janadhvani

Kannada Online News Paper

ಖಾಸಗಿ ಸಂಸ್ಥೆಗಳ ಕಾರ್ಮಿಕರ ವಜಾ, ವೇತನ ಕಡಿತಕ್ಕೆ ಅನುಮತಿ

ದುಬೈ: ಯುಎಇ ಕಾರ್ಮಿಕ ಸಚಿವಾಲಯವು ಖಾಸಗಿ ಸಂಸ್ಥೆಗಳ ಸಿಬ್ಬಂದಿಯನ್ನು ಕಡಿತಗೊಳಿಸಲು ಮತ್ತು ಕಾರ್ಮಿಕರ ವೇತನವನ್ನು ಕಡಿಮೆಗೊಳಿಸಲು ಅನುಮತಿ ನೀಡಿದೆ. ಕೋವಿಡ್ 19ರ ಆರ್ಥಿಕ ಪರಿಣಾಮವನ್ನು ಹಿಮ್ಮೆಟ್ಟಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಯುಎಇ ಕಾರ್ಮಿಕ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಹೆಚ್ಚುವರಿ ಕಾರ್ಮಿಕರನ್ನು ವರ್ಚುವಲ್ ಉದ್ಯೋಗ ಮಾರುಕಟ್ಟೆಯಲ್ಲಿ ನೋಂದಾಯಿಸಿ, ಅವರನ್ನು ವಜಾಗೊಳಿಸಬಹುದು. ಉದ್ಯೋಗಿಗಳಿಗೆ ಬೇರೆಡೆ ಉದ್ಯೋಗ ಪಡೆಯಲು ಈ ಮೂಲಕ ಸಾಧ್ಯವಾಗಲಿದೆ.

ಅಲ್ಲದೇ, ಉದ್ಯೋಗ ಒಪ್ಪಂದವನ್ನು ಬದಲಾಯಿಸುವ ಮೂಲಕ ವೇತನವನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಕಡಿತಗೊಳಿಸಲು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಇದು ಪರಸ್ಪರ ತಿಳುವಳಿಕೆಯನ್ನು ಆಧರಿಸಿರಬೇಕು. ಸಂಬಳ ಸಹಿತ ರಜೆ ಅಥವಾ ಮನೆಯಲ್ಲಿ ಕೆಲಸ ಮಾಡಲು ನೌಕರರಿಗೆ ನಿರ್ದೇಶಿಸಬಹುದು.

ವಜಾಗೊಂಡ ನೌಕರರು ದೇಶದಲ್ಲಿ ಉಳಿಯುವವರೆಗೆ ಅಥವಾ ಅವರು ಬೇರೆ ಉದ್ಯೋಗ ಪಡೆಯುವವರೆಗೂ ಸಂಬಳ ಪಾವತಿಸದಿದ್ದರೂ, ಅವರ ವಾಸ್ತವ್ಯ ಸೇರಿದಂತೆ ಖರ್ಚನ್ನು ಕಂಪನಿ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಾರ್ಮಿಕ ಸಚಿವ ನಾಸರ್ ಥಾನಿ ಅಲ್ಹಮ್ಲಿ ಹೊರಡಿಸಿದ ಆದೇಶವು ಕಳೆದ ತಿಂಗಳ 26 ರಿಂದ ಜಾರಿಗೆ ಬಂದಿದೆ. ಈ ಆದೇಶವು ವಲಸಿಗ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ. ಸ್ಥಳೀಯರಿಗೆ ಅನ್ವಯಿಸುವುದಿಲ್ಲ.

error: Content is protected !! Not allowed copy content from janadhvani.com