janadhvani

Kannada Online News Paper

ವಿಮಾನ ರದ್ದು: ಇಖಾಮಾ, ಮರು ಪ್ರವೇಶ, ಸಂದರ್ಶಕ ವೀಸಾಗಳ ಅವಧಿ ವಿಸ್ತರಣೆ- ಜವಾಝಾತ್

ರಿಯಾದ್: ಭಾರತ ಸೇರಿದಂತೆ ವಿವಿಧ ದೇಶಗಳಿಗೆ ವಿಮಾನಯಾನ ಮೊಟಕುಗೊಳಿಸಲಾದ ಕಾರಣದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲರಿಗೂ ಇಖಾಮಾ ಅವಧಿ, ಮರು ಪ್ರವೇಶ ಅವಧಿ ಮತ್ತು ಸಂದರ್ಶಕ ವೀಸಾ ಅವಧಿಯನ್ನು ವಿಸ್ತರಿಸುವುದಾಗಿ ಜವಾಝಾತ್ ಟ್ವೀಟ್ ಮಾಡಿದೆ.

ನಿರ್ಬಂಧಗೊಳಿಸಿದ ನಿರ್ಧಾರವನ್ನು ಘೋಷಿಸಿದಾಗ ದೇಶದಲ್ಲಿ ಇದ್ದ ಎಲ್ಲರಿಗೂ ಇದು ಪ್ರಯೋಜನವಾಗಲಿದೆ. ವಿದೇಶಿಯರ ಪ್ರಶ್ನೆಗಳಿಗೆ ಉತ್ತರಿಸಿದ ಜವಾಝಾತ್, ಪ್ರಯಾಣ ನಿಷೇಧ ಜಾರಿಗೆ ಬಂದಾಗ, ಮರು ಪ್ರವೇಶ, ಇಖಾಮಾ ಕಾಲಾವಧಿ ಮತ್ತು ವೀಸಾ ಹೊಂದಿದ್ದ ಎಲ್ಲರಿಗೂ ಇದರ ಪ್ರಯೋಜನ ಲಭಿಸಲಿದೆ ಎಂದಿದೆ.

ಮರು-ಪ್ರವೇಶ ವೀಸಾಗಳನ್ನು ಆಟೋಮ್ಯಾಟಿಕ್ ಆಗಿ ವಿಸ್ತರಿಸಿ ನೀಡಲಾಗುತ್ತದೆ. ವಿಮಾನವನ್ನು ಮರುಸ್ಥಾಪಿಸುವವರೆಗೆ ಇದನ್ನು ವಿಸ್ತರಿಸಿ ನೀಡಲಾಗುವುದು. ಇದರಿಂದಾಗಿ ಸೌದಿಗೆ ಮರಳುವುದಕ್ಕೆ ಯಾವುದೇ ತೊಂದರೆ ಉಂಟಾಗದು. ರೀ ಎಂಟ್ರಿ ವಿಸಾದಲ್ಲಿ ಊರಲ್ಲಿರುವವರಿಗೂ ಮರು-ಪ್ರವೇಶ ವೀಸಾ ಮುಕ್ತಾಯವಾಗಿದ್ದರೆ, ಅದೇ ರೀತಿಯಲ್ಲಿ ವಿಸ್ತರಿಸಲಾಗುವುದು. ಅದರ ಬಗ್ಗೆ ಎಲ್ಲಾ ವಿವರಗಳನ್ನು ಜವಾಝಾತ್ ಬಿಡುಗಡೆ ಮಾಡಲಿದೆ.

ಸೌದಿಗೆ ವಿವಿಧ ರೀತಿಯ ಸಂದರ್ಶಕರ ವೀಸಾಗಳಲ್ಲಿ ಬಂದು ಉಳಿದವರ ವಿಸಾ ಅವಧಿಯನ್ನೂ ವಿಸ್ತರಿಸಲಾಗುವುದು. ಇದಕ್ಕಾಗಿ ಹತ್ತಿರದ ಜಾವಾಝಾತ್ ಕಚೇರಿಗೆ ಹೋಗಿ ಶುಲ್ಕವನ್ನು ಪಾವತಿಸಬೇಕು. ಸಂದರ್ಶಕರ ವೀಸಾಗಳಲ್ಲಿ ಗರಿಷ್ಠ ಅವಧಿ 180 ದಿನಗಳು ಕಳೆದಿದ್ದರೂ ಕಾಲಾವಧಿ ವಿಸ್ತರಿಸುವುದಾಗಿ ಜವಾಝಾತ್ ಹೇಳಿದೆ.

ಸೌದಿ ಅರೇಬಿಯಾದ ವಿದೇಶಿಯರ ಸಮಸ್ಯೆಯನ್ನು ಪರಿಹರಿಸಲು ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ವಿದೇಶೀಯರಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಜಾವಾಝಾತ್ ತಿಳಿಸಿದೆ.

error: Content is protected !! Not allowed copy content from janadhvani.com