janadhvani

Kannada Online News Paper

ಕೋವಿಡ್-19: ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ಅಗತ್ಯ ಸಹಾಯ ನೀಡಲಾಗುವುದು- ಎ.ಪಿ.ಉಸ್ತಾದ್

ಕೋಝಿಕೋಡ್: ಕೋವಿಡ್ -19 ಹರಡುವಿಕೆಯ ಹಿನ್ನೆಲೆಯಲ್ಲಿ ಕೋಝಿಕೋಡ್ ವೈದ್ಯಕೀಯ ಕಾಲೇಜಿನ ಚಟುವಟಿಕೆಗಳಿಗೆ ಅಗತ್ಯವಾದ ಸಹಾಯವನ್ನು ನೀಡಲಾಗುವುದು ಎಂದು ಮಾರ್ಕಝ್ ಚಾನ್ಸೆಲರ್ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ರಾಜೇಂದ್ರನ್ ಅವರೊಂದಿಗಿನ ಮರ್ಕ‌ಝ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ, ಐಸೊಲೇಷನ್ ವಾರ್ಡ್‌ಗೆ ಅಗತ್ಯವಿರುವ ವಿಪಿಇ ಕಿಟ್‌ಗಳು ಮತ್ತು ಸಿಬ್ಬಂದಿಗೆ ಬೇಕಾಗುವ ವಾಹನ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಕಾಂತಪುರಂ ಹೇಳಿದರು.

ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥ ಕೆ.ಪಿ.ಸುನೀಲ್ ಕುಮಾರ್, ಡಾ.ಡಾನಿಶ್, ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಡಾ.ಇ.ಎನ್.ಅಬ್ದುಲ್ಲತಿಫ್, ಸಂಪರ್ಕ ಅಧಿಕಾರಿ ಹಂಝಾ, ಸಹಾಯಕ ವಾದಿಸಲಾಂ ಕಾರ್ಯದರ್ಶಿ ಕೆ.ಎ.ನಾಸರ್ ಚೆರುವಾಡಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com