janadhvani

Kannada Online News Paper

ಕೋವಿಡ್-19 ‘ಡ್ರೈವ್-ಥ್ರೂ’ತಪಾಸಣೆ: ಶೀಘ್ರ ಫಲಿತಾಂಶ

ಅಬುಧಾಬಿ: ಕೋವಿಡ್ ತಪಾಸಣೆ ಸೌಲಭ್ಯವು ಇನ್ನು ಮುಂದೆ ಅಬುಧಾಬಿಯಲ್ಲಿ ಕೇವಲ ಐದು ನಿಮಿಷಗಳಲ್ಲಿ ಲಭ್ಯವಾಗಲಿದೆ. ಇಲ್ಲಿ ಗರಿಷ್ಠ ಸಂಖ್ಯೆಯ ಪರೀಕ್ಷೆಗಳಿಗೆ ಅತ್ಯಾಧುನಿಕ ಪರೀಕ್ಷಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಅಬುಧಾಬಿ ಝಾಯಿದ್ ಸ್ಪೋರ್ಟ್ಸ್ ಸಿಟಿ ಡ್ರೈವ್-ಥ್ರೂ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಅಲ್ಲಿ ಕೋವಿಡ್ ಪರಿಶೀಲನೆಯನ್ನು ಸುಲಭವಾಗಿ ನಡೆಸಬಹುದಾಗಿದೆ. ಅಬುಧಾಬಿ ಯುವರಾಜ ಮತ್ತು ಯುಎಇ ಉಪ ಕಮಾಂಡರ್-ಇನ್-ಚೀಫ್ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನೆಯನ್ನು ವಾಹನದಲ್ಲಿ ಸ್ವಯಂ ತಪಾಸಣೆಗೊಳಪಡುವ ಮೂಲಕ ನಡೆಸಲಾಯಿತು.

ವಾಹನ ಚಲಾಯಿಸಿ ಬರುವವರ ಬಳಿಗೆ ತರಳುವ ಸೇವಕರು ಶ್ರವ ಸಂಗ್ರಹಿಸುವರು.
ಅಬುಧಾಬಿಯ ಆರೋಗ್ಯ ಇಲಾಖೆ ‘ಸೇಹಾ’ದ ಸಹಾಯದಿಂದ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಪರೀಕ್ಷೆಗಾಗಿ ಡ್ರೈವ್-ಥ್ರೂ ವ್ಯವಸ್ಥೆಯನ್ನು ನೀಡುವ ವಿಶ್ವದ ಐದನೇ ರಾಷ್ಟ್ರವೂ ಯುಎಇ ಆಗಿದೆ.

ಮೊದಲ ಹಂತವೆಂದರೆ ಝಾಯಿದ್ ಸ್ಪೋರ್ಟ್ಸ್ ಸಿಟಿಯಲ್ಲಿ ವಿಶೇಷವಾಗಿ ಸುಸಜ್ಜಿತಗೊಳಿಸಿದ ಟೆಂಟ್‌ಗೆ ಬರುವ ಜನರ ಕೈಗಳನ್ನು ಸ್ಯಾನಿಟೈಝರ್ ನೀಡಿ ಸ್ವಚ್ಛ ಗೊಳಿಸುವುದು. ಎಮಿರೇಟ್ಸ್ ಐಡಿಯನ್ನು ಸ್ಕ್ಯಾನ್ ಮಾಡಿದ ನಂತರ, ಅಧಿಕಾರಿ ನಿಗದಿಪಡಿಸಿದ ಮುಂದಿನ ಹಂತಕ್ಕೆ ವಾಹನ ಚಲಾಯಿಸಿ ತೆರಳಬೇಕು.

ಶ್ರವವನ್ನು ನೀಡಿದ ನಂತರ ದೇಹದ ಉಷ್ಣತೆಯನ್ನು ಪರಿಶೀಲಿಸಲಾಗುತ್ತದೆ. ಇಲ್ಲಿಗೆ ಪರೀಕ್ಷಾ ಹಂತವನ್ನು ಮುಗಿಸಿ, ಹಿಂತಿರುಗಬಹುದು. ಆರು ಗಂಟೆಗಳ ನಂತರ ಎಸ್‌ಎಂಎಸ್ ಮತ್ತು ಸೇಹಾ ಆ್ಯಪ್ ಮೂಲಕ ಫಲಿತಾಂಶಗಳು ಲಭ್ಯವಿರುತ್ತವೆ. ಕೇಂದ್ರದ ಸೇವೆಗಳು ನಿವಾಸಿಗಳಿಗೆ ಮಾತ್ರವಲ್ಲದೆ ವಿದೇಶಿಯರಿಗೂ ಪ್ರಯೋಜನಕಾರಿಯಾಗಲಿದೆ.

error: Content is protected !! Not allowed copy content from janadhvani.com