ಮಾತು ಬದಲಿಸಿದ ನಿರ್ದೇಶಕ ‘ಮಾಣಿಕ್ಯಾ ಮಲರಾಯ ಪೂವಿ’ ತಾತ್ಕಾಲಿಕ ಹಿಂಪಡೆಯುವುದಿಲ್ಲ

ಕೊಚ್ಚಿ/ಹೈದರಾಬಾದ್:(ಜನಧ್ವನಿ ವರದಿ) ಸಾಮಾಜಿಕ ಜಾಲತಾಣಗಳಲ್ಲಿ ಎರಡು ಮೂರು ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ‘ಒರು ಅಡಾರ್ ಲವ್’ ಎಂಬ ಮಲಯಾಳಂ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡನ್ನು ಹಿಂಪಡೆಯುವುದಾಗಿ ನಿರ್ದೇಶಕ ಉಮರ್ ಲುಲು ಘೋಷಿಸಿದ ಬೆನ್ನಲ್ಲೇ ಶಾನ್ ರಹ್ಮಾನ್ ಜತೆ ಸೇರಿದ ಪತ್ರಿಕಾಗೋಷ್ಠಿಯಲ್ಲಿ ಮಾತು ಬದಲಿಸಿದ್ದಾರೆ. ತಾತ್ಕಾಲಿಕವಾಗಿ ಹಾಡನ್ನು ಹಿಂಪಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಯುವ ನಟರ ವಿರುದ್ದ ದೂರು ದಾಖಲಾಗಿದೆ ಎಂದು ಭಾವಿಸಿ ಹಾಡನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದೆ,ಆದರೆ ಅವರ ವಿರುದ್ದ ದೂರು ಇಲ್ಲದ ಕಾರಣ ತಾತ್ಕಾಲಿಕ ಹಾಡನ್ನು ಹಿಂಪಡೆಯುವುದಿಲ್ಲ ಎಂದಿದ್ದಾರೆ,ಮಾತ್ರವಲ್ಲದೆ ಈ ಹಾಡಿಗೆ ಸಾಮಾಜಿಕ ಮಾಧ್ಯಮದಿಂದ ಭಾರೀ ಬೆಂಬಲ ಮತ್ತು ಪ್ರೋತ್ಸಾಹ ಲಭಿಸಿದ್ದು, ಹಾಡನ್ನು ಹಿಂಪಡೆಯದಂತೆ ಮನವಿ ಮಾಡಿದ್ದಾಗಿ ಉಮರ್ ಹೇಳಿದರು.

ಇಸ್ಲಾಮಿನ ಪಾರಂಪರಿಕ ಹಾಡಿಗೆ ಇಸ್ಲಾಂ ನಿಷೇಧಿಸಿದ ವಿಡಿಯೋ ತುಣುಕು ಹಾಕಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಚಿತ್ರೀಕರಿಸಿದ್ದಾರೆಂದು ಆಕ್ಷೇಪಿಸಿ ಹೈದರಾಬಾದಿನ ಫಾರೂಖ್ ನಗರದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಅಬ್ದುಲ್ಲಾ ಸೇರಿದಂತೆ ಸುಮಾರು 60 ಮಂದಿ ಮುಸ್ಲಿಂ ಯುವಕರು ನಿರ್ದೇಶಕ ಉಮರ್ ಲುಲು, ನಟಿ ಪ್ರಿಯ ಪ್ರಕಾಶ್ ವಾರಿಯಾರ್ ಮತ್ತು ನಟ ರೋಷನ್ ಮುಹಮ್ಮದ್‌ ವಿರುದ್ಧ ಫಲಕ್ ನೂಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ಉಮರ್ ಲುಲು ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟಾದ ಕಾರಣ ಹಾಡನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದರು.

ಪ್ರವಾದಿ ಮುಹಮ್ಮದ್ ಪೈಗಂಬರ್ ಮತ್ತು ಖದೀಜ ಬೀವಿ ವಿವಾಹ ಕುರಿತಾದ ಶತಕಗಳ ಇತಿಹಾಸವಿರುವ ಮಾಣಿಕ್ಯ ಮಲರಾಯ ಪೂವಿ ಹಾಡನ್ನು ಶಾಲಾ ಬಾಲಕ ಬಾಲಕಿಯರ ನಡುವೆ ನಡೆಯುವ ಪ್ರಣಯ ಪ್ರೇಮದಾಟಕ್ಕೆ ಹಿನ್ನೆಲೆ ಗಾಯನವಾಗಿ ನೀಡಲಾಗಿತ್ತು. ಈ ವಿಡಿಯೋ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಸದ್ದು ಕೂಡ ಮಾಡಿತ್ತು. ಒಂದು ವಿಭಾಗ ಜನ ನಟಿ ಪ್ರಿಯಾಳ ನಟನೆಗೆ ಮರುಳಾದರೆ ಮತ್ತೊಂದು ವಿಭಾಗ ಜನ ಹಾಡಿನ ವಿರುದ್ಧ ರೊಚ್ಚಿಗೆದ್ದಿದ್ದರು.

Leave a Reply

Your email address will not be published. Required fields are marked *

error: Content is protected !!