janadhvani

Kannada Online News Paper

ರೆಸಿಡೆನ್ಸಿ ವಿಸಾ ಹೊಂದಿರುವವರು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೋಂದಾಯಿಸಬೇಕು

ದುಬೈ: ಯುಎಇ ರೆಸಿಡೆನ್ಸಿ ವಿಸಾ ಇರುವವರು ಊರಲ್ಲಿ ಇದ್ದರೆ, ತಮ್ಮ ಹೆಸರನ್ನು ಯುಎಇ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಮೂಲಕ ತುರ್ತು ಸಂದರ್ಭಗಳಲ್ಲಿ ವಲಸಿಗರಿಗೆ ಮರಳಲು ಅನುಕೂಲವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ವಿದೇಶಾಂಗ ವ್ಯವಹಾರ ಮತ್ತು ಅಂತರ್‌ರಾಷ್ಟ್ರೀಯ ಸಹಕಾರ ಸಚಿವಾಲಯದ www.mofaic. gov.ae ವೆಬ್ ಸೈಟ್ ಮೂಲಕ ‌ವಲಸಿಗರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಅನಿವಾಸಿಗಳು ಅವರ ಸ್ವದೇಶದಲ್ಲಿದ್ದರೆ ಅಥವಾ ಬೇರೆ ಯಾವುದೇ ವಿದೇಶದಲ್ಲಿದ್ದರೂ ಈ ಸೌಲಭ್ಯದೊಂದಿಗೆ ನೋಂದಾಯಿಸಿಕೊಳ್ಳಬೇಕು. ವೆಬ್‌ಸೈಟ್‌ನ ಸೇವಾ ವಿಭಾಗದಲ್ಲಿ ತವಜುದಿ ಎನ್ನುವ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ.

ಇದನ್ನು ಕ್ಲಿಕ್ ಮಾಡುವುದರ ಮೂಲಕ, ಕಳೆದ ಎರಡು ವಾರಗಳಲ್ಲಿ ಭೇಟಿ ನೀಡಿದ ದೇಶಗಳು, ಹೆಸರು, ಎಮಿರೇಟ್ಸ್ ಐಡಿ ಸಂಖ್ಯೆ, ಮೊಬೈಲ್ ಸಂಖ್ಯೆ, ಯುಎಇಯಲ್ಲಿರುವ ಸಂಬಂಧಿಯ ಮೊಬೈಲ್ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಿ ನೋಂದಣಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಲಸಿಗರನ್ನು ಸುರಕ್ಷಿತವಾಗಿ ಹಿಂದಿರುಗಿಸಲು ವಿದೇಶಾಂಗ ಸಚಿವಾಲಯ ಇಂತಹ ಸೇವೆಯನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

error: Content is protected !! Not allowed copy content from janadhvani.com