janadhvani

Kannada Online News Paper

ಪರಿಸ್ಥಿತಿ ಕೈ ಮೀರಿದೆ, ಇನ್ನೂ ನಾವು ಚಿಂತಿಸದೇ ಹೋದಲ್ಲಿ ನಾಶವೇ ಕಟ್ಟಿಟ್ಟ ಬುತ್ತಿ

✍️ ಇಂಝಮ್ ಉಲ್ ಹಕ್ ಬಜ್ಪೆ

ಎಲ್ಲರೂ ಕೊರೋನ ಎಂಬ ಮಾರಕವಾದ ರೋಗದ ಬಗ್ಗೆ ಚಿಂತೆಯಲ್ಲಿದ್ದಾರೆ, ಸರ್ಕಾರ ಮತ್ತು ಆರೋಗ್ಯ ಇಲಾಖೆ ಹಲಾವಾರು ನಿರ್ದೇಶನಗಳನ್ನು ನೀಡುತ್ತಿದೆ. ಅದನ್ನು ಅನುಸರಿಸಿ ಎಲ್ಲರೂ ಅಂತರ ಪಾಲಿಸಿ ಮನೆಯಲ್ಲೇ ಇದ್ದು ಜಾಗ್ರತೆ ವಹಿಸಿದರೆ ಕೊರೋನ ಎಂಬ ಮಾರಕವಾದ ರೋಗದಿಂದ ಮುಕ್ತಿ ಹೊಂದಬಹುದು. ಇದೊಂದು ತಾತ್ಕಾಲಿಕ ತುರ್ತು ಪರಿಸ್ಥಿತಿ ಎಂದು ಅರಿತು ಸಮಾಧಾನದೊಂದಿಗೆ ಜಾಗ್ರತೆ ಪಾಲಿಸಿದರೆ ಸಾಕು.

ಆರ್ಥಿಕ ಸಂಕಷ್ಟವೇ…?
ನಮ್ಮ ಮನಸ್ಥಿತಿ ಆಧುನಿಕ ಕಾಲಕ್ಕೆ ತಕ್ಕಂತೆ ಯೋಚಿಸುತ್ತಿದೆ, ಅದರ ಪರಿಣಾಮ ಎಲ್ಲರೂ ಆತಂಕದಲ್ಲಿದ್ದಾರೆ, ಆದರೆ ಒಮ್ಮೆ ನಾವು ಪುರಾತನ ಕಾಲಕ್ಕೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಿದರೆ ಹೆಚ್ಚು ಆತಂಕ ಪಡಬೇಕಾದ ಅಗತ್ಯವೇ ಬರುವುದಿಲ್ಲ.

ಈ ಹಣ ಕೊಟ್ಟು ಸಾಮಾನು ಖರೀದಿ ಮಾಡುವ ಸಮಯ ಆಧುನಿಕ ಜಗತ್ತಿನದ್ದಾಗಿದೆ, ಆದರೆ ಹಣದ ವ್ಯವಹಾರ ಬರುವ ಮುಂಚೆ ಅಗತ್ಯ ವಸ್ತುಗಳ ಬದಲಾಯಿಸುವ ರೂಢಿ ಚಾಲ್ತಿಯಲ್ಲಿತ್ತು. ಅದು ಹೇಗೆಂದರೆ ಒಂದು ಊರಿನಲ್ಲಿ ಅಕ್ಕಿಯ ಅಗತ್ಯವಿದ್ದರೆ ಮತ್ತೊಂದು ಊರಿನಲ್ಲಿ ಇನ್ನೇನಾದರು ವಸ್ತುವಿನ ಅಗತ್ಯವಿರುತ್ತೆ. ಹಾಗಿರುವಾಗ ಅವರು ಅದನ್ನು ಊರಿನ ಅಗತ್ಯಕ್ಕನುಸಾರವಾಗಿ ಬದಲಾಯಿಸುತ್ತಿದ್ದರು.

ನಂತರ ಅದು ಕಲ್ಲು, ಬೆಳ್ಳಿ, ಚಿನ್ನದಂತಹ ವಸ್ತುಗಳನ್ನು ಅದರ ತೂಕ ಅಥವ ಮೌಲ್ಯಕ್ಕನುಸಾರವಾಗಿ ಬದಲಾಯಿಸುವುದರೊಂದಿಗೆ ಚಾಲ್ತಿಯಾಯಿತು ಆದರೆ ಈಗ ಹಾಗಲ್ಲ, ಕ್ಯಾಶ್ ಅಂದ್ ಕ್ಯಾರಿ ಜಗತ್ತು. ಏನೇ ಆಗಲಿ ಈಗ ವಿಷಯಕ್ಕೆ ಬರುತ್ತೇನೆ.

ಫಾಸ್ಟ್ ಫುಡ್’ಗೆ ಹೊಂದಿ ಹೋದ ಆಹಾರ ಪದ್ದತಿ ಅಗತ್ಯವಾದ ಪೌಷ್ಟಿಕ ಆಹಾರಕ್ಕೆ ಹೊಂದಿಕೊಳ್ಳಬೇಕು, ಹಾಗಾದರೆ ನಮ್ಮ ದಿನಚರಿ ಸುಖವಾಗಿ ಹೋಗಬಹುದು.

ಕೆಲವರಿಗೆ ದಿನಾ ಮೀನು, ಕೋಳಿ ‘ಗಳಂತಹ ಮಾಂಸಹಾರವೇ ಬೇಕು ಆದರೆ ಹದಿನೈದು ವರ್ಷಗಳ ಹಿಂದೆಯೇ ರೂಢಿಯಲ್ಲಿದ್ದ ಒಂದು ಆಹರ ಪದ್ಧತಿ ಹೇಗಿತ್ತೆಂದರೆ, ಅನ್ನ ಮತ್ತು ಬೇಳೆ ಸಾರು ಅಥವಾ ಇನ್ಯಾವುದಾದರು ತರಕಾರಿ ಪದಾರ್ಥ ಅದರೊಂದಿಗೆ ಏನಾದರು ಪಳ್ಯ ಅಥವ ಉಪ್ಪಿನಕಾಯಿ. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮಾಂಸಹಾರಿ, ಅದೂ ಕೂಡ ಇಡೀ ಊರೇ ಸುವಾಸನೆಗೆ ಆ ಮನೆಯಲ್ಲಿಂದು ಕೋಳಿ ಅಥವ ಮೀನು ಸಾರು ಅನ್ನುವ ರೀತಿಯಲ್ಲಾಗಿತು. ಇವತ್ತು ಮನೆಯಲ್ಲಿ ಹಲವರಿಗೆ ಹಲವಾರು ರೀತಿಯ ಆಹರ ತಿಂಡಿ. ಆದರೆ ಆವಾಗೆಲ್ಲಾ ಹಾಗಿರಲಿಲ್ಲ, ಒಂದೇ ರೀತಿಯ ಆಹಾರ ಅದೂ ಕೂಡ ದಿನ ಕೆಲಸ ಮಾಡುವವರಿಗೆ ಮತ್ತು ನೆರೆ ಹೊರೆಯವರೆಲ್ಲರಿಗೂ ನೀಡುವಷ್ಟು ಅನ್ನ ಬೇಯುತ್ತಿತ್ತು ಆದರೆ ಈಗ ಹಾಗಲ್ಲ ಬಿಡಿ. ದುಂದುವೆಚ್ಚದಿಂದ ಮನೆಯವರಿಗೇ ಸಾಲದಂತಾಗಿದೆ.

ಆಗಿನ ಕಾಲದಲ್ಲಿ ಸಾಧಾರಣವಾಗಿ ಬಹುತೇಕ ಮನೆಯಲ್ಲಿ ಕೋಳಿ ಸಾಕುವ ಅಭ್ಯಾಸವೂ ಇತ್ತು, ಬಸಳೆ, ನಿಂಬೆಹಣ್ಣು ಹೀಗೆ ಹಲವಾರು ರೀತಿಯ ತರಕಾರಿಗಳು ಎಲ್ಲಾ ಮನೆಯ ಹಿತ್ತಲಿನಲ್ಲಿ ಕಾಣುತ್ತಿತ್ತು. ಹಾಗೇನಾದರು ಮಕ್ಕಳಿಗ್ಯಾರಿಗಾದರು ಬೇಳೆ ಸಾರು ಹಿಡಿಸದೆ ಇದ್ದರೆ ಮನೆಯ ಕೋಳಿ ಇಟ್ಟ ಮೊಟ್ಟೆಯನ್ನು ಅಕ್ಕಿ ಮೂಟೆಯಿಂದ ಅಜ್ಜಿ ತರುತ್ತಿದ್ದರು, ಆ ಮೊಟ್ಟೆಯಲ್ಲೇ ಅದೊಂದು ರೀತಿಯ ಸುಗಂಧ. ಆ‌ ಮೊಟ್ಟೆಯ ಆಮ್ಲೆಟ್’ನ ರುಚಿಯ ಬಗ್ಗೆ ಮಾತೇ ಇಲ್ಲ ಬಿಡಿ.
ಈಗ ವಿಷಯಕ್ಕೆ ಬರುತ್ತೇನೆ, ನಮಗೆಲ್ಲಾ ಈಗ ಅಗತ್ಯ ವಸ್ತುಗಳ ಕೊರತೆ ಏನೂ ಇಲ್ಲ, ನಾವೆಲ್ಲಾ ಪರಸ್ಪರ ಸಹಕಾರಿಯಾಗುವ ರೀತಿಯಲ್ಲಿ ಕೊರತೆ ಇದೆ. ಇಂಥಹ ಸಂದಿಗ್ಧ ಪರಿಸ್ಥಿತಿಯನ್ನು ನಾವು ನೆರೆಹೊರೆಯವರೊಂದಿಗೆ ಪರಸ್ಪರ ಸಹಕಾರಿಯಾಗುವ ರೀತಿಯಲ್ಲಾಗಿದೆ ಜೀವಿಸ ಬೇಕಾಗಿರುವುದು. ಅಂದಿನಂತೆ ಇಂದೂ ಕೂಡ ಸಾಧಾರಣ ಆಹರ ಪದಾರ್ಥಗಳಲ್ಲಿ ತಿಂಗಳುಗಳನ್ನೇ ಕಳೆಯಬಹುದು. ಸಮಯ ಧಾರಳವಿದೆ ಮನೆಯ ಹಿತ್ತಲಿನಲ್ಲಿ ಹಸಿ ತರಕಾರಿಗಳನ್ನು ಬೆಳೆಸಲು ಆರಂಭಿಸಿ. ಹೂವಿನ ಗಿಡಕ್ಕೆ ಸಾಥ್ ನೀಡಿ. ನೆರೆಹೊರೆಯವರೊಂದಿಗೆ ಸಂಪರ್ಕ ಬೆಳೆಸಿ. ತೆಂಗಿನ ಮರಕ್ಕೆ ನೀರು ಬಿಟ್ಟು ಜೀವ ಕೊಡಿ. ನಮ್ಮ ಅಹಂಕಾರಕ್ಕಿಂತ ಸಹಕಾರ ಹೆಚ್ಚು ಮುಖ್ಯ, ಆದ್ದರಿಂದ ನಗು ಮುಖವನ್ನು ತೋರಿಸಿ. ಯರೊಂದಿಗಾದರೂ ದ್ವೇಷವಿದ್ದರೆ ಅವರೊಂದಿಗೆ ಮಾತನಾಡಿ ಸ್ನೇಹ ಬೆಳೆಸಿ. ಕರೆ ಮಾಡಿ ಹಲೋ ಎಂದರೆ ಎಂಥಹ ಕಲ್ಲು ಮನಸ್ಸು ಕೂಡ ಕರಗುತ್ತೆ. ಅಂತರ್ಜಾಲವನ್ನು ಬಿಟ್ಟು ನೇರ ಫೋನ್ ಕರೆಯಲ್ಲಿ ಸಂಭಾಷಣೆ ಮಾಡಿ. “You Won’t get this chance again. You can feel and live, It’s your Life”. ಈ ಸಂದರ್ಭವನ್ನು ಗಿಫ್ಟ್ ಆಗಿ ಸ್ವೀಕರಿಸಿ.

ಬೋರ್ ಆಗುತ್ತಾ, ಪುಸ್ತಕ ಓದಿ
ಬಹುತೇಕ ಜನರು ತಿಳಿದಿರುವುದೇನೆಂದರೆ ಬೋರ್ ಆದಗ ಮೊಬೈಲ್’ನಲ್ಲಿ ಚಾಟಿಂಗ್ ಅಥವಾ ಆಟವಾಡುತ್ತಾ ಕಾಲ ಕಳೆಯಬೇಕು.ಆದರೆ ವಾಸ್ತವಿಕವಾಗಿ ಮೊಬೈಲ್ ನೋಡುವುದರಿಂದ ನಮ್ಮ ಮನಸ್ಸಲ್ಲಿ ಹೆಚ್ಚು ಆತಂಕ ಉಂಟಾಗುತ್ತೆ, ಮನಸ್ಸು ಮತ್ತು ದೇಹ ಎರಡೂ ಕೂಡ ಹೆಚ್ಚು ಭಾರವಾಗುತ್ತೆ. ಬೇಕಿದ್ದರೆ ನಾಲ್ಕು ದಿನ ಫೋನ್ ಬಿಟ್ಟು ಜೀವಿಸಿ, ನೀವೇ ಆಶ್ಚರ್ಯ ಪಡುತ್ತೀರ ಯಾಕೆಂದರೆ ಮನಸ್ಸು ಅಷ್ಟೊಂದು ಉಲ್ಲಾಸಗೊಂಡಿರುತ್ತೆ.

ಈ ನಾಲ್ಕು ದಿನದಲ್ಲಿ ಮನೆಯವರೊಂದಿಗೆ ಮಾತನಾಡಿ, ಮಕ್ಕಳೊಂದಿಗೆ ಮಾತನಾಡಿ, ಪುಸ್ತಕ ಓದಿ, ನಿಮ್ಮ ಹಳೆಯ ದಿನದ ನೆನಪುಗಳನ್ನು ಪುಸ್ತಕದಲ್ಲಿ ಬರೆಯಿರಿ. ನಿಮ್ಮ ಚಡ್ಡಿ ದೋಸ್ತ್’ಗಳೊಂದಿಗೆ ಕಳೆದ ದಿನಗಳನ್ನು ಬರೆಯಿರಿ. ಮನಸ್ಸನ್ನು ಹತೋಟಿಗೆ ತನ್ನಿ. ಯಾರೊಂದಿಗೆ ಧ್ವೇಷವಿದೆಯೋ ಅವರ ಒಳ್ಳೆಯ ವಿಚಾರವನ್ನು ನೆನಪಿಸಿಕೊಳ್ಳಿ. ಇದೆಲ್ಲಾ ಮಾಡಿದರೆ ನಿಮ್ಮಗಿನ್ನು ಮೊಬೈಲ್ ಉಪಯೋಗಿಸುವುದಕ್ಕೆ ಸಮಯ ಸಿಗಬಹುದೇ…..!? ಈ ಕಾರ್ಯಗಳನ್ನೆಲ್ಲಾ ಮಾಡುವುದು ಅಷ್ಟೊಂದು ಸಲಭವಲ್ಲ ಎಂದು ತೋಚಿದರೆ ಆ ಮನಸ್ಥಿತಿಯಿಂದ ಮೊದಲು ಹೊರ ಬನ್ನಿ ಯಾಕೆಂದರೆ ನಿಮ್ಮ ಮನಸ್ಥಿತಿ ಬದಲಾದರೆ ನಿಮ್ಮ ಜೀವನವೇ ಅದ್ಭುತ, ನೀವೊಂದು ಸುಂದರವಾದ ಲೋಕಕ್ಕೆ ಪ್ರವೇಶಿಸುತ್ತೀರ.

ಸಾಲವಿಧೆಯ…? ಯೋಚಿಸಬೇಡಿ,

ಯಾರಿಗಿಲ್ಲ ಸಾಲ ಹೇಳಿ.
…! ಸಾಲ ತೀರಿಸುವ ಒಳ್ಳೆಯ ಉದ್ದೇಶವಿದ್ದರೆ ಸಾಲ ತಾನಾಗಿಯೇ ತೀರುತ್ತೆ. ತೊಂದರೆಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿದೆ. ನಾವು ಹೆಚ್ಚು ಯೋಚಿಸಬಾರದು, ಎದುರಿಸಬೇಕು. ನಮಗೆ ದೇವರು ನೀಡಿರುವ ಸಾಮರ್ಥ್ಯ ಅಷ್ಟಿಷ್ಟಲ್ಲ, ಯಾರೂ ಅಸಾಮರ್ಥ್ಯರಲ್ಲ. ಬದುಕಿರುವವರೆಗೂ ದುಡಿದು ತಿನ್ನುವೆನೆಂಬ ಭಾವನೆಯೊಂದಿದ್ದರೆ ಎಂಥಹಾ ಸಾಲವನ್ನೂ ತೀರಿಸಬಲ್ಲಿರಿ.

ಇನ್ನು ಕೋಮುವಾದ ನಿಮ್ಮ ಪ್ರಶ್ನೆಯಾಗಿದ್ದಲ್ಲಿ ಅದಕ್ಕೂ ಒಂದು ಬದಲಾವಣೆ ತರಬಹುದು, ಮೇಲಿನದ್ದು ಸಾಧ್ಯ ಎಂದಾದರೆ ಕೋಮುವಾದಕ್ಕೂ ಬದಲಾವಣೆಯ ಬರಹವನ್ನು ಬರೆಯುತ್ತೇನೆ.

ಎಲ್ಲರ ಸಂತೋಷವೇ ನನ್ನ ಸಂತೋಷ

error: Content is protected !! Not allowed copy content from janadhvani.com