janadhvani

Kannada Online News Paper

ಸೌದಿ: ಜಿದ್ದಾ ನಗರದಲ್ಲೂ ಸಂಜೆ 3 ರಿಂದ ಕರ್ಫ್ಯೂ- ಇಂದಿನಿಂದ ಜಾರಿ

ಜಿದ್ದಾ, ಮಾ.29: ಸೌದಿ ಅರೇಬಿಯಾದಲ್ಲಿ ಕೋವಿಡ್-19 ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಕರ್ಫ್ಯೂ, ಪ್ರಮುಖ ನಗರಗಳಾದ ರಿಯಾದ್, ಮಕ್ಕಾ ಮತ್ತು ಮದೀನಾದಲ್ಲಿ ವಿಸ್ತರಿಸಿದ ಸಮಯವನ್ನು ಜಿದ್ದಾ ನಗರದಲ್ಲೂ ಜಾರಿಗೆ ತರಲಾಗಿದೆ.

ಈ ಹಿಂದೆ ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ಇದ್ದ ಕರ್ಫ್ಯೂ ಮಧ್ಯಾಹ್ನ 3 ಗಂಟೆ ಯಿಂದಲೇ ಆರಂಭಗೊಳ್ಳಲಿದೆ. ಮಧ್ಯಾಹ್ನ 3 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆ ವರೆಗೆ ಯಾರೂ ನಗರವನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಸಾಧ್ಯವಿಲ್ಲ. ಕರ್ಫ್ಯೂಗಳ ಮೇಲಿನ ವಿನಾಯ್ತಿಗಳು ಹಿಂದಿನಂತೆ ಇರಲಿದೆ.

ಏತನ್ಮಧ್ಯೆ ಮದೀನಾ ನಗರ ಪರಿಸರದ 6 ಜಿಲ್ಲೆಗಳಾದ ಕುರ್ಬಾನ್, ಬನಿ ಝುಫರ್, ಶೂರೈಬಾತ್, ಜುಮುಆ ಬನೀಕುದ್ರಾ ಮತ್ತು ಇಸ್ಕಾನ್‌ನ ಕೆಲವು ಭಾಗಗಳಲ್ಲಿ ದಿನದ 24 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ.ಇದು ಅಲ್ಲಿನ ನಿವಾಸಿಗಳನ್ನು ತಮ್ಮ ಮನೆಗಳಲ್ಲಿ ನಿರೀಕ್ಷಣೆಯಲ್ಲಿರಿಸಿ ಕೊರೋನಾ ಇಲ್ಲವೆಂದು ದೃಢೀಕರಿಸುವ ಭಾಗವಾಗಿದೆ. 14 ದಿನ ಕರ್ಫ್ಯೂ ಮುಂದುವರಿಯಲಿದೆ.

error: Content is protected !! Not allowed copy content from janadhvani.com