janadhvani

Kannada Online News Paper

Covid 19: ದ.ಕ.ಜಿಲ್ಲೆಯಲ್ಲಿ ಸೆಕ್ಷನ್ 144(3) ಜಾರಿ- ಗಲ್ಫ್ ಯಾತ್ರಿಕರ ಕಠಿಣ ತಪಾಸಣೆ

ಮಂಗಳೂರು,ಮಾ.18 : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಡಳಿತವು ಆದೇಶ ಹೊರಡಿಸಿದೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದ.ಕ ಜಿಲ್ಲೆಯಲ್ಲಿ ಜರುಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾತ್ರೆ ಉತ್ಸವ ಸಾಮೂಹಿಕ ವಿವಾಹ ಗಳು ಹಾಗೂ ಇನ್ನಿತರ ಜನಸಂದಣಿಯಂತಹಾ ಕಾರ್ಯಕ್ರಮಗಳಿಂದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸದ್ರಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹತೋಟಿಗೆ ತರಲು ಜಿಲ್ಲಾಡಳಿತವು ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ಆದೇಶವನ್ನು ಹೊರಡಿಸಿದೆ.

  • ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ನಡೆಯುವ ಉತ್ಸವ ಜಾತ್ರೆಗಳಲ್ಲಿ ಸಿಬ್ಬಂದಿ ಮಾತ್ರ ಭಾಗವಹಿಸತಕ್ಕದ್ದು. ಸಾರ್ವಜನಿಕ ರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
  • ದೇವಸ್ಥಾನಗಳಲ್ಲಿ ದೇವರ ದರ್ಶನವನ್ನು ಹೊರತು ಪಡಿಸಿ ಎಲ್ಲಾ ಸೇವೆ ಹಾಗೂ ತಂಗುವುದನ್ನು ರದ್ದು ಪಡಿಸಲಾಗಿದೆ.
  • ದೇವಸ್ಥಾನ , ಮಸೀದಿ ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು‌ ಪ್ರವೇಶಿಸಬಾರದು.
  • ಬೇಸಿಗೆ ಶಿಬಿರ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸದಂತೆ ‌ಸೂಚಿಸಲಾಗಿದೆ.
  • ಬೀಚ್ ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
  • ಮದುವೆ ಇನ್ನಿತರ ಹೆಚ್ಚಿನ ಸಾರ್ವಜನಿಕರು ಸೇರುವ ಸಮಾರಂಭವನ್ನು ಸರಳವಾಗಿ ನಡೆಸುವಂತೆ ಸೂಚಿಸಿದೆ.
  • ಪಿಜಿಗಳಿಗೂ ಕೆಲವೊಂದು ಕಟ್ಟುನಿಟ್ಟಿನ ಸೂಚನೆಯನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಸಿಂದೂ ರೂಪೇಶ್ ಆದೇಶಿಸಿದ್ದಾರೆ.

ದುಬೈ ಮತ್ತು ಇತರ ರಾಷ್ಟ್ರಗಳಿಂದ ಬರುವ ಯಾತ್ರಿಕರ ಗಮನಕ್ಕೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೋನ ವೈರಸ್ ತಪಾಸಣೆಯನ್ನು ತೀವ್ರಗೊಳಿಸಿದ್ದು, ದುಬೈ ಮತ್ತು ಇತರ ರಾಷ್ಟ್ರಗಳಿಂದ ಬರುವ ಯಾತ್ರಿಕರು ಇದನ್ನು ಗಮನಿಸಿ ಸಹಕರಿಸುವಂತೆ ತಿಳಿಸಲಾಗಿದೆ.

ಯಾತ್ರಿಕರನ್ನು 3 ಕ್ಯಾಟಗರಿಗಳಾಗಿ ವಿಂಗಡಿಸಲಾಗುವುದು.
1. Covid 19 ಸೋಂಕಿನ ಲಕ್ಷಣಗಳು ಕಾಣುವ ಯಾತ್ರಿಕರನ್ನು ವಿಶೇಷ ಅಂಬುಲೆನ್ಸ್ ಮೂಲಕ ಕೊರೋನ ರೋಗಿಗಳ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ರವಾನಿಸುವುದು.

2. Covid 19 ನ ಯಾವ ಲಕ್ಷಣಗಳಿಲ್ಲದಿದ್ದರೂ 60 ವರ್ಷ ಮೇಲ್ಪಟ್ಟವರನ್ನು, ಡಯಾಬಿಟೀಸ್- ಬಿ.ಪಿ ಮುಂತಾದ ರೋಗಗಳಿರುವವರನ್ನು ಮಂಗಳೂರು ಪರಿಸರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ವೈಧ್ಯಕೀಯ ನಿಗಾದಲ್ಲಿರಿಸುವುದು.

3. ರೋಗದ ಯಾವ ಲಕ್ಷಣಗಳೂ ಇಲ್ಲದ, ಆರೋಗ್ಯವಂತ ಜನರನ್ನು ಅವರವರ ಮನೆಯಲ್ಲೇ 14 ದಿನಗಳ ಕಾಲ ಕೊರನ್ ಟೈನ್ ಅಥವಾ ಸಂಪರ್ಕದಿಂದ ದೂರ (ಶೇಕ್ ಹ್ಯಾಂಡ್, ಹಗ್‌ ಇತ್ಯಾದಿ) ವಿರುವಂತೆ ನೋಡಿಕೊಳ್ಳುವುದು. ಈ ಬಗ್ಗೆ ಆರೋಗ್ಯ ಇಲಾಖೆ ಇಂತಹ ಯಾತ್ರಿಕರ ಬಗ್ಗೆ ನಿಗಾ ವಹಿಸುತ್ತದೆ. ಆರೋಗ್ಯ ಇಲಾಖೆಯ ಪ್ರತಿನಿಧಿಗಳು ಇಂತಹ ಯಾತ್ರಿಕರ ಮನೆಗೆ ಭೇಟಿ, ದೂರವಾಣಿ ಕರೆಗಳ ಮೂಲಕ ಸಂಪರ್ಕದಿಂದ ದೂರವಿರುವ ಬಗ್ಗೆ ಖಚಿತಪಡಿಸುತ್ತದೆ.

ಈ ಎಲ್ಲಾ ಮುಂಜಾಗ್ರತೆಗಳು ಯಾತ್ರಿಕರ ಕುಟುಂಬ ಸದಸ್ಯರಿಗೆ ರೋಗ ಹರಡುವುದನ್ನು ನಿಯಂತ್ರಿಸಲಿಕ್ಕಾಗಿರುವುದರಿಂದ ಎಲ್ಲಾ ಯಾತ್ರಿಕರು, ಯಾತ್ರಿಕರ ಕುಟುಂಬದವರು ಜಿಲ್ಲಾಡಳಿತದೊಂದಿಗೆ ಸಹಕರಿಸ ಬೇಕಾಗಿದೆ.

error: Content is protected !! Not allowed copy content from janadhvani.com