janadhvani

Kannada Online News Paper

ಕೋವಿಡ್-19: ಪೂರ್ಣವಾಗಿ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಬಹ್‌ರೈನ್ ಮುಂದು

ಮನಾಮ: ಕೋವಿಡ್-19 ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡವರ ಪೈಕಿ ಬಹ್‌ರೈನ್ ಇತರ ಎಲ್ಲ ಕೊಲ್ಲಿ ರಾಷ್ಟ್ರಗಳಿಗಿಂತ ಮುಂದಿದೆ. ರೋಗ ಹರಡುವಿಕೆಯ ಸವಾಲುಗಳನ್ನು ಎದುರಿಸುವಲ್ಲಿ ದೇಶವು ಕೈಗೊಂಡ ಕ್ರಮಗಳು ಫಲಪ್ರದವಾಗಿರುವ ಸೂಚನೆಯಾಗಿದೆ ಇದು ಎನ್ನಲಾಗಿದೆ.

ಫೆಬ್ರವರಿ 24 ರಂದು ಮೊದಲ ಕೋವಿಡ್ ಪ್ರಕರಣ ದೃಢಪಟ್ಟ ಬಹ್‌ರೈನ್ ನಲ್ಲಿ ಈಗಾಗಲೇ 272 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 495 ಪ್ರಕರಣಗಳು ವರದಿಯಾಗಿದ್ದು, ಅರ್ಧಕ್ಕಿಂತ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ.

ಬಹ್‌ರೈನ್‌ನಲ್ಲಿ ಶೇಕಡಾ 50ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಸೌದಿ ಅರೇಬಿಯಾದಲ್ಲಿ 1104ರಲ್ಲಿ 35 (ಶೇಕಡಾ 3.17), ಯುಎಇ (405) 55, (13.58 ಶೇಕಡಾ), ಒಮಾನ್ (152), 23 (15.13 ಶೇಕಡಾ), ಕುವೈತ್ (235), 64 (27.23 ಶೇಕಡಾ), ಖತರ್ (562), 43 (7.65 ಶೇಕಡಾ), ಜಾಗತಿಕ ಚಿಕಿತ್ಸೆಯ ಶೇಕಡಾವಾರು ಪ್ರಕಾರ ರೋಗ ಮುಕ್ತರಾಗಿದ್ದಾರೆ.

ಕೋವಿಡ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರೀಯ ಕಾರ್ಯಪಡೆಯ ನೇತೃತ್ವದಲ್ಲಿ ಪ್ರತಿರೋಧ ಕ್ರಮಗಳು ಮುನ್ನೆಡೆಯಲ್ಲಿದೆ. ರೋಗ ನಿರ್ಣಯ ಪರೀಕ್ಷೆಗಳ ಮೇಲೆ ಬಹ್‌ರೈನ್ ಸಕ್ರಿಯವಾಗಿ ಗಮನ ಹರಿಸುತ್ತಿದೆ. ಈಗಾಗಲೇ, ದೇಶದಲ್ಲಿ 31,526 ಜನರನ್ನು ಪರೀಕ್ಷಿಸಲಾಗಿದೆ.

error: Content is protected !! Not allowed copy content from janadhvani.com