janadhvani

Kannada Online News Paper

ಬಂದ್: ಆಹಾರ ಕೊರತೆ ಎದುರಿಸುವವರಿಗೆ ನೆರವಾಗಲು SYS ಮನವಿ

ಮಂಗಳೂರು:ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರ ಹೊರಡಿಸಿದ ಬೀಗಮುದ್ರೆ (Lock Down) ಆದೇಶ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರ್ಚ್ 31ರ ತನಕ ಜನಸಾಮಾನ್ಯರು ತಮ್ಮ ಕೂಲಿಕೆಲಸಗಳಿಗೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.

ಇದರಿಂದಾಗಿ, ದಿನಗೂಲಿ ಕೆಲಸಕ್ಕೆ ಹೋಗಿ ಜೀವಿಸುವವರು, ಕಡುಬಡವರು, ಭಿಕ್ಷುಕರು ಮುಂತಾದವರಿಗೆ ಒಂದು ಹೊತ್ತಿಗೂ ಆಹಾರ ಸಿಗದೆ ಕಂಗಾಲಾಗುವ ಸ್ಥಿತಿ ಎದುರಾಗಲಿದೆ.

ಹಲವು ಕಡೆಗಳಲ್ಲಿ ಅಂಗಡಿ, ಹೋಟೆಲ್ ಗಳು ಸಹ ಮುಚ್ಚುವ ಸನ್ನಿವೇಶಗಳು ಬಂದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು.ಆದ್ದರಿಂದ SYS ನ ಪ್ರತಿ ಸೆಂಟರ್ ಸಮಿತಿಗಳು, ಇದರ ಬಗ್ಗೆ ಗಮನ ಹರಿಸಿ ಅಂತಹ ಕುಟುಂಬಗಳನ್ನು ಕಂಡು ಹಿಡಿದು ಆಹಾರ ಸಾಮಾಗ್ರಿಗಳನ್ನು ತಲುಪಿಸಿ ನೆರವಾಗಬೇಕು.

ಅರ್ಹರನ್ನು ಪತ್ತೆ ಹಚ್ಚಿ ಅವರ ತುರ್ತು ಅಗತ್ಯಾನುಸಾರ ಕೆಳಕಂಡ ವಸ್ತುಗಳನ್ನು ಅವರಿಗೆ ತಲುಪಿಸಬೇಕು.

1. ಅಕ್ಕಿ, 2. ಉಪ್ಪು, 3.ಬೇಳೆ, 4.ಉಪ್ಪಿನಕಾಯಿ, 5.ಸಕ್ಕರೆ,6.ಚಾ ಹುಡಿ, 7.ಸ್ನಾನ ಮತ್ತು ಬಟ್ಟೆ ಒಗೆಯುವ ಸಾಬೂನುಗಳು ಮುಂತಾದವುಗಳು.

ಸೆಂಟರ್ ಸಮಿತಿಗಳು, ಸಾಮಾಗ್ರಿಗಳನ್ನು ಸಂಗ್ರಹ ಮಾಡಿ “ಇಸಾಬಾ ಟೀಮ್” ಮೂಲಕ ವಿತರಣೆ ಮಾಡಬೇಕು. ಇದಕ್ಕಾಗಿ ‘ಸಾಂತ್ವನ’ ಮತ್ತು ‘ಇಸಾಬಾ’ ತಂಡಗಳು ವಿಶೇಷ ಮುತವರ್ಜಿ ವಹಿಸಬೇಕು. ನಿಮ್ಮ ಸೆಂಟರ್ ವ್ಯಾಪ್ತಿಯಲ್ಲಿ ಮಾಡಿದ ಕಾರ್ಯಾಚರಣೆಗಳ ಸಚಿತ್ರ ವಿವರಗಳನ್ನು ರಾಜ್ಯ ಸಮಿತಿಯ ಗಮನಕ್ಕೆ ತರಬೇಕು ಎಂದು ರಾಜ್ಯ SYS ಪ್ರ,ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com