janadhvani

Kannada Online News Paper

ಕೋವಿಡ್ ಹೆಚ್ಚಳ: ಮದೀನಾದ 6 ಪ್ರದೇಶಗಳಲ್ಲಿ ಪೂರ್ಣ ಕರ್ಫ್ಯೂ- ಮನೆ ಮನೆಗೆ ತಲುಪಲಿದೆ ಆಹಾರ

ಮದೀನಾ,ಎ.10: ಕೊರೋನಾ ಬಾಧಿತರ ಸಂಖ್ಯೆ ಏರಿಕೆಯಾದ ಕಾರಣ ಮದೀನಾದಲ್ಲಿ ಹರಮ್‌ಗೆ ಹೊಂದಿಕೊಂಡಿರುವ ಆರು ಪ್ರಮುಖ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಕರ್ಫ್ಯೂ ವಿಧಿಸಲಾಗಿದೆ.

ಹರಮ್‌ನ ಪಕ್ಕದಲ್ಲಿರುವ ಆರು ಜಿಲ್ಲೆಗಳ ನಿವಾಸಿಗಳು ತಮ್ಮ ಮನೆಗಳಿಂದ ಹೊರಡಬಾರದು, ಆಹಾರ ಸಾಮಗ್ರಿಗಳನ್ನು ತಮ್ಮ ಮನೆಗಳಿಗೇ ತಲುಪಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ. ಈ ಪ್ರದೇಶಗಳಲ್ಲಿ ಕಳೆದ 24 ತಾಸುಗಳಲ್ಲಿ 78 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ವೈರಸ್ ತಗುಲಿದ 19 ಮಂದಿ ಮೃತಪಟ್ಟಿದ್ದು, ಸೋಂಕು ತಗುಲಿದವರಲ್ಲಿ ಕೇವಲ ನಾಲ್ಕು ಮಂದಿ ಗುಣಮುಖರಾಗಿದ್ದಾರೆ.

ಕೆಳಗಿನ ನಕ್ಷೆಯ ಕೆಂಪು ಗಡಿಯೊಳಗೆ ಇರುವ ಪ್ರದೇಶಗಳ ಎಲ್ಲರಿಗೂ ಈ ಆದೇಶ ಅನ್ವಯಿಸುತ್ತದೆ.

ಇದು ಕುರ್ಬಾನ್, ಬನಿ ಝುಫರ್, ಶೂರೈಬಾತ್, ಜುಮುಆ ಬನೀಕುದ್ರಾ ಮತ್ತು ಇಸ್ಕಾನ್‌ನ ಒಂದು ಪ್ರದೇಶ ಒಳಗೊಂಡಿದೆ.ಈ ಹಿಂದೆ ಇಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿತ್ತು.

ಸಾರ್ವಜನಿಕರ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ಫ್ಯೂ ಕಠಣಗೊಳಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com