janadhvani

Kannada Online News Paper

ಸೌದಿ:ಸೋಂಕಿತರ ಸಂಖ್ಯೆ 1563 ಕ್ಕೆ ಏರಿಕೆ- ಮಕ್ಕಾ ಪರಿಸರದಲ್ಲೂ ಲಾಕ್ ಡೌನ್

ರಿಯಾದ್: ಸೌದಿ ಅರೇಬಿಯಾದಲ್ಲಿ ಇಂದು 110 ಜನರಿಗೆ ಈ ರೋಗ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ರೋಗಿಗಳ ಸಂಖ್ಯೆಯು 1,563 ಕ್ಕೆ ಏರಿದೆ.ನಿನ್ನೆ 49 ಮಂದಿ ಚೇರತರಿಸಿಕೊಂಡಿದ್ದು, ಸಂಖ್ಯೆ 115ಕ್ಕೆ ಏರಿದೆ. ಪ್ರಸಕ್ತ ಕನಿಷ್ಠ 22 ಜನರು ಗಂಭೀರ ಸ್ಥಿತಿಯಲ್ಲಿದ್ದು, ಪ್ರಮುಖ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ರಿಯಾದ್‌ನಲ್ಲಿ ಪ್ರಕರಣಗಳು ಇಳಿಕೆ:

ಇಂದು, ರೋಗ ಪತ್ತೆಯಾದವರ ಪೈಕಿ 138 ಮಂದಿ ಸಾಮಾಜಿಕ ಸಂಪರ್ಕದಿಂದ ರೋಗಪೀಡಿತರಾಗಿದ್ದಾರೆ. ಉಳಿದವರು ಈಗಾಗಲೇ ವಿದೇಶದ ಐಸೊಲೇಷನ್‌ನಲ್ಲಿದ್ದವರಾಗಿದ್ದಾರೆ. ಪೀಡಿತರ ಪೈಕಿ ಬಹುಪಾಲು ಜನರು ಆರೋಗ್ಯವಾಗಿದ್ದು, ಮರಳುವ ಭರವಸೆ ಇದೆ ಎಂದು ಸಚಿವಾಲಯ ಹೇಳಿದೆ. ರಿಯಾದ್‌ನಲ್ಲಿ ಇಂದು ಕಡಿಮೆ ಪ್ರಕರಣ ದಾಖಲಾಗಿದೆ.

ರೋಗನಿರ್ಣಯ ಮಾಡಲಾದ ಪ್ರದೇಶವಾರು ಅಂದಾಜುಗಳು ಹೀಗಿವೆ: ಮಕ್ಕಾ 40, ದಮ್ಮಾಮ್ 34, ರಿಯಾದ್ 22, ಮದೀನಾ 22, ಜಿದ್ದಾ 9, ಹಫೂಫ್ 6, ಖೋಬರ್ 6, ಖತೀಫ್ 5, ತೈಫ್ 2. ಇದಲ್ಲದೆ, ಯಾನ್ಪು, ಬುರೈದಾ, ಅಲ್-ರಾಸ್, ಖಮೀಸ್ ಮುಸೈತ್, ದಹ್ರಾನ್ ಮತ್ತು ಸಾಮ್ತಾ, ದುವಾದ್ಮಿ ಮತ್ತು ತಬೂಕ್‌ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದ ಸಾವಿರಾರು ಮಂದಿ ಇಂದು ಮನೆಗಳಿಗೆ ಮರಳಿದ್ದಾರೆ. ವಿವಿಧ ದೇಶಗಳಿಂದ ಮರಳಿ ಸೌದಿಗೆ ಬಂದಿದ್ದ ಅವರು ವಿಮಾನ ನಿಲ್ದಾಣದಿಂದ ನೇರ ಐಸೋಲೇಷನ್‌ಗಾಗಿ ಹೊಟೇಲ್ ಗಳಿಗೆ ತೆರಳಿದ್ದರು. ಅವರು ಸುರಕ್ಷಿತರು ಎಂಬ ಭರವಸೆಯ ಮೇಲೆ 14 ದಿನಗಳ ಬಳಿಕ ಅವರನ್ನು ಹಿಂತಿರುಗಿಸಲಾಗುತ್ತದೆ.

ನಾಳೆ ಇನ್ನಷ್ಟು ಜನರನ್ನು ಪ್ರತ್ಯೇಕ ವೀಕ್ಷಣೆಯಿಂದ ವರ್ಗಾಯಿಸಲಾಗುತ್ತದೆ. ಕೋವಿಡ್ ದೃಢೀಕರಣದ ಮೊದಲು ಸೌದಿ ಆಡಳಿತವು ನಡೆಸಿದ ಕ್ರಮವು ರಕ್ಷಣೆಗೆ ಉತ್ತೇಜನ ನೀಡಿದೆ ಎಂದು ನಿರೀಕ್ಷಿಸಲಾಗಿದೆ.

ಮಕ್ಕಾದ ಪ್ರಮುಖ ವಲಯಗಳನ್ನು ಮುಚ್ಚಲಾಗಿದೆ

ಮಕ್ಕಾದ ಹರಮ್ ಬಳಿಯ ಪ್ರಮುಖ ವಸತಿ ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನ 3 ಗಂಟೆಯಿಂದ ಲಾಕ್ ಡೌನ್ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲ ಕರ್ಫ್ಯೂ ಅನ್ವಯಿಸುತ್ತದೆ. ಮುಚ್ಚಿದ ಪ್ರದೇಶಗಳು ಅಜ್ಯದ್, ಮಸಾಫಿ, ಮಿಸ್ಫಲ, ಅಲ್ ಹುಜೂನ್ ಮತ್ತು ಹುಸ್ ಬಕ್ರ್ ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನ 3 ರಿಂದ ಆದೇಶವು ಜಾರಿಯಲ್ಲಿದೆ.

ಈ ಪ್ರದೇಶದ ಜನರು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಈ ಪ್ರದೇಶದ ಜನರು ಅಲ್ಲಿಂದ ನಿರ್ಗಮಿಸುವುದು ಮತ್ತು ಇತರರು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. 14 ದಿನಗಳ ಕಾಲ ವೈದ್ಯಕೀಯ ನಿರೀಕ್ಷಣೆಯ ಭಾಗವಾಗಿ ಈ ಕ್ರಮ ಎನ್ನಲಾಗಿದೆ.

ಎಲ್ಲರಿಗೂ ಉಚಿತ ಚಿಕಿತ್ಸೆ

ಏತನ್ಮಧ್ಯೆ, ಸೌದಿ ದೊರೆ ಸಲ್ಮಾನ್ ಅವರು ದೇಶದ ನಾಗರಿಕರು ಮತ್ತು ವಲಸಿಗರಿಗೆ ಕೋವಿಡ್ 19 ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ಆದೇಶಿಸಿದ್ದಾರೆ. ಕಾನೂನು ಉಲ್ಲಂಘಕರಾಗಿರುವ ವಿದೇಶಿಯರಿಗೂ ಚಿಕಿತ್ಸೆ ನೀಡುವಂತೆ ನಿರ್ದೇಶನದಲ್ಲಿ ತಿಳಿಸಲಾಗಿದೆ. ಕಾನೂನು ಉಲ್ಲಂಘಕರಾದ ವಲಸಿಗರು ಬಂದರೂ ಕಾನೂನು ಲೆಕ್ಕಿಸದೆ ಚಿಕಿತ್ಸೆಯನ್ನು ನೀಡಬೇಕು ಎಂದು ಆದೇಶ ನೀಡಲಾಗಿದೆ.

error: Content is protected !! Not allowed copy content from janadhvani.com