janadhvani

Kannada Online News Paper

ಕೊರೋನಾ ತಡೆಗೆ ಕಠಿಣ ಕ್ರಮ: ಮಾ.22 ರಿಂದ ಅಂತಾರಾಷ್ಟ್ರೀಯ ವಿಮಾನಗಳು ಬಂದ್

ನವದೆಹಲಿ: ಕೊರೋನಾ ತಡೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಮಾ.22 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಕೊರೋನಾ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಾ.22 ರಿಂದ ಮಾ.29 ವರೆಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಲ್ಯಾಂಡಿಂಗ್ ಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ವೈದ್ಯರು, ಸರ್ಕಾರಿ ಉದ್ಯೋಗಿಗಳ ಹೊರತಾಗಿ 65 ವರ್ಷಗಳ ಮೇಲ್ಪಟ್ಟ ನಾಗರಿಕರೆಲ್ಲರೂ ಮನೆಯಲ್ಲೇ ಇರುವುದಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ, ಈ ಸಲಹೆ 10 ವರ್ಷದ ಒಳಗಿನ ಮಕ್ಕಳಿಗೂ ಅನ್ವಯವಾಗಲಿದೆ.

ಇದೇ ವೇಳೆ ರೈಲ್ವೆ ಹಾಗೂ ಏರ್ ಲೈನ್ ಗಳಿಗೂ ಸಲಹೆಗಳನ್ನು ರವಾನೆ ಮಾಡಿರುವ ಕೇಂದ್ರ ಸರ್ಕಾರ ವಿದ್ಯಾರ್ಥಿಗಳು, ರೋಗಿಗಳು, ವಿಶೇಷ ಚೇತನರನ್ನು ಹೊರತುಪಡಿಸಿ ಬೇರೆ ಯಾರಿಗೂ ರಿಯಾಯಿತಿ ದರದಲ್ಲಿ ಪ್ರಯಾಣ ಸೌಲಭ್ಯ ಕಲ್ಪಿಸದಂತೆ ಸೂಚನೆ ನೀದಿದೆ.

ಖಾಸಗಿ ಕಂಪನಿಗಳ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕಾರ್ಯನಿರ್ವಹಣೆ) ಮಾಡುವುದಕ್ಕೆ ಸೂಚಿಸಲಾಗಿದೆ.

error: Content is protected !! Not allowed copy content from janadhvani.com