janadhvani

Kannada Online News Paper

ದೇಶದಲ್ಲಿ ಕೋವಿಡ್ ಹರಡಲು ‘ತಬ್ಲೀಗ್’‌ ಕಾರಣ ಎನ್ನಲಾಗದು- ಜಿಫ್ರಿ ತಂಙಳ್

ಕಲ್ಲಿಕೋಟೆ: ದೇಶದಲ್ಲಿ ಕೋವಿಡ್ ರೋಗ ಹರಡಲು ತಬ್ಲೀಗ್‌ನವರು ಮತ್ತವರ ನಿಝಾಮುದ್ದೀನ್ ಸಮ್ಮೇಳನವನ್ನು ಕಾರಣ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಮಸ್ತ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದ್ದಾರೆ.

ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸುವ ಮೊದಲು ನಿಝಾಮುದ್ದೀನ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಕೋವಿಡ್ ಹರಡಿರುವ ನೆಪದಲ್ಲಿ ಇಸ್ಲಾಂ ಮತ್ತು ಮುಸ್ಲಿಮರನ್ನು ದೂಷಿಸುವುದನ್ನು ಅಂಗೀಕರಿಸಲು ಸಾಧ್ಯವಿಲ್ಲ.

ತಬ್ಲೀಗ್ ನ ಆದರ್ಶವು ಸಮಸ್ತ ದ ಆದರ್ಶಕ್ಕೆ ವಿರುದ್ಧವಾಗಿದ್ದರೂ,ಸರಕಾರದ ಅನುಮತಿ ಪಡೆದು ಸಮ್ಮೇಳನವನ್ನು ನಡೆಸಿದ್ದರೆ ತಬ್ಲೀಗ್‌ನವರನ್ನು ಆರೋಪಿಸುವುದು ಸರಿಯಲ್ಲ. ಆದರೂ ಸಮ್ಮೇಳನ ನಡೆಸಿದವರು ಆರೋಗ್ಯ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿತ್ತು ಎಂದು ಜಿಫ್ರಿ ತಂಙಳ್ ಹೇಳಿದರು.

ಕೊರೋನಾ ವೈರಸ್ ನ್ನು ತಡೆಗಟ್ಟುವ ಸಲುವಾಗಿ ಸಲಕಾರದ ಆದೇಶದ ಮೇರೆಗೆ ಮಸೀದಿಗಳು ಮತ್ತು ಮದರಸಾಗಳನ್ನು ಮುಚ್ಚಳಾಗಿದೆ, ಆದರೂ ಅಲ್ಲಿ ಕೆಲಸ ಮಾಡುವ ಖತೀಬ್, ಮುಅದ್ಸಿನ್ ಹಾಗೂ ಮದ್ರಸಾ ಅದ್ಯಾಪಕರಿಗೆ ಮೊಹಲ್ಲಾ ಸಮಿತಿ ಸಂಬಳವನ್ನು ನೀಡಲು ಸಿದ್ಧರಾಗಿರಬೇಕು ಎಂದು ಜಿಫ್ರಿ ತಂಙಳ್ ಹೇಳಿದರು.

error: Content is protected !! Not allowed copy content from janadhvani.com