janadhvani

Kannada Online News Paper

ವೆನ್ಲಾಕ್ ‘ಕೋವಿಡ್-19’ಗೆ ಸೀಮಿತ, ಇತರರಿಗೆ ಖಾಸಗಿಯಲ್ಲಿ ಉಚಿತ ಚಿಕಿತ್ಸೆ- ಉಸ್ತುವಾರಿ ಸಚಿವ

ಮಂಗಳೂರು: ಇಲ್ಲಿನ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ರೋಗಿಗಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ ನೀಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ‌ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಅಲ್ಲಿಯೂ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುವುದು ಎಂದರು.

ವೆನ್ಲಾಕ್ ಆಸ್ಪತ್ರೆಯ 250 ಹಾಸಿಗೆಗಳ ಕಟ್ಟಡವನ್ನು ಸಂಪೂರ್ಣವಾಗಿ ಕೋವಿಡ್-19 ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗುವುದು. ಆಸ್ಪತ್ರೆಯ 20 ಹಾಸಿಗೆಯುಳ್ಳ ಆಯುಷ್ ಕಟ್ಟಡದಲ್ಲಿ ಶಂಕಿತ ರೋಗಿಗಳಿಗೆ ಮೀಸಲಿಡಲಾಗುವುದು. ಖಾಸಗಿ ಆಸ್ಪತ್ರೆ ಯಲ್ಲಿರುವ ಕೊರೊನಾ ಶಂಕಿತರನ್ನೂ ವೆನ್ಲಾಕ್‌ಗೆ ದಾಖಲು ಮಾಡಲಾಗುವುದು ಎಂದರು.

ಈಗಾಗಲೇ ವೆನ್ಲಾಕ್‌ನಲ್ಲಿ ದಾಖಲಾಗಿರುವ ಇತರ 218 ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುವುದು. ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಇದರೊಂದಿಗೆ ಪ್ರತಿ ಮೆಡಿಕಲ್ ಕಾಲೇಜುನಲ್ಲಿ 20 ಹಾಸಿಗೆಗಳ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಲಾಗಿ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಭಾಗಿಯಾಗಿದ್ದರು.

error: Content is protected !! Not allowed copy content from janadhvani.com