಗ್ ಅಪ್ಲಿಕೇಶನ್‌ಗಳು, ಕೋವಿಡ್ -19 ನಿಯಮಗಳಿಂದ ಬಾಧಿತರಾದ ಜನರಿಗೆ ಸಂವಹನ ನಡೆಸಲು ಸುಲಭವಾದ ಮಾರ್ಗವಾಗಿದೆ. ಅಂತಹ ಆ್ಯಪ್‌ಗಳು ಸುರಕ್ಷಿತವಾಗಿದೆಯೇ ಎಂದು ಕ್ಯಾಸ್ಪರ್ಸ್ಕಿ ತಜ್ಞರು ಪರಿಶೀಲಿಸಿದ್ದಾರೆ. ನಂತರದ ವಿಶ್ಲೇಷಣೆಯಲ್ಲಿ ಪ್ರಮುಖ ಅಪ್ಲಿಕೇಶನ್‌ಗಳಾದ ಝೂಮ್, ವೆಬ್‌ಎಕ್ಸ್ ಮತ್ತು ಸ್ಲಾಕ್‌ನಂತೆಯೇ 1,300 ಫೈಲ್‌ಗಳು ಕಂಡುಬಂದಿವೆ. ಆ 1,300 ರಪೈಕಿ 200ರಲ್ಲಿ ಸುರಕ್ಷತಾ ಬೆದರಿಕೆಗಳಿದೆ. ಅತ್ಯಂತ ಪ್ರಚಾರ ಇರುವ ಡೀಲ್ ಪ್ಲೈ, ಡೌನ್‌ಲೋಡ್ ಸ್ಪೋನ್ಸರ್ ಮುಂತಾದ ಆಡ್ ವೇರ್‌ಗಳು ಇವೆ.

ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳ ಹೊರತಾದ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳಿಂದ ಈ ರೀತಿಯ ಆಡ್‌ವೇರ್ ಮತ್ತು ಮಾಲ್‌ವೇರ್ ನುಸುಳುತ್ತದೆ. ಜಾಹೀರಾತುಗಳನ್ನು ಒದಗಿಸುತ್ತಾ, ಅದಕ್ಕಾಗಿ ಹಲವು ಕುತಂತ್ರಗಳನ್ನು ಉಪಯೋಗಿಸುತ್ತದೆ. ಮತ್ತು ವಿವಿಧ ಬದಲಾವಣೆಗಳನ್ನು ಈ ಆ್ಯಡ್ವೇರ್‌ಗಳು ಪ್ರದರ್ಶಿಸುತ್ತವೆ. ಆಡ್ವೇರ್ ದುರುದ್ದೇಶಪೂರಿತ ಸಾಫ್ಟ್‌ವೇರ್ ಅಲ್ಲದಿದ್ದರೂ, ಗೌಪ್ಯತೆಗೆ ಅಪಾಯವನ್ನು ಉಂಟುಮಾಡಬಹುದಾಗಿದೆ.

ಅಪರಾಧಿಗಳು ಅತ್ಯಂತ ಹೆಚ್ಚು ದುರುಪಯೋಗ ಪಡಿಸುವ ಅಪ್ಲಿಕೇಶನ್ ಸ್ಕೈಪ್ ಆಗಿದೆ. ಈ ಅಪ್ಲಿಕೇಶನ್‌ನ ಹೆಸರು ಬಳಸಿದ ಅನುಮಾನಾಸ್ಪದ ಬಳಕೆಯ 120,000 ಫೈಲ್‌ಗಳನ್ನು ಕ್ಯಾಸ್ಪರ್ಸ್ಕಿ ತಜ್ಞರಿಗೆ ಕಂಡುಹಿಡಿಯಲು ಸಾಧ್ಯವಾಗಿದೆ. ಇತರ ಅಪ್ಲಿಕೇಶನ್ ಹೆಸರುಗಳಿಗಿಂತ ಭಿನ್ನವಾಗಿ ಮಾಲ್ವೇರ್ ವಿತರಿಸಲು ಸ್ಕೈಪ್ ಹೆಸರನ್ನು ಹೆಚ್ಚಾಗಿ ಬಳಸಲಾಗುತ್ತದೆ.

error: Content is protected !! Not allowed copy content from janadhvani.com