ಒರು ಅಡಾರ್ ಲವ್; ‘ಮಾಣಿಕ್ಯಾ ಮಲರಾಯ ಪೂವಿ’ ಹಾಡು ಹಿಂಪಡೆದ ಚಿತ್ರತಂಡ!

ಕೊಚ್ಚಿ/ಹೈದರಾಬಾದ್:(ಜನಧ್ವನಿ ವರದಿ) ಸಾಮಾಜಿಕ ಜಾಲತಾಣಗಳಲ್ಲಿ ಎರಡು ಮೂರು ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ‘ಒರು ಅಡಾರ್ ಲವ್’ ಎಂಬ ಮಲಯಾಳಂ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡನ್ನು ಹಿಂಪಡೆಯುವುದಾಗಿ ನಿರ್ದೇಶಕ ಉಮರ್ ಲುಲು ಘೋಷಿಸಿದರು. ಇಸ್ಲಾಮಿನ ಪಾರಂಪರಿಕ ಹಾಡಿಗೆ ಇಸ್ಲಾಂ ನಿಷೇಧಿಸಿದ ವಿಡಿಯೋ ತುಣುಕು ಹಾಕಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ಚಿತ್ರೀಕರಿಸಿದ್ದಾರೆಂದು ಆಕ್ಷೇಪಿಸಿ ಹೈದರಾಬಾದಿನ ಫಾರೂಖ್ ನಗರದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಅಬ್ದುಲ್ಲಾ ಸೇರಿದಂತೆ ಸುಮಾರು 60 ಮಂದಿ ಮುಸ್ಲಿಂ ಯುವಕರು ನಿರ್ದೇಶಕ ಉಮರ್ ಲುಲು, ನಟಿ ಪ್ರಿಯ ಪ್ರಕಾಶ್ ವಾರಿಯಾರ್ ಮತ್ತು ನಟ ರೋಷನ್ ಮುಹಮ್ಮದ್‌ ವಿರುದ್ಧ ಫಲಕ್ ನೂಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ಉಮರ್ ಲುಲು ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟಾದ ಕಾರಣ ಹಾಡನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ.

ಪ್ರವಾದಿ ಮುಹಮ್ಮದ್ ಪೈಗಂಬರ್ ಮತ್ತು ಖದೀಜ ಬೀವಿ ವಿವಾಹ ಕುರಿತಾದ ದಶಕಗಳ ಇತಿಹಾಸವಿರುವ ಮಾಣಿಕ್ಯ ಮಲರಾಯ ಪೂವಿ ಹಾಡನ್ನು ಶಾಲಾ ಬಾಲಕ ಬಾಲಕಿಯರ ನಡುವೆ ನಡೆಯುವ ಪ್ರಣಯ ಪ್ರೇಮದಾಟಕ್ಕೆ ಹಿನ್ನೆಲೆ ಗಾಯನವಾಗಿ ನೀಡಲಾಗಿತ್ತು. ಈ ವಿಡಿಯೋ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಸದ್ದು ಕೂಡ ಮಾಡಿತ್ತು. ಒಂದು ವಿಭಾಗ ಜನ ನಟಿ ಪ್ರಿಯಾಳ ನಟನೆಗೆ ಮರುಳಾದರೆ ಮತ್ತೊಂದು ವಿಭಾಗ ಜನ ಹಾಡಿನ ವಿರುದ್ಧ ರೊಚ್ಚಿಗೆದ್ದಿದ್ದರು. ಇದೀಗ ಹಾಡು ಹಿಂಪಡೆಯುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಚಿತ್ರತಂಡ ಮಾಡಿದೆ.

ಕೃಪೆ: ಸಿರಾಜ್ ನ್ಯೂಸ್

12 thoughts on “ಒರು ಅಡಾರ್ ಲವ್; ‘ಮಾಣಿಕ್ಯಾ ಮಲರಾಯ ಪೂವಿ’ ಹಾಡು ಹಿಂಪಡೆದ ಚಿತ್ರತಂಡ!

Leave a Reply

Your email address will not be published. Required fields are marked *

error: Content is protected !!