janadhvani

Kannada Online News Paper

ಕುದ್ರೋಳಿ: ವಕ್ಫ್ ಆಸ್ತಿಯನ್ನು ಕಬಳಿಸಿದ್ದ BRIGHT MODEL SCHOOL ಮತ್ತೆ ನಡುಪಳ್ಳಿ ಮಸೀದಿ ವಶಕ್ಕೆ

ಮಂಗಳೂರು,ಮಾ.19: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾವಣೆಗೊಂಡಿರುವ ಕುದ್ರೋಳಿ,ನಡುಪಳ್ಳಿ ಜುಮಾ ಮಸೀದಿ ಇದರ ಅಧೀನದಲ್ಲಿರುವ ( ಹೆಚ್ಚುವರಿ ವಕ್ಫ್ ಆಸ್ತಿ ) 15 ಸೆಂಟ್ಸ್ ಭೂಮಿಯಲ್ಲಿ ಅತಿಕ್ರಮಿಸಿ ನಿರ್ಮಿಸಲಾಗಿದ್ದ ‘BRIGHT MODEL SCHOOL’ ನ್ಯಾಯಾಲಯದ ಆದೇಶದಂತೆ ಗುರುವಾರ ಮರು ವಶಕ್ಕೆ ಪಡೆಯಲಾಗಿದೆ.

ಕುದ್ರೋಳಿಯ ನಡುಪಳ್ಳಿ ಜುಮಾ ಮಸೀದಿ ಅಧೀನದ 15 ಸೆಂಟ್ಸ್ ಜಾಗದಲ್ಲಿ ಮಸೀದಿ ಆಡಳಿತಮಂಡಳಿಯಿಂದ ಕೈವಶಪಡಿಸಿ ಖಾಸಗಿ ಶಾಲೆಯೊಂದು ಕಾರ್ಯಾಚರಿಸುತ್ತಿತ್ತು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾಯಿತ ಈ ಜಾಗದ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ಇದೀಗ ನ್ಯಾಯಾಲಯದ ಆದೇಶದಂತೆ ಈ ಜಾಗವನ್ನುದಿನಾಂಕ 19-03-2020 ರಂದು ಗುರುವಾರ ಸಂಜೆ ಗಂಟೆ 05 .00ಕ್ಕೆ ಸಾರ್ವಜನಿಕರ ಸಮ್ಮುಖದಲ್ಲಿ  ಮಸೀದಿಯ ಸ್ವಾಧೀನಕ್ಕೆ ಪಡೆಯಲಾಗಿದೆ. ಶಾಲೆಯ ಮುಖ್ಯ ಶಿಕ್ಷಕರ ಕಚೇರಿ ಹಾಗೂ ಮುಖ್ಯ ಗೇಟಿಗೆ ಬೀಗಮುದ್ರೆ ಜಡಿಯಲಾಗಿದೆ.  ಅತಿಕ್ರಮಣ ಪ್ರವೇಶವನ್ನು ನಿಷೇಧಿಸಲಾಗಿದೆ.

error: Content is protected !! Not allowed copy content from janadhvani.com