janadhvani

Kannada Online News Paper

ಕೋವಿಡ್ 19 ಭೀತಿ: ಸೌದಿಯಿಂದ ಏಳು ದೇಶಗಳಿಗೆ ಪ್ರಯಾಣ ನಿಷೇಧ

ರಿಯಾದ್: ಸೌದಿ ಅರೇಬಿಯಾದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟ ಕಾಲದವರೆಗೆ ಮುಚ್ಚಲಾಗಿದ್ದು, ನಿವಾಸಿಗಳು ಮತ್ತು ಅನಿವಾಸಿಗಳು ಯುಎಇ, ಕುವೈತ್ ಮತ್ತು ಬಹ್ರೈನ್ ಸೇರಿದಂತೆ ಏಳು ದೇಶಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ಈವರೆಗೆ 11ಮಂದಿಗೆ ಕರೋನ ಸೋಂಕು ತಗುಲಿರುವುದಾಗಿ ದೃಢೀಕರಿಸಲಾಗಿದೆ.

ಕೊರೋನ ಸೊಂಕು ಹರಡಿರುವ ಗುಮಾನಿ ಮೇಲೆ ಸೌದಿ ಅರೇಬಿಯಾದಲ್ಲಿ ಸುಮಾರು 300 ಜನರು ನಿರೀಕ್ಷಣೆಯಲ್ಲಿದ್ದಾರೆ. ಇದುವರೆಗಿನ ಅವರ ಫಲಿತಾಂಶಗಳು ನಕಾರಾತ್ಮಕವಾಗಿವೆ. ಸೌದಿ ಶಾಲೆಗಳಲ್ಲಿ ಯಾವುದೇ ಕರೋನ ವೈರಸ್ ಪ್ರಕರಣ ದಾಖಲಾಗಿಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ, ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿ ಕಾಲದವರೆಗೆ ಮುಚ್ಚಲಾಗಿದೆ. ಹಿಂದೆಯೇ ನಿಶ್ಚಯಿಸಿರುವಂತೆ ದಮ್ಮಾಂ ಭಾರತೀಯ ಶಾಲೆಯಲ್ಲಿ ಸಿಬಿಎಸ್‌ಇ ಪರೀಕ್ಷೆ ನಡೆಯಲಿದೆ. ತರಗತಿಗಳು ನಷ್ಟವಾಗುವುದನ್ನು ತಡೆಯಲು ಸಚಿವಾಲಯದ ಅಡಿಯಲ್ಲಿ ದೂರಶಿಕ್ಷಣ ತರಗತಿಗಳು ನಡೆಯಲಿವೆ. ಮಸೀದಿಗಳ ಬೋಧನಾ ತರಗತಿಗಳನ್ನು ಕೂಡ ರದ್ದುಗೊಳಿಸಲಾಗಿದೆ.

ಕರೋನದ ಹಿನ್ನೆಲೆಯಲ್ಲಿ ಸೌದಿ ಪ್ರಜೆಗಳು ಮತ್ತು ವಿದೇಶಿಯರಿಗೆ ಯುಎಇ, ಬಹ್ರೈನ್, ಕುವೈತ್, ಲೆಬನಾನ್, ಸಿರಿಯಾ, ದಕ್ಷಿಣ ಕೊರಿಯಾ, ಈಜಿಪ್ಟ್, ಇಟಲಿ ಮತ್ತು ಇರಾಕ್ ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಪ್ರಯಾಣ ನಿಷೇಧಿಸಲಾದ ಏಳು ದೇಶಗಳ ಪಟ್ಟಿಯಲ್ಲಿ ಭಾರತ ಇಲ್ಲ. ಕೊರೋನ ಪತ್ತೆಯಾದ ಪೂರ್ವ ಪ್ರಾಂತ್ಯದ ಖತೀಫ್‌ಗೆ ಹೋಗುವ ಎಲ್ಲಾ ಮಾರ್ಗಗಳನ್ನು ತಡೆಯಲಾಗಿದೆ.

error: Content is protected !! Not allowed copy content from janadhvani.com