janadhvani

Kannada Online News Paper

ಲಾಕ್ ಡೌನ್: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವ್ಯಾಪ್ತಿಯ ಕಾರ್ಯಾಚರಣೆ ಪ್ರಶಂಸನೀಯ

ಉಳ್ಳಾಲ:COVID-19 ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿರುವ “ಲಾಕ್ ಡೌನ್” ಎಲ್ಲಾ ವಾಹನ , ಸಾರಿಗೆ ವ್ಯವಸ್ತೆಗಳಿಗೆ ನಿರ್ಭಂಧ ವಿದಿಸಿದೆ.

ಈ ಹಿನ್ನಲೆಯಲ್ಲಿ. ರೋಗಿಗಳಿಗೆ, ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ, ವಲಸಿಗರಿಗೆ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ವ್ಯಾಪ್ತಿಯಲ್ಲಿರುವ ಸೆಕ್ಟರ್ ನಾಯಕರು ಕಾನೂನು ಬದ್ಧ, ವ್ಯವಸ್ತಿತ ರೀತಿಯಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ತಲಪಾಡಿ ಗಡಿಭಾಗದಿಂದ ಹಿಡಿದು ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊರ ಜಿಲ್ಲೆಗಳಿಂದ ಬಂದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾರ್ಮಿಕರಿಗೆ ತವರು ಜಿಲ್ಲೆಗೆ ಪ್ರಯಾಣಿಸಲು ವಾಹನ ವ್ಯವಸ್ಥೆ, ಆಹಾರವಿಲ್ಲದವರಿಗೆ ಅನ್ನ, ಪಾನೀಯ ವ್ಯವಸ್ಥೆ, ಡಯಾಲಿಸಿಸ್, ಗರ್ಬಿಣಿ, ಅಲ್ಸರ್, ಅಂಗವಿಕಲ ಮುಂತಾದ ರೋಗಿಗಳು ಆಸ್ಪತ್ರೆಗೆ ಸಾಗಿಸಲು ತುರ್ತು ವಾಹನ ವ್ಯವಸ್ಥೆ, ಆಸ್ಪತ್ರೆಯಿಂದ ಮನೆಗೆ ತೆರಳಲು ಸಾದ್ಯವಾಗದೆ ಉಳಿದ ರೋಗಿಗಳನ್ನು ಮನೆಗೆ ಕೊಂಡು ಹೋಗುವ ವ್ಯವಸ್ಥೆ, ಅಗತ್ಯವಾದ ಔಷಧಿ ಸಿಗದೆ ಇದ್ದ ರೋಗಿಗಳಿಗೆ ಔಷಧಿ ಪೂರೈಸುವ ವ್ಯವಸ್ಥೆಗಳನ್ನು ಈ ಕಾರ್ಯಕರ್ತರು ಮಾಡಿ ಮಾದರಿಯಾಗಿದ್ದಾರೆ.

ಕೇಂದ್ರ , ರಾಜ್ಯ ಸರ್ಕಾರದ ಮತ್ತು ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಿ, ಸುನ್ನೀ ಸಂಘಟನೆಗಳಿಗೆ ಸದಾ ಬೆನ್ನೆಲುಬಾಗಿ ಕಾರ್ಯಾಚರಿಸುವ ಕೆ.ಸಿ.ಎಫ್ ನಾಯಕರ ಕರೆಗೆ ಓಗೊಟ್ಟ ತಮ್ಮ ಜೀವವನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ ಎಸ್ಸೆಸ್ಸೆಫ್ ರಾಜ್ಯ ಸಮಿತಿ ನೀಡಿದ ನಿರ್ದೇಶನದಂತೆ ಕಾರ್ಯಚರಣೆಗಾಗಿ “Q TEAM” ಎಂಬ ತುರ್ತು ಸನ್ನದ್ಧ ತಂಡವನ್ನು ರಚಿಸಿ ತುರ್ತು ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ತಲಪಾಡಿ, ತೊಕ್ಕೊಟ್ಟು,ಕೋಟೆಕಾರ್, ಉಳ್ಳಾಲ, ದೇರಳಕಟ್ಟೆ, ಕಿನ್ಯ ಸೆಕ್ಟರ್ ಕಾರ್ಯಕರ್ತರಿಗೆ ಉಳ್ಳಾಲ ಡಿವಿಶನ್ ಪ್ರ,ಕಾರ್ಯದರ್ಶಿ ಜಾಫರ್ ಯು.ಎಸ್. ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com