janadhvani

Kannada Online News Paper

ಲಾಕ್‌ಡೌನ್: ಸರಕಾರಗಳ ನಿರ್ದೇಶನಗಳನ್ನು ಸಂಪೂರ್ಣ ಪಾಲಿಸಬೇಕು- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಕೋಝಿಕ್ಕೋಡ್: ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಕೋವಿಡ್ 19 ಸೋಂಕು ವಿಶ್ವಾದ್ಯಂತ ಹರಡಿರುವ ಹಿನ್ನೆಲೆಯಲ್ಲಿ, ಪ್ರತಿಯೊಬ್ಬರೂ ರಕ್ಷಣಾತ್ಮಕ ಮಾರ್ಗವನ್ನು ಅನುಸರಿಸಬೇಕು, ತಜ್ಞರ ಅಭಿಪ್ರಾಯದಂತೆ, “ಗುಂಪು ಸೇರುವುದು ನಿಲ್ಲಿಸಬೇಕು. ಎಲ್ಲ ಸಾರ್ವಜನಿಕ ಸಭೆಗಳನ್ನು ಮುಂದೂಡಬೇಕು ಮತ್ತು ಗಲ್ಫ್‌ನಿಂದ ಬಂದವರು 15 ದಿನಗಳ ಕಾಲ ಇತರರ ಸಂಪರ್ಕವನ್ನು ಉಪೇಕ್ಷಿಸಬೇಕು” ಮುಂತಾದ ಆದೇಶಗಳನ್ನು ಪಾಲಿಸಬೇಕು.

ಸಾಮಾನ್ಯ ಜೀವನದಲ್ಲಿನ ಈ ಪ್ರತ್ಯೇಕತೆಯು ಖಿನ್ನತೆಗೆ ಕಾರಣವಾಗಬಾರದು. ಒತ್ತಡಗಳ ಜೀವನದಿಂದ ದೂರವಿರುವ ಈ ಬದಲಾವಣೆಯು ನಮ್ಮ ಜೀವನದಲ್ಲಿ ಸರಿಯಾದ ಕ್ರಮಗಳನ್ನು ಪಾಲಿಸಲು ಕಾರಣವಾಗಿರಬೇಕು. ಅಲ್ಲದೆ, ನಮ್ಮ ಸುತ್ತಮುತ್ತಲಿನವರ ಕಷ್ಟ ಕಾರ್ಪಣ್ಯಗಳನ್ನು ನಾವು ಕಾಣಬೇಕು.

ದಿನಗೂಲಿ ಕೆಲಸಗಾರರ ಜೀವನ ವಿಧಾನವು ತಟಸ್ಥವಾಗಿರುವ ಕಾರಣ ಅವರು ಕಷ್ಟಪಡುತ್ತಾರೆಯೇ ಎಂಬುದನ್ನು ತಿಳಿದು ಸ್ಪಂದಿಸಬೇಕು. ನೇರ ಸಂಗಮಗಳು ಅಸಾಧ್ಯವಾದ ಕಾರಣ ಮೊಬೈಲ್ ಮತ್ತು ಇಂಟರ್ನೆಟ್‌ಗಳ ಪ್ರಯೋಜನ ಬಳಸಿಕೊಳ್ಳಬೇಕು. ಆದರೆ, ಇಂಟರ್ನೆಟ್ ಮತ್ತು ಟೆಲಿವಿಷನ್‌ಗಳಿಗೆ ಗುಲಾಮರಾಗಬಾರದು ಎಂದು ಕಾಂತಪುರಂ ಹೇಳಿದರು.

error: Content is protected !! Not allowed copy content from janadhvani.com