janadhvani

Kannada Online News Paper

ಸಾಂಕ್ರಾಮಿಕ ರೋಗ ವಿರುದ್ಧ ಹೋರಾಟ: ಕೊಲ್ಲಿ ರಾಷ್ಟ್ರಗಳಲ್ಲಿನ ಹಣಕಾಸು ವ್ಯವಸ್ಥೆ ಪ್ರಬಲ

ಬಹರೈನ್: ಕೊವಿಡ್ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಷ್ಟು ಕೊಲ್ಲಿ ರಾಷ್ಟ್ರಗಳಲ್ಲಿನ ಹಣಕಾಸು ವಲಯವು ಪ್ರಬಲವಾಗಿದೆ ಎಂದು ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಸೋಮವಾರ ಹೇಳಿದ್ದಾರೆ.

ಕೋವಿಡ್ 19 ವ್ಯಾಪಕವಾದ ಹಿನ್ನೆಲೆಯಲ್ಲಿ ಅರೇಬಿಯನ್ ದೇಶಗಳ ಆರ್ಥಿಕತೆಗಳ ಮೇಲಿನ ಪ್ರಭಾವವನ್ನು ತಗ್ಗಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಗಲ್ಫ್ ಗವರ್ನರ್‌ಗಳು ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಗಲ್ಫ್ ದೇಶಗಳ ಪ್ರಸಕ್ತ ಪರಿಸ್ಥಿತಿ ಬಗ್ಗೆ ಕೇಂದ್ರ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿರೀಕ್ಷಿಸುತ್ತಿದ್ದು, ಕರೋನ ವೈರಸ್ ಅನ್ನು ತಡೆಗಟ್ಟುವ ಸಲುವಾಗಿ, ಪ್ರಬಲ ಮತ್ತು ಸ್ಥಿರ ಬೆಳವಣಿಗೆಗಾಗಿ ತಮಗೆ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಹುಡುಕಲಾಗುವುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com