janadhvani

Kannada Online News Paper

ಅನುಮತಿ ನಿರಾಕರಣೆ: ಸದ್ಯ ಭಾರತಕ್ಕಿಲ್ಲ ಎಮಿರೇಟ್ಸ್ ಪ್ರಯಾಣ

ಕೊಚ್ಚಿ: ಭಾರತದಲ್ಲಿ ಲಾಕ್‌ಡೌನ್ ಮುಂದುವರಿದಿರುವ ಕಾರಣ,ಭಾರತ ಅನುಮತಿ ನಿರಾಕರಿಸಿದ್ದು,ಸಧ್ಯ ಎಮಿರೇಟ್ಸ್ ಏರ್ ಲೈನ್ಸ್ ವಿಮಾನಯಾನವನ್ನು ಪ್ರಾರಂಭಿಸುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಏಪ್ರಿಲ್ 6 ರಿಂದ ಎಮಿರೇಟ್ಸ್ ಭಾರತಕ್ಕೆ ವಿಮಾನಯಾನ ಆರಂಭಿಸಲಿದೆ ಎಂಬ ವರದಿಗಳು ಬಂದಿದ್ದವು. ಆದರೆ, ಎಮಿರೇಟ್ಸ್ ಬಿಡುಗಡೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ಇಲ್ಲ. ದುಬೈನಿಂದ ಲಂಡನ್, ಪ್ಯಾರಿಸ್, ಬ್ರಸೆಲ್ಸ್ ಮತ್ತು ಜುರಿಚ್‌ಗೆ ಎ.6ರಂದು ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಎಮಿರೇಟ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ನೆಡುಂಬಾಶ್ಸೇರಿ ಮತ್ತು ತಿರುವನಂತಪುರಂ ಸೇರಿದಂತೆ ಭಾರತದ ಏಳು ನಗರಗಳಿಗೆ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ತಿಳಸಲಾಗಿದ್ದು, ವಿಮಾನಗಳ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಗೊಳಿಸಿದ್ದವು. ಆದಾಗ್ಯೂ, ಎಮಿರೇಟ್ಸ್ ಅಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢೀಕರಿಸಿರಲಿಲ್ಲ ಮತ್ತು ಆಯಾಯ ದೇಶಗಳ ಅನುಮತಿಯೊಂದಿಗೆ ಮಾತ್ರ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿತ್ತು.

ಅನುಮೋದನೆ ಪಡೆದ ದೇಶಗಳಲ್ಲಿ ಪ್ರಸಕ್ತ ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ. ಹೆಚ್ಚಿನ ದೇಶಗಳ ಅನುಮತಿಯೊಂದಿಗೆ ಸೇವೆಗಳನ್ನು ವಿಸ್ತರಿಸಲಾಗುವುದು. ಆ ದೇಶಗಳಿಗೆ ತುರ್ತು ಪ್ರವೇಶವನ್ನು ಹೊಂದಬೇಕಾದ ಅನುಮತಿ ಪತ್ರ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.

error: Content is protected !! Not allowed copy content from janadhvani.com