janadhvani

Kannada Online News Paper

ಯುಎಇಯಿಂದ ವಿಮಾನಯಾನ ದರ ಗಣನೀಯ ಇಳಿಕೆ

ದುಬೈ: ಯುಎಇಯಿಂದ ವಿವಿಧ ಕಡೆಗೆ ವಿಮಾನಯಾನ ಟಿಕೆಟ್‌ಗಳ ದರವು ಗಣನೀವಾಗಿ ಕಡಿಮೆಯಾಗಿದೆ. ವಿಮಾನಯಾನ ಸಂಸ್ಥೆಗಳು ಯಾತ್ರೆ ಮೊಟಕುಗೊಳಿಸುವುದಾದರೆ ಟಿಕೆಟ್ ದರವನ್ನು ಹಿಂದಿರುಗಿಸುವುದಕ್ಕೂ ತಯಾರಿದೆ.

ಮಾರ್ಚ್ 13 ರಿಂದ ಮಾರ್ಚ್ 20 ರವರೆಗೆ, ಕೊಚ್ಚಿನ್‌ಗೆ ತೆರಳುವ ವಿಮಾನ ದರವನ್ನು ಪ್ರಕಟಿಸಿದ್ದು, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸರಾಸರಿ 698 ದಿರ್ಹಂ ನಿಗದಿಪಡಿಸಿದೆ. ಎಮಿರೇಟ್ಸ್ ಏರ್ಲೈನ್ ಅದೇ ಪ್ರದೇಶಕ್ಕೆ 895 ಟಿಕೆಟ್ ದರವನ್ನು ಆಫರ್ ಮಾಡಿದೆ. ಮುಂಬೈಗೆ ಟಿಕೆಟ್ 660 ದಿರ್ಹಂ ಆಗಿದ್ದು, ದುಬೈನಿಂದ ಕರಾಚಿಗೂ ಟಿಕೆಟ್ ದರವನ್ನು ಇಳಿಸಲಾಗಿದ್ದು, 862 ದಿರ್ಹಂ ನಿಗದಿಪಡಿಸಿದೆ.

ನ್ಯೂಯಾರ್ಕ್‌ಗೆ ಸ್ಟಾಪ್ ಓವರ್ ಫ್ಲೈಟ್ ಟಿಕೆಟ್ 1,938 ದಿರ್ಹಂಗೆ ಲಭ್ಯವಿದೆ. ಎಮಿರೇಟ್ಸ್ ನೇರ ವಿಮಾನಗಳ ದರವು 4,225 ದಿರ್ಹಂ ಆಗಿದೆ. ಶಾರ್ಜಾ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಿಂದ ಕೂಡ ವಿಮಾನ ದರಗಳು ಇಳಿಕೆಯಾಗಿವೆ.

ಕೆಲವು ವಿಮಾನಗಳು ಮಾರ್ಗಗಳನ್ನು ತ್ಯಜಿಸುವ ಅಥವಾ ಸಂಪೂರ್ಣವಾಗಿ ಸ್ಥಗಿತಗೊಳಿಸುವುದರಿಂದ ಇನ್ನಷ್ಟು ಇಳಿಯುವ ಸಂಭವವಿದೆ. ಆದರೆ ದೇಶದ ನಾಗರಿಕರು ಮತ್ತು ನಿವಾಸಿಗಳು ಎಲ್ಲಾ ಅನಗತ್ಯ ಪ್ರಯಾಣವನ್ನು ತಪ್ಪಿಸುತ್ತಿದ್ದಾರೆ ಎನ್ನಲಾಗಿದೆ.

error: Content is protected !! Not allowed copy content from janadhvani.com