janadhvani

Kannada Online News Paper

ವಿಮಾನ ಸ್ಥಗಿತ: ಜಿದ್ದಾದಲ್ಲಿ ಸಿಲುಕಿರುವ ಉಮ್ರಾ ಯಾತ್ರಿಕರು-ಸಹಾಯವಾಣಿ ಆರಂಭ

ರಿಯಾದ್: ಸೌದಿಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿದ ಬಳಿಕ ಉಮ್ರಾ ಯಾತ್ರಿಕರು ಜಿದ್ದಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಆದಷ್ಟು ಬೇಗ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೂತಾವಾಸ ತಿಳಿಸಿದೆ. ಊರಿಗೆ ಮರಳಲು ಹೆಣಗಾಡುತ್ತಿರುವ ಉಮ್ರಾ ಯಾತ್ರಿಕರಿಗೆ ಸಹಾಯ ಮಾಡಲು ಕಾನ್ಸುಲೇಟ್ ವತಿಯಿಂದ
ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಕೋವಿಡ್ 19 ವೈರಸ್ ಹರಡಿರುವ ಹಿನ್ನೆಲೆಯಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ನಿಲ್ಲಿಸಿದ ಕಾರಣ ಭಾರತದ ವಿವಿಧ ಕಡೆಯಿಂದ ಬಂದ ಉಮ್ರಾ ಯಾತ್ರಿಕರು ಜಿದ್ದಾದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಆದಷ್ಟು ಬೇಗ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿದ್ದಾದ ಭಾರತೀಯ ದೂತಾವಾಸದ ಮೂಲಗಳು ತಿಳಿಸಿವೆ. ಇದಕ್ಕಾಗಿ ಉಮ್ರಾ ಗುಂಪು ಮತ್ತು ವಿಮಾನಯಾನ ಸಂಸ್ಥೆಗಳ ನಡುವೆ ಚರ್ಚೆಗಳು ನಡೆಯುತ್ತಿವೆ.

ಅವರು ಈ ತಿಂಗಳ 9 ರಂದು ಹಿಂದಿರುಗಬೇಕಿತ್ತು. ಸೌದಿಯು ನಿರ್ಬಂಧ ಹೇರುವ ಮುನ್ನ ಆಗಮಿಸಿದವರ ಪೈಕಿ ಮರಳಲು ಕಷ್ಟಪಡುತ್ತಿರುವವರು ಸಹಾಯವಾಣಿಯ ಮೂಲಕ ತಿಳಿಸುವಂತೆ ಭಾರತೀಯ ದೂತಾವಾಸ ತಿಳಿಸಿದೆ. ಮರಳಲು ಸಹಾಯದ ಅಗತ್ಯವಿರುವವರು 00966 55 44 03 02 3 ಗೆ ಕರೆ ಮಾಡಲು ಕೋರಲಾಗಿದೆ.

error: Content is protected !! Not allowed copy content from janadhvani.com