janadhvani

Kannada Online News Paper

ಸೌದಿ: ವಲಸೆ ಕಾನೂನು ಉಲ್ಲಂಘನೆ- 250 ವಿದೇಶೀ ಬಂಧಿತರ ಬಿಡುಗಡೆ

ರಿಯಾದ್: ಕೊರೋನ ವೈರಸ್ ವಿರುದ್ಧ ಹೋರಾಡುವ ಕಾರ್ಯವಿಧಾನಗಳ ಭಾಗವಾಗಿ ವಲಸೆ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾಗಿರುವ 250 ಕ್ಕೂ ಹೆಚ್ಚು ವಿದೇಶಿ ಬಂಧಿತರನ್ನು ಸೌದಿ ಅರೇಬಿಯಾ ಬಿಡುಗಡೆ ಮಾಡಿದೆ ಎಂದು ಮಾನವ ಹಕ್ಕುಗಳ ಆಯೋಗದ (ಎಚ್‌ಆರ್‌ಸಿ) ಅಧ್ಯಕ್ಷ ಅವಾದ್ ಅಲ್ ಅವಾದ್ ಸೋಮವಾರ ತಿಳಿಸಿದ್ದಾರೆ.

250 ಕ್ಕೂ ಹೆಚ್ಚು ಬಂಧಿತರನ್ನು ಬಿಡುಗಡೆ ಮಾಡುವ ಸೌದಿ ಅಧಿಕಾರಿಗಳ ನಿರ್ಧಾರವನ್ನು ನಾವು ಶ್ಲಾಘಿಸುತ್ತೇವೆ ಎಂದು ಅಲ್ ಆವಾದ್ ಟ್ವೀಟ್ ಮಾಡಿದ್ದಾರೆ.

ಬಂಧಿತರನ್ನು ತಮ್ಮ ಊರಿಗೆ ಕಳಿಸುವ ನಿಟ್ಟಿನಲ್ಲಿ ಬಿಡುಗಡೆ ಮಾಡುವುದು, ಸಾರ್ವಜನಿಕ ಸುರಕ್ಷತೆಗೆ ಯಾವುದೇ ರಾಜಿಯಾಗದಂತೆ ಜೈಲಿನಲ್ಲಿರುವ ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಯಿಟರ್ಸ‌್‌ಗೆ ನೀಡಿದ ಹೇಳಿಕೆಯಲ್ಲಿ ಹೇಳಿದರು.

ಕೊರೋನ ಎಂಬ ಪಿಡುಗಿನಿಂದ ಸೌದಿ ಮಣ್ಣಿನಲ್ಲಿರುವ ಪ್ರತಿಯೊಬ್ಬರನ್ನು ರಕ್ಷಿಸುವ ಸೌದಿ ಅರೇಬಿಯಾದ ಪ್ರತಿಜ್ಞೆಯನ್ನು ಈ ನಿರ್ಧಾರವು ದೃಢಪಡಿಸುತ್ತದೆ ಎಂದು ಅಲ್-ಅವಾದ್ ಹೇಳಿದರು.

error: Content is protected !! Not allowed copy content from janadhvani.com