janadhvani

Kannada Online News Paper

ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಿದ ದೇಶವಾಗಿದೆ ಸೌದಿ – ದೊರೆ ಸಲ್ಮಾನ್

ರಿಯಾದ್: ಸೌದಿ ಅರೇಬಿಯಾದ ಆಡಳಿತಗಾರ ಮತ್ತು ಎರಡು ಹರಮ್‌ಗಳ ಕಾರ್ಯಾಲಯದ ಮುಖ್ಯಸ್ಥರೂ ಆದ ರಾಜ ಸಲ್ಮಾನ್, ಕರೋನಾ ಹರಡುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ತನ್ನ ಭಾಷಣದಲ್ಲಿ ಜಗತ್ತು ಅಸಾಧಾರಣ ಹಂತದ ಮೂಲಕ ಸಾಗುತ್ತಿದ್ದು, ಇವು ಅತ್ಯಂತ ಕಷ್ಟದ ದಿನಗಳಾಗಿವೆ ಎಂದಿದ್ದಾರೆ.

ತನ್ನ ಮಾತು ಮುಂದುವರಿಸುತ್ತಾ, ಕೋವಿಡ್ 19 ರೋಗಿಗಳ ಸಂಖ್ಯೆ ವಿಶ್ವಾದ್ಯಂತ ಹೆಚ್ಚುತ್ತಿದೆ. ಆದ್ದರಿಂದ, ಮುಂದಿನ ಹಂತವು ಹೆಚ್ಚು ಕಷ್ಟಕರ ಮತ್ತು ನಿರ್ಣಾಯಕವಾಗಿದೆ. ಸೌದಿ ಅರೇಬಿಯಾ ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಿದ ದೇಶವಾಗಿದೆ. ಇಲ್ಲಿ ಸ್ಥಳೀಯರು ಮತ್ತು ವಿದೇಶಿಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.

ರಾಜ ಸಲ್ಮಾನ್ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ನಾಗರಿಕರು ಮತ್ತು ವಲಸಿಗರ ಎಲ್ಲಾ ಅಗತ್ಯಗಳನ್ನು ಖಚಿತಪಡಿಸುವುದು. ಕಷ್ಟದ ಕ್ಷಣಗಳನ್ನು ನಿವಾರಿಸಲು ದೇಶವು ಏನು ಬೇಕಾದರೂ ಮಾಡಲಿದೆ. ಇದನ್ನು ಸಾಧಿಸಲು ವಿವಿಧ ಸಚಿವಾಲಯಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಕರೋನಾ ಹರಡುವಿಕೆಯನ್ನು ತಡೆಯುವ ಸರಕಾರದ ಪ್ರಯತ್ನಗಳು ಯಶಸ್ವಿಯಾಗಬೇಕು. ಇದಕ್ಕೆ ಜನರ ಸಂಪೂರ್ಣ ಸಹಕಾರದ ಅಗತ್ಯವಿದೆ ಎಂದು ಸಲ್ಮಾನ್ ಹೆಳಿದರು.

ಜನರ ಸಹಕಾರದೊಂದಿಗೆ ಈ ಹಂತವನ್ನು ಜಯಿಸಬಹುದೆಂಬ ಭರವಸೆಯೊಂದಿಗೆ ರಾಜ ಸಲ್ಮಾನ್, ದೂರದರ್ಶನದ ತನ್ನ ಭಾಷಣವನ್ನು ಕೊನೆಗೊಳಿಸಿದರು.

error: Content is protected !! Not allowed copy content from janadhvani.com