janadhvani

Kannada Online News Paper

ಸೌದಿ: ಮೂರು ನಗರಗಳಲ್ಲಿ ಸಂಜೆ 3 ರಿಂದಲೇ ಕರ್ಫ್ಯೂ ಆರಂಭ

ರಿಯಾದ್ : ಸೌದಿ ಅರೇಬಿಯಾವು ಕರೋನವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ವಿಧಿಸಲಾದ ಭಾಗಶಃ ಕರ್ಫ್ಯೂ ಅನ್ನು ಬಿಗಿಗೊಳಿಸುತ್ತಿದೆ. ರಿಯಾದ್, ಮಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಂಜೆ ಮೂರರಿಂದಲೇ ಕರ್ಫ್ಯೂ ಆರಂಭಗೊಳ್ಳಲಿದೆ.

ಅದೇ ರೀತಿ ಈ ಮೂರು ಪ್ರಾಂತ್ಯಗಳಿಗೆ ಪ್ರವೇಶ ಅಥವಾ ನಿರ್ಗಮನವನ್ನುಕೂಡ ನಿಷೇಧಿಸಲಾಗಿದೆ. ಗುರುವಾರದಿಂದ ಇದು ಜಾರಿಗೆ ಬರಲಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.

ಸೋಂಕಿನಲ್ಲಿ ಸುಮಾರು ಕಾಲು ಭಾಗದಷ್ಟು ಏರಿಕೆ ದಾಖಲಿಸಿದ ನಂತರ ಸೌದಿ ಅರೇಬಿಯಾ ಸೋಮವಾರ ಕರ್ಫ್ಯೂ ಜಾರಿಗೊಳಿಸಿತು. ಮಂಗಳವಾರ ಕೊರೋನಾ ಬಾಧಿತ ಮೊದಲ ಮರಣವನ್ನು ವರದಿ ಮಾಡಿದೆ ಮತ್ತು 205 ಹೊಸ ಪ್ರಕರಣಗಳು ಒಟ್ಟು 767 ಕ್ಕೆ ತಲುಪಿದೆ.

ಏಕಾಏಕಿ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸುವುದು, ಉಮ್ರಾ ತೀರ್ಥಯಾತ್ರೆ ಸ್ಥಗಿತಗೊಳಿಸುವುದು, ಮಸೀದಿಗಳು, ಶಾಲೆಗಳು, ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವುದು ಮತ್ತು ರಾತ್ರಿಯ ಕರ್ಫ್ಯೂ ಹೇರುವುದು ಸೇರಿದಂತೆ ತೀವ್ರ ಕ್ರಮಗಳನ್ನು ಸೌದಿ ಅರೇಬಿಯಾ ಕೈಗೊಂಡಿದೆ.

error: Content is protected !! Not allowed copy content from janadhvani.com