janadhvani

Kannada Online News Paper

ಸಂಕಷ್ಟದಲ್ಲಿ ಜನ ಸಾಮಾನ್ಯರು: ಎ.ಪಿ.ಉಸ್ತಾದರಿಂದ ಪ್ರಧಾನ ಮಂತ್ರಿಗೆ ಪತ್ರ

ಕಲ್ಲಿಕೋಟೆ,ಮಾ.29: ವಿಶ್ವದಾದ್ಯಂತ ಹರಡಿರುವ ಕೋವಿಡ್-19 ಭಾರತದಲ್ಲಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ “ಲಾಕ್ ಡೌನ್” ಪರಿಣಾಮ ವಿವಿಧ ಕಡೆಗಳಲ್ಲಿ ಸಿಲುಕಿರುವವರ ನೆರವಿಗಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ದಿಲ್ಲಿ, ಮುಂಬೈ ಮುಂತಾದ ನಗರಗಳಿಂದ ನೂರಾರು ಕಿಲೋಮೀಟರ್ ದೂರವಿರುವ ಯುಪಿ, ಗುಜರಾತ್ ಹಾಗೂ ಇತರ ರಾಜ್ಯಗಳಲ್ಲಿನ ಜನ ಸಾಮಾನ್ಯರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗದೆ ಸಾವಿರಾರು ಮಹಿಳೆಯರು, ಮಕ್ಕಳು, ವಯಸ್ಕರು ಸಹಿತ ಇರುವ ಜನರ ಸಮಸ್ಯೆಗೆ ಅತೀ ಶೀಘ್ರದಲ್ಲಿ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವುದಾಗಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಮೈಲುಗಟ್ಟಲೆ ದಾಟುತ್ತಾ ಅನ್ನಾಹಾರ ಇಲ್ಲದೆ ಅವರ ಕಾಲ್ನಡಿಗೆ ಯಾತ್ರೆಯು ಹೃದಯ ವಿದ್ರಾವಕ, ಸರಕಾರದ ಮೇಲ್ನೋಟದಲ್ಲಿ ಒಂದೆರಡು ದಿನಗಳ ಮಟ್ಟಿಗೆ ರೈಲು ಅಥವಾ ಬಸ್ ಮೂಲಕ ಒಂದು ಮೀಟರ್ ಅಂತರ ಪಾಲಿಸಿ, ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಮುಂತಾದ ಮುಂಜಾಗ್ರತಾ ಕ್ರಮಗಳೊಂದಿಗೆ ಯಾತ್ರೆಯ ವ್ಯವಸ್ಥೆ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಕೇರಳ-ಕರ್ನಾಟಕ ಗಡಿ ಮಾರ್ಗಗಳನ್ನು ಮಣ್ಣು ಹಾಕಿ ಮುಚ್ಚಿದ ಕರ್ನಾಟಕ ಸರಕಾರದ ಕ್ರಮ ಸರಿಯಲ್ಲವೆಂದೂ ಪ್ರಧಾನಮಂತ್ರಿಗಳು ತಕ್ಷಣ ಸ್ಪಂದಿಸಿ ಅದನ್ನು ತೆರೆಯಲು ಆದೇಶ ನೀಡಬೇಕೆಂದೂ ಪತ್ರದಲ್ಲಿ ಆಗ್ರಹಿಸಿದ್ದಾರೆ. ಕರ್ನಾಟಕದಿಂದ ಮಾತ್ರವಲ್ಲ, ಇತರ ರಾಜ್ಯಗಳಿಂದಲೂ ಕೇರಳಕ್ಕೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ರಸ್ತೆಗಳನ್ನಾಗಿದೆ ಅಲ್ಲಿ ಮುಚ್ಚಲ್ಪಟ್ಟದ್ದು.
ಗಡಿ ಪ್ರದೇಶವಾದ ಮಂಜೇಶ್ವರದಿಂದ ಹೆರಿಗೆಗಾಗಿ ಮಂಗಳೂರಿನ ಆಸ್ಪತ್ರೆಗೆ ತಲುಪಲಾಗದೆ ಆಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆಯೂ ನಿನ್ನೆ ನಡೆದಿದೆ. ಆದ್ದರಿಂದ ಈ ಕುರಿತು ಅತ್ಯಂತ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com