janadhvani

Kannada Online News Paper

ಕೋವಿಡ್ 19: ಸೌದಿಯಲ್ಲಿ ಪ್ರತಿ ದಿನ ಸಂಜೆ 7 ರಿಂದ ಕರ್ಫ್ಯೂ

ರಿಯಾದ್: ಅಪಾಯಕಾರಿ ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಸೌದಿ ಅರೇಬಿಯಾ ಇಂದಿನಿಂದ ಕರ್ಫ್ಯೂ ಹೇರಿದೆ. ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಸೌದಿ ಅರೇಬಿಯಾ ಈ ಆದೇಶ ಹೊರಡಿಸಿದೆ.

ಸೌದಿ ರಾಜ ಸಲ್ಮಾನ್ 21 ದಿನಗಳ ಕರ್ಫ್ಯೂಗೆ ಆದೇಶ ನೀಡಿದ್ದು, ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಸೋಮವಾರ ಸಂಜೆಯಿಂದ ಇದು ಜಾರಿಗೆ ಬರಲಿದೆ.ಮುಂದಿನ 21 ದಿನಗಳ ಕಾಲ ಪ್ರತಿದಿನ ರಾತ್ರಿ7 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಭಾನುವಾರ ಸೌದಿಯಲ್ಲಿ 119 ಕೊರೋನ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ಈಗ 511ಕ್ಕೇರಿದೆ. ಆಹಾರ, ಆರೋಗ್ಯ, ಮಾಧ್ಯಮ, ಸರಕು ಸಾಗಣೆ ವಾಹನಗಳು, ಇ-ಕಾಮರ್ಸ್, ಹೋಟೆಲ್‌ಗಳು, ಫರ್ನಿಶ್ಡ್ ಅಪಾರ್ಟ್‌ಮೆಂಟ್‌ಗಳು, ಇಂಧನ ಕ್ಷೇತ್ರ, ವಿತ್ತೀಯ ಕ್ಷೇತ್ರ, ಟೆಲಿಕಾಂ ಹಾಗೂ ಜಲಪೂರೈಕೆ ವ್ಯವಸ್ಥೆಗೆ ಈ ಕರ್ಫ್ಯೂವಿನಿಂದ ವಿನಾಯಿತಿ ನೀಡಲಾಗಿದೆ. ಕರ್ಫ್ಯೂ ಅವಧಿಯ ವೇಳೆ ರಸ್ತೆಗಳಲ್ಲಿ ಸುರಕ್ಷಾ ಪಡೆಗಳು, ಆ್ಯಂಬುಲೆನ್ಸುಗಳು, ಸರಕಾರಿ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಮಸೀದಿಯಲ್ಲಿ ಪ್ರಾರ್ಥನೆ ಕರೆ ನೀಡಲು ಧಾರ್ಮಿಕ ಗುರುಗಳಿಗೆ ಮಸೀದಿಗಳಿಗೆ ತೆರಳಲು ಅನುಮತಿಯಿದೆ.

ಯುಎಇ: ಯಎಇ ಯಲ್ಲಿ ಎಲ್ಲಾ ಪ್ರಯಾಣಿಕರ ವಿಮಾನಗಳನ್ನು ತಡೆಹಿಡಿಯಲಾಗಿದೆ. ಕೋವಿಡ್-19 ಸೋಂಕು ಉಲ್ಬಣಿಸದಂತೆ ಎರಡು ವಾರಗಳ ಕಾಲ ದೇಶದಿಂದ ಹೊರಡುವ ಮತ್ತು ಬರುವ ಎಲ್ಲಾ ಪ್ರಯಾಣಿಕರ ವಿಮಾನಗಳನ್ನು ರದ್ದು ಮಾಡಲಾಗಿದೆ. ಕಾರ್ಗೋ ಸೇವೆಗಳು ಮತ್ತೆ ಮುಂದುವರಿಯಲಿದೆ.

ಔಷಧ ಮಳಿಗೆಗಳು, ಸೂಪರ್ ಮಾರ್ಕೆಟ್ ಗಳು, ಮೀನು- ಮಾಂಸದಂಗಡಿಗಳು ಹೊರತುಪಡಿಸಿ ಎಲ್ಲಾ ಮಳಿಗೆಗಳನ್ನು ಮುಚ್ಚಲು ಯುಎಇ ಆದೇಶಿಸಿದೆ.

error: Content is protected !! Not allowed copy content from janadhvani.com