janadhvani

Kannada Online News Paper

ಕುವೈತ್‌: ಭಾರತೀಯ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ

ಕುವೈತ್ ಸಿಟಿ: ಕುವೈತ್‌ನಲ್ಲಿ ಕೊರೋನ ಸೋಂಕಿನಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ.ಹೊಸತಾಗಿ 79 ಭಾರತೀಯರು ಸೇರಿದಂತೆ 112 ಜನರಿಗೆ ಕೊರೋನ ಕಾಯಿಲೆ ಇರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್‌ಗೆ ಒಳಗಾದವರ ಸಂಖ್ಯೆ 855 ತಲುಪಿದೆ. ಆ ಪೈಕಿ 442 ಮಂದಿ ಭಾರತೀಯರು.

ಕ್ಯಾರೆಂಟೈನ್‌ನಲ್ಲಿದ್ದ 111 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು 743 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 21 ಮಂದಿ ತೀವ್ರ ನಿಗಾದಲ್ಲಿದ್ದಾರೆ. ಏತನ್ಮಧ್ಯೆ, ಇಂದು 6 ಜನರು ರೋಗದಿಂದ ಮುಕ್ತರಾಗಿದ್ದಾರೆ. ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಡಾ.ಬಾಸಿಲ್ ಅಲ್ ಸಬಾಹ್ ಹೇಳಿದ್ದಾರೆ.

ಏತನ್ಮಧ್ಯೆ, ಸರಕಾರಿ ಆಸ್ಪತ್ರೆಗಳಲ್ಲಿನ ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಾರ್ವಜನಿಕ ಆಸ್ಪತ್ರೆಗಳ ಸಮೀಪವಿರುವ ಶಾಲೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಲೋಕೋಪಯೋಗಿ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ಇತರ ಇಲಾಖೆಗಳೊಂದಿಗೆ ಯುದ್ಧ ಕಾಲದ ಆಧಾರದ ಮೇಲೆ ವಸತಿ ಒದಗಿಸಲಾಗುವುದು.

ಕೋವಿಡ್ ರೋಗಿಗಳೊಂದಿಗೆ ಸಂವಹನ ನಡೆಸುವ ಆರೋಗ್ಯ ಕಾರ್ಯಕರ್ತರು ವಸತಿ ಪ್ರದೇಶಗಳಲ್ಲಿ ಇತರ ಜನರೊಂದಿಗೆ ಉಳಿದುಕೊಳ್ಳುವುದರಿಂದ ಕೋವಿಡ್ ವ್ಯಾಪಕಗೊಳ್ಳುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಈ ನಡೆ ಎನ್ನಲಾಗಿದೆ. ಆರೋಗ್ಯ ವೃತ್ತಿಪರರಲ್ಲಿ ಹೆಚ್ಚಿನವರು ಕೇರಳ ಮೂಲದವರಾಗಿದ್ದಾರೆ. ಕುಟುಂಬದಿಂದ ದೂರವಿದ್ದು ಎಷ್ಟು ದಿನ ಎಂಬ ಆತಂಕವೂ ಅವರನ್ನು ಕಾಡುತ್ತಿದೆ.

error: Content is protected !! Not allowed copy content from janadhvani.com