janadhvani

Kannada Online News Paper

ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿ ಇಡೀ ಜಗತ್ತನ್ನೇ ಬೆರಗಿಸಿತು

ಹಸೈನಾರ್ ಕಾಟಿಪಳ್ಳ ನಾವು ದಿನನಿತ್ಯ ಹಲವಾರು ವಿಧದ ರೋಗಗಳ ಹೆಸರನ್ನು ಕೇಳುತ್ತಿರುತ್ತೇವೆ. ‌‌ಕೆಲವೊಂದು ರೋಗಗಳು ಮಕ್ಕಳಲ್ಲಿ ಮಾತ್ರ ಕಂಡರೆ, ಇನ್ನು ಕೆಲವು ಮಧ್ಯವಯಸ್ಕ ಹಾಗೂ ವಯಸ್ಸಾದವರಲ್ಲಿ ಕಾಣುತ್ತಿರುತ್ತೇವೆ.ಇನ್ನು ಸ್ವಲ್ಪ ಮುಂದುವರಿಯುತ್ತಾ ಹೋದರೆ ಕೆಲವೊಂದು ಸಲ ಒಂದು ಪ್ರದೇಶ ಅಥವಾ ಒಂದು ದೇಶದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳನ್ನು ಕಾಣುತ್ತಿರುತ್ತೇವೆ. ಆದರೆ ಇಲ್ಲಿ ಒಂದು ರೋಗ ಜಗತ್ತಿನ ಬಹುತೇಕ ದೇಶಗಳಿಗೆ ಹರಡಿ, ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಅದುವೇ ನಾವು ನೀವೆಲ್ಲರೂ ಇತ್ತೀಚೆಗೆ ಕೇಳುತ್ತಿರುವ ಕೊರೋಣ ಎಂಬ ಮಾರಕ ವೈರಸ್.

ಕೊರೋಣ ಎಂಬೂದು ಕಣ್ಣಿಗೆ ಕಾಣದ ಒಂದು ಸೂಕ್ಷ್ಮ ವೈರಸ್. ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಉಗಮವಾದ ಈ ವೈರಸ್ ಬಗ್ಗೆ ಅಲ್ಲಿನ ಪ್ರಖ್ಯಾತ ವೈದ್ಯರೊಬ್ಬರು ಚೀನಾ ಸರ್ಕಾರಕ್ಕೆ ಇದರ ಬಗ್ಗೆ ಅಪಾಯದ ಅರಿವನ್ನು ಮೂಡಿಸಿದ್ದರು. ಆದರೆ ವ್ಯವಹಾರಿಕ ಯುಗದಲ್ಲಿ ತಾನೇ ಪಾರಮ್ಯ ಹೊಂದಿರಬೇಕೆಂಬ ಅಹಂಭಾವದೆದುರು ವೈದ್ಯರ ಅಪಾಯದ ಅರಿವಿನ ಕೂಗು ಚೀನಾ ಸರ್ಕಾರಕ್ಕೆ ಕೇಳಿಸಲೇ ಇಲ್ಲ.

ಅದು ಈ ಮಾರಕ ವೈರಸ್ ಬಗ್ಗೆ ಬಹಳ ಗಂಭೀರವಾಗಿ ಯೋಚಿಸಲೇ ಇಲ್ಲ. ಪರಿಣಾಮ ಚೀನಾ ಕೊರೋಣ ವೈರಸ್ ಹರಡುವ ವೇಗಕ್ಕೆ ತುತ್ತಾಗಿ ತನ್ನ ನಿಯಂತ್ರಣವನ್ನೇ ಕಳೆದುಕೊಂಡಿತು. ಇದನ್ನೆಲ್ಲಾ ತಡೆಯಲಾಗದೆ ಚೀನಾ ದೇಶದೆಲ್ಲೆಡೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಕೊರೋಣ ಎಂಬ ಮಾರಕ ರೋಗ ಚೀನಾ ದೇಶಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದರೆ ಸ್ವಲ್ಪವಾದರೂ ನಿಟ್ಟುಸಿರು ಬಿಡಬಹುದಿತ್ತು. ಆದರೆ ಇದು ದಕ್ಷಿಣ ಯುರೋಪ್’ನ ಗಣರಾಜ್ಯ ದೇಶವಾದ ಇಟಲಿ, ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾನ್, ಸೌದಿ ಅರೇಬಿಯಾ, ಖತ್ತರ್, ಯು.ಎ.ಇ, ಬಹ್ರೇನ್, ಕುವೈತ್ ಮುಂತಾದ ರಾಷ್ಟ್ರಗಳಿಗೂ ಹರಡಿಕೊಂಡಿದೆ.

ಇದೀಗ ನಮ್ಮ ದೇಶ ಸುಂದರ ನಾಡು ಭಾರತಕ್ಕೂ ಈ ಮಾರಕ ವೈರಸ್ ಕಾಲಿಟ್ಟಿದೆ. ಇದನ್ನು ತಡೆಗಟ್ಟಲು ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಶಾಲಾ-ಕಾಲೇಜು, ಶಾಪಿಂಗ್ ಮಾಲ್, ಜನನಿಬಿಡ ಪ್ರದೇಶವಾದ ಮಾರುಕಟ್ಟೆ, ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.

ಗಲ್ಫ್ ರಾಷ್ಟ್ರಗಳಲ್ಲಂತೂ ಈ ವೈರಸ್’ನ ಪರಿಣಾಮ ಎಷ್ಟರ ಮಟ್ಟಿಗೆ ಇದೆಯೆಂದರೆ ಪ್ರಾರ್ಥನಾ ಸ್ಥಳವನ್ನೂ 14ದಿನಗಳ ಅವಧಿಗೆ ಸಂಪೂರ್ಣವಾಗಿ ಮುಚ್ಚುವಷ್ಟರ ಮಟ್ಟಿಗಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಕೊರೋಣ ವೈರಸ್’ಗೆ ಬಲಿಯಾದವರ ಸಂಖ್ಯೆ ಅಧಿಕ.

ಈ ರೀತಿ ಒಂದು ಕಣ್ಣಿಗೆ ಕಾಣದ ಒಂದು ಸೂಕ್ಷ ಜೀವಿ ಇಡೀ ಜಗತ್ತನ್ನೇ ಇಷ್ಟರ ಮಟ್ಟಿಗೆ ನಿಬ್ಬೆರಗಾಗಿಸಿದೆ ಎಂದರೆ, ನಾವು ಚಿಂತಿಸಬೇಕಾದದ್ದು ಬಹಳಷ್ಟಿದೆ. ಮೇಲ್ಜಾತಿ, ಕೀಲುಜಾತಿ ಎಂಬ ತಾರತಮ್ಯ, ಧರ್ಮದ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ, ಅರಾಜಕತೆ, ಅನಾಚಾರ, ಭ್ರಷ್ಟಾಚಾರ ಇದಲ್ಲೆವನ್ನು ಮಾನವರಾದ ನಾವು ಒಂದರ ಮೇಲೊಂದರಂತೆ ಎಸಗುತ್ತಿರುವಾಗ, ನಮ್ಮನ್ನು ಸೃಷ್ಠಿಸಿದ ಸೃಷ್ಠಿಕರ್ತ ಈ ಭೂಲೋಕಕ್ಕೆ ಘೋರ ಶಿಕ್ಷೆ ನೀಡದೆ ಇರುತ್ತಾನಾ.

ಕೊರೋಣಾ ವೈರಸ್ ದೇಶ, ಜಾತಿ, ಧರ್ಮ, ಬಡವ, ಶ್ರೀಮಂತ ಎಂಬ ತಾರತಮ್ಯ ನೋಡಿ ಹರಡುತ್ತಿಲ್ಲ. ಬದಲಾಗಿ ಎಲ್ಲರಿಗೂ ಹರಡುತ್ತಿದೆ. ಕಣ್ಣಿಗೆ ಕಾಣದ ಒಂದು ಸೂಕ್ಷ ಜೀವಿಗೆ ನಾವು ಇಷ್ಟೊಂದು ಭಯಪಡುವುದಾದರೆ, ಅದನ್ನು ಸೃಷ್ಠಿಸಿದ ಸೃಷ್ಠಿಕರ್ತನಿಗೆ ನಾವೆಷ್ಟು ಭಯಪಡಬೇಕು. ಹಾಗಂತ ನಾನು ಇಲ್ಲಿ ಸೂಕ್ಷ್ಮಾಣು ಜೀವಿಯಿಂದ ರಕ್ಷೆ ಹೊಂದಲು ಮುಂಜಾಗ್ರತಾ ಕ್ರಮ ಕೈಗೊಳ್ಳದಕ್ಕೆ ವಿರೋಧ ವ್ಯಕ್ತಪಡಿಸುವುತ್ತಿಲ್ಲ.

ಆದರೆ ಆ ಸೂಕ್ಷಾಣು ಜೀವಿಯಿಂದ ರಕ್ಷೆ ಹೊಂದಲು ನಾವು ಪಡುತ್ತಿರುವ ಪಾಡು, ನಾವು ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮ, ಇದೆಲ್ಲವನ್ನೂ ನಮ್ಮ ಜೀವನದ ಪ್ರತಿಯೊಂದು ಹಾಗು ಹೋಗುಗಳಲ್ಲಿ ನಾವು ತೆಗೆದುಕೊಂಡಿದ್ದರೆ ಇಂತಹ ಮಾರಕ ರೋಗಗಳು ನಮ್ಮನ್ನು ಸಮೀಪಿಸುತ್ತಿರಲಿಲ್ಲ.

ಇಲ್ಲಿ ಮತ್ತೊಂದು ವಿಷಯ ವ್ಯಕ್ತಪಡಿಸುವುದೇನೆಂದರೆ, ಕೊರೋಣ ವೈರಸ್, ಗಾಳಿಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗವಲ್ಲ. ಬದಲಾಗಿ ಒಬ್ಪರು ಮತ್ತೊಬ್ಬರೊಂದಿಗೆ ಪರಸ್ಪರ ಹತ್ತಿರ ಸಂಪರ್ಕ ಏರ್ಪಡಿಸಿದಾಗ,ಅಂದರೆ ಕೈಕುಲುಕುವುದು, ಚುಂಬಿಸುವುದು ಅಥವಾ ಇನ್ಯಾವುದೇ ರೀತಿಯಲ್ಲಿ ಒಬ್ಬರ ದೇಹ ಮತ್ತೊಬ್ಬರ ದೇಹದೊಂದಿಗೆ ಸಂಪರ್ಕವಾದಾಗ, ಅವರಲ್ಲಿ ಯಾರಾದರೊಬ್ಬರಿಗೆ ವೈರಸ್ ಸೋಂಕು ಇದ್ದಾಗ ಅದು ಸಂಪರ್ಕ ಮಾಡಿದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ ಅಥವಾ ವೈರಸ್ ಸೋಂಕು ಇದ್ದ ಒಬ್ಬ ವ್ಯಕ್ತಿ ಮುಟ್ಟಿದ ಸ್ಥಳ , ವಸ್ತುವನ್ನು ಇನ್ನೊಬ್ಬ ವ್ಯಕ್ತಿ ಮುಟ್ಟಿದಾಗ, ಅದು ಆತನಿಗೆ ಹರಡುತ್ತದೆ.

ಒಟ್ಟಾರೆಯಾಗಿ, ಕೋರೋಣ ಎಂಬ ಕಣ್ಣಿಗೆ ಕಾಣದ ಒಂದು ಸೂಕ್ಷ್ಮಾಣು ಜೀವಿ, ಇಡೀ ಜಗತ್ತನೇ ಬೆರಗಿಸಿ, .ಜನರ ಮನಸ್ಸಿನಲ್ಲಿ ಆತಂಕದ ಛಾಯೆ ಮೂಡಿಸಿದೆ. ನಾವು ಇನ್ನಾದರೂ ನಮ್ಮ ಜೀವನದಲ್ಲಿ ಹಲವಾರು ಮಾರ್ಪಾಡುಗಳನ್ನು ರೂಪುಗೊಳಿಸಬೇಕು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮನ್ನು ಸೃಷ್ಠಿಸಿದ ಒಬ್ಬ ಸೃಷ್ಠಿಕರ್ತನಿದ್ದಾನೆ ಎಂಬೂದನ್ನು ಮರೆಯಬಾರದು.

ಸೃಷ್ಠಿಕರ್ತನ ವಿಧಿಗೆ ನಾವು ತಲೆಬಾಗಲೇಬೇಕು. ಪ್ರಸ್ತುತವಾಗಿ ಜಗತ್ತಿನೆಲ್ಲೆಡೆ ನಿರ್ಮಾಣವಾಗಿರುವ ಪರಿಸ್ಥಿತಿ ಸರಿಹೊಂದಲು ಹಾಗೂ ಕೊರೋಣ ಎಂಬ ಮಾರಕ ವೈರಸ್ ಸಂಪೂರ್ಣವಾಗಿ ನಾಶಹೊಂದಲು ಸೃಷ್ಟಿಕರ್ತನೊಂದಿಗೆ ಪ್ರಾರ್ಥಿಸೋಣ .

error: Content is protected !! Not allowed copy content from janadhvani.com